ಸಾರ್ವಜನಿಕರ ಹಿತದೃಷ್ಠಿಯಿಂದ ರಸ್ತೆ ಅಗಲೀಕರಣ : ಟಿ.ರಘುಮೂರ್ತಿ

ಚಳ್ಳಕೆರೆ

    ನಗರದ ಅಜ್ಜಯ್ಯನಗುಡಿ ರಸ್ತೆಯನ್ನು ಅಗಲೀಕರಣಗೊಳಿಸುವುದಲ್ಲಿ ಯಾವುದೇ ರಾಜಕೀಯ ದುರುದ್ದೇಶ ಅಡಗಿಲ್ಲ. ಬದಲಾಗಿ ಈ ಭಾಗದ ಸಾವಿರಾರು ಜನರು ನೂರಾರು ವಾಹನಗಳು ಪ್ರತಿ ನಿಮಿಷಗಳಲ್ಲೂ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಸಾರ್ವಜನಿಕರಿಗೆ ಕಿರಿಕಿರಿ  ಉಂಟಾಗಿದೆ, ಅಪಘಾತಗಳು ಹೆಚ್ಚುತ್ತಿವೆ ರಾಜ್ಯ ಸರ್ಕಾರ ಈ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮಾನ್ಯತೆ ಮಾಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಯನ್ನು ವಿಸ್ತರಣೆ ಮಾಡಲಾಗುತ್ತಿದೆ. ಸಾರ್ವಜನಿಕರು ಯಾವುದೇ ರೀತಿಯ ಪ್ರತಿರೋಧ ಒಡ್ಡದೆ ಸಹಕಾರ ನೀಡಬೇಕೆಂದು ಕ್ಷೇತ್ರದ ಶಾಸಕ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾದ ಟಿ.ರಘುಮೂರ್ತಿ ತಿಳಿಸಿದರು.

    ಅವರು, ಗುರುವಾರ ಮಧ್ಯಾಹ್ನ ಇಲ್ಲಿನ ಅಜ್ಜಯ್ಯನಗುಡಿ ರಸ್ತೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಆಹವಾಲನ್ನು ಆಲಿಸಲು ಆಗಮಿಸಿದ್ದು, ಈ ಬಗ್ಗೆ ಇಲ್ಲಿನ ಜನತೆಯ ಪ್ರಾಮಾಣಿಕ ಅನಿಸಿಕೆಗಳ ಬಗ್ಗೆ ಪತ್ರಿಕೆ ಸುಧೀರ್ಘ ವರದಿ ಮಾಡಿದ ಹಿನ್ನೆಲೆಯಲ್ಲಿ ಶಾಸಕರು ಭೇಟಿ ನೀಡಿ ಎಲ್ಲೆಡೆ ಓಡಾಡಿ ಅಂಗಡಿ ಮಾಲೀಕರು, ಪಾದಚಾರಿಗಳು ಹಾಗೂ ನಿವಾಸಿಗಳಿಗೆ ರಸ್ತೆ ವಿಸ್ತರಣೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು.

     ಈ ಹಂತದಲ್ಲಿ ನಗರಸಭಾ ಸದಸ್ಯ ವಿ.ವೈ.ಪ್ರಮೋದ್, ಸುಜಾತಪಾಲಯ್ಯ ಶಾಸಕರಲ್ಲಿ ಮನವಿ ಮಾಡಿ ರಸ್ತೆ ವಿಸ್ತರಣೆಯಾದಲ್ಲಿ ಇಲ್ಲಿನ ಬಹುತೇಕ ಬಡ ನಿವಾಸಿಗಳ ಮನೆಗಳು ತೆರವುಗೊಳಿಸಬೇಕಾಗಿದೆ. ಅವರಿಗೆ ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆ ಇಲ್ಲ. ಕಳೆದ ಸುಮಾರು 50 ವರ್ಷಗಳಿಂದ ಇಲ್ಲಿ ವಾಸವಿದ್ದು, ಅವರಿಗೆ ಬೇರೆ ಎಲ್ಲಿಯೂ ಆಸರೆ ಇರುವುದಿಲ್ಲ.

      ಆದರೆ, ಬಡವರು ಹೆಚ್ಚಿರುವ ಪ್ರದೇಶದಲ್ಲಿ ರಸ್ತೆ ಅಗಲೀಕರಣ ಅಳತೆಯನ್ನು ಕಡಿತಗೊಳಿಸಿ ಇಲ್ಲಿನ ಬಡ ನಿವಾಸಿಗಳಿಗೆ ರಿಯಾಯಿತಿ ತೋರುವಂತೆ ಶಾಸಕರಲ್ಲಿ ಮನವಿ ಮಾಡಿದರು.

      ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಟಿ.ರಘುಮೂರ್ತಿ, ಇತ್ತೀಚೆಗೆ ತಾನೇ ಸರ್ಕಾರ ಈ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತನೆಗೊಳಿಸಿ 15 ಮೀಟರ್ ಅಗಲದ ರಸ್ತೆ ನಿರ್ಮಿಸುವಂತೆ ನಿರ್ದೇಶನ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಸ್ತೆ ವಿಸ್ತರಣೆ ಕಾರ್ಯವನ್ನು ಕೈಗೊಳ್ಳಲಿದೆ. ಇಲ್ಲಿನ ಸಾರ್ವಜನಿಕರ ಮನವಿ ಮೇರೆಗೆ ನಾನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿಮ್ಮೆಲ್ಲರ ಪರವಾಗಿ ಮನವಿ ಮಾಡಿದ್ದು, ಕೆಲವು ಅಡಿಗಳಷ್ಟು ಮಾತ್ರ ವಿನಾಯಿತಿ ನೀಡುತ್ತಾರೆ. ಆದ್ದರಿಂದ ಎಲ್ಲರೂ ರಸ್ತೆ ವಿಸ್ತರಣೆಗೆ ಸಹಕರಿಸುವಂತೆ ತಿಳಿಸಿದರು.

        ಪೌರಾಯುಕ್ತ ಜೆ.ಟಿ.ಹನುಮಂತರಾಜು ಪ್ರತಿಕ್ರಿಯಿಸಿ, ಇಲ್ಲಿನ ಖಾಸಗಿ ಬಸ್ ನಿಲ್ದಾಣದಿಂದ ಎ.ಜಿ.ರಸ್ತೆಯ ಮಟನ್ ಮಾರುಕಟ್ಟೆಯ ತನಕ ಒಟ್ಟು 15 ಮೀಟರ್ ರಸ್ತೆ ನಿರ್ಮಾಣವಾಗಲಿದ್ದು, ಶಾಸಕರ ಸೂಚನೆಯಂತೆ ಮನೆಗಳು ಹೆಚ್ಚಿರುವ ಕಡೆ ಪಾದಾಚಾರಿಗಳ ಓಡಾಟದ ರಸ್ತೆಯ ಅಳತೆಯನ್ನು ಸೀಮಿತಗೊಳಿಸಿ ರಸ್ತೆ ವಿಸ್ತರಿಸಲಾಗುವುದ. ಮಟನ್ ಮಾರುಕಟ್ಟೆಯಿಂದ ಜಗಲ್ಯೂರಜ್ಜಯನ ದೇವಸ್ಥಾನದ ತನಕ 18 ಮೀಟರ್ ರಸ್ತೆ ನಿರ್ಮಾಣವಾಗಲಿದೆ ಎಂದರು.

       ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಜೆಇ ಲೋಕೇಶ್, ನಗರಸಭಾ ಸದಸ್ಯರಾದ ಸಿ.ಶ್ರೀನಿವಾಸ್, ಬಿ.ಟಿ. ರಮೇಶ್‍ಗೌಡ, ವಿರೂಪಾಕ್ಷಿ, ಚಳ್ಳಕೆರೆಯಪ್ಪ, ಮುಖಂಡರಾದ ಪಾಲಯ್ಯ, ಸಿ.ಟಿ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್, ಮಾಜಿ ಪುರಸಭಾ ಸದಸ್ಯರಾದ ಎಸ್.ಮುಜೀಬ್, ಆರ್.ಪ್ರಸನ್ನಕುಮಾರ್, ಫರೀದ್‍ಖಾನ್ ಮೊದಲಾದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap