ಚಿಕ್ಕನಾಯಕನಹಳ್ಳಿ :
ಬಿಳಿಗೆರೆಯಿಂದ ಸಾಸಲು ಕೆರೆಗೆ ನೀರು ಹರಿಸಲು ಆಗಿರುವ ಕಾಮಗಾರಿಯನ್ನು ವೀಕ್ಷಣೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ಸಾಸಲು ಕೆರೆಗೆ ಪ್ರಾಯೋಗಿಕವಾಗಿ ನೀರು ಹರಿಸಬೇಕು ಎಂದು ಸ್ಥಳದಲ್ಲಿದ್ದ ಹೇಮಾವತಿ ನಾಲಾ ಎಇಇ ರವರಿಗೆ ಸೂಚಿಸಿದರು.
ತಾಲ್ಲೂಕಿನ ಹೇಮಾವತಿ ನಾಲೆಯ ಕಾಮಗಾರಿ ವೀಕ್ಷಿಣಾ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇಂಜಿನಿಯರ್ ಗಳಿಗೆ ಚಾನೆಲ್ ನಲ್ಲಿ ಆಗಿರುವ ಕಾಮಗಾರಿಯನ್ನು ಪರಿಶೀಲಿಸಿದರು, ನಂತರ ಆಗಬೇಕಾಗಿರುವ ಕೆಲಸಗಳ ಬಗ್ಗೆ ಸೂಚನೆ ನೀಡಿ ತ್ವರಿತವಾಗಿ ಕೆಲಸ ಕೈಗೆತ್ತಿಕೊಳ್ಳುವಂತೆ ತಿಳಿಸಿದರು.
ಟೆನೆಲ್ ಗಳಲ್ಲಿ ಊಳು ತುಂಬಿದ್ದು ಅದನ್ನು ಶೀಘ್ರ ತೆರವುಗೊಳಿಸುವಂತೆ ಸಚಿವರು ಸೂಚಿಸದರು. ಬಿಳಿಗೆರೆಯಿಂದ ಸಾಸಲು ವರೆಗಿನ ಯೋಜನೆಗೆ 85ಕೋಟಿ ರೂ ಬಿಡುಗಡೆಯಾಗಿದ್ದು ಈ ವರೆಗೆ 65ಕೋಟಿ ರೂ ಖರ್ಚಾಗಿದೆ ಎಂದು ಹೇಮಾವತಿ ನಾಲಾ ಎ.ಇ.ಇ. ಸೈಯದ್ ಅಲಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
