ಸಾತ್ವಿಕ ಬದುಕಿನಿಂದ ಹೇಮರೆಡ್ಡಿ ಮಲ್ಲಮ್ಮ ಅಜರಾಮರ

ಚಿತ್ರದುರ್ಗ:

    ತಾಳ್ಮೆ, ಸಹನೆಯ ದ್ಯೋತಕವಾಗಿದ್ದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಅವರು ತಮ್ಮ ಸಾತ್ವಿಕ ಬದುಕಿನಿಂದಾಗಿಯೇ ಜಗತ್ತಿನಲ್ಲಿ ಎಲ್ಲರ ಜನಮಾನಸದಲ್ಲಿ ಅಜರಾಮರರಾಗಿ ಉಳಿದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪಯೋಜನಾ ಸಮನ್ವಯಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ಅವರು ಹೇಳಿದರು.

    ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಸರಳವಾಗಿ ಆಯೋಜಿಸಿದ್ದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

    ಮಹಾ ಮೇಧಾವಿಗಳು ಇತಿಹಾಸದ ಪುಟದೊಳಗೆ ಹಾಗೂ ಜನರ ಮನಸ್ಸಿನಲ್ಲಿ ನೂರಾರು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವುದು ಅವರು ಮಾಡಿದ ಸಾಧನೆಗಳಿಂದ. ಕೃತಿಗಳ ರಚನೆ, ಹೋರಾಟ, ಸಾಹಸ, ರಾಜಕೀಯ ಸಾಧನೆಗಳಿಂದಾದರೆ, ಇಂತಹ ಯಾವುದೇ ಸಾಧನೆ ಮಾಡದ, ಯಾವುದೇ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಅವರು ಸಾತ್ವಿಕವಾಗಿ ಬಾಳಿದ ಬಾಳ್ವೆಯಿಂದ ಮಹಾ ಮಾತೆಯಾಗಿ ಜನ ಮಾನಸದಲ್ಲಿ ನೂರಾರು ವರ್ಷಗಳ ಕಾಲ ಅಜರಾಮರರಾಗಿ ಉಳಿದಿದ್ದಾರೆ ಎಂದು ಬಣ್ಣಿಸಿದರು

     ಹೇಮರಡ್ಡಿ ಮಲ್ಲಮ್ಮನವರ ಬದುಕಿನ ಸವಾಲುಗಳೇ ಜೀವನದರ್ಶನ. ದೇಶದ ಹಲವಾರು ದಾರ್ಶನಿಕ ವಚನಕಾರ್ತಿಯರು, ಜೀವನವೆಂದರೆ ಏನು ಎಂಬುದನ್ನು ವಚನಗಳಲ್ಲಿ ಹೇಳಿದರೆ, ಹೇಮರಡ್ಡಿ ಮಲ್ಲಮ್ಮನವರು ಯಾವುದೇ ವಚನಗಳನ್ನು ರಚಿಸದಿದ್ದರೂ, ದಾರ್ಶನಿಕರ ವಚನಗಳಂತೆ ಬದುಕಿದ ಆದರ್ಶ ನಾರಿ. ಅವರ ಬದುಕೇ ಉಕ್ತಿಗಳಾಗಿವೆ ಎಂದರು

    ಇತಿಹಾಸದ ಪುಟಗಳನ್ನು ಗಮನಿಸಿದಾಗ ಹೇಮರಡ್ಡಿ ಮಲ್ಲಮ್ಮನವರ ಬದುಕು ಯಾವುದೇ ಸಾಹಿತ್ಯ ಅಥವಾ ಗ್ರಂಥಗಳಿಂದ ಜಗತ್ತನ್ನು ವ್ಯಾಪಿಸಲಿಲ್ಲ. ಬದಲಿಗೆ ಜನಪದರ ನುಡಿಗಳಲ್ಲಿ ಅವರು ಜೀವಂತವಾಗುಳಿದಿದ್ದಾರೆ. ದೇಶದ ಸಂಸ್ಕತಿಯನ್ನು ಎತ್ತಿಹಿಡಿದು, ಬದುಕನ್ನು ದಾರ್ಶನಿಕವಾಗಿಸಿಕೊಂಡ ಸಾಧ್ವಿಯರು ಅನೇಕ ಸಂಖ್ಯೆಯಲ್ಲಿದ್ದಾರೆ. ಹೇಮರಡ್ಡಿ ಮಲ್ಲಮ್ಮನವರು ತಾವು ಪಟ್ಟ ಪಾಡುಗಳನ್ನು ಹಾಡಾಗಿಸಿಕೊಂಡವರು. ಇಡೀ ಬದುಕನ್ನೇ ಮಹಾ ತಪಸ್ಸೆಂದು ತೋರಿಸಿಕೊಟ್ಟು, ಕಷ್ಟ ಕೋಟಲೆಗಳ ನಡುವಿನ ಜೀವನವನ್ನು ಸವಾಲಾಗಿ ಸ್ವೀಕರಿಸಿ, ಕಾಯಕವನ್ನೇ ಪೂಜೆಯಾಗಿಸಿಕೊಂಡವರು ಹೇಮರಡ್ಡಿ ಮಲ್ಲಮ್ಮನವರು ಎಂದು ವಿವರಿಸಿದರು

    ಹೆಣ್ಣು ಕೌಟುಂಬಿಕ ದೌರ್ಜನ್ಯಕ್ಕೆ ಸಿಲುಕಿದಾಗ, ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯಿತೆ ಎಂದು ನೊಂದುಕೊಳ್ಳುವವರೇ ಹೆಚ್ಚು, ಆದರೆ ಅಂತಹ ಹೆಣ್ಣು ಮಕ್ಕಳಿಗೆ ಅಂತಃಶಕ್ತಿಯನ್ನು ತುಂಬಿ, ಸ್ವಯಂ ಸಬಲೀಕರಣ ಸಾಧ್ಯ ಎಂಬುದನ್ನು ಮಹಾಸಾಧ್ವಿ ಮಲ್ಲಮ್ಮ ಮಾರ್ಗದರ್ಶಕರಂತೆ ಕಾಣುತ್ತಾರೆ.

     ಇಡೀ ಕುಟುಂಬದ ಕಣ್ತೆರೆಸಿ, ಅವಿಭಕ್ತ ಕುಟುಂಬದ ಪರಿಕಲ್ಪನೆ ಹಾಗೂ ಕೌಟುಂಬಿಕ ವ್ಯವಸ್ಥೆಯ ಮೌಲ್ಯವನ್ನು ಎತ್ತಿಹಿಡಿದರು. ಹೇಮರೆಡ್ಡಿ ಮಲ್ಲಮ್ಮನವರು ಅನೇಕ ಪವಾಡಗಳನ್ನು ಮಾಡಿದರು ಎಂಬುದಾಗಿ ಹೇಳಲಾಗಿದ್ದರೂ, ಬಸವಣ್ಣನವರ ನುಡಿಯಂತೆ ಪವಾಡಗಳನ್ನು ನಂಬುವುದಕ್ಕಿಂತ, ಸಾಧಕರ ನೈಜ ಜೀವನದ ಕುರಿತು, ಅವರ ಆದರ್ಶಗಳನ್ನು ಮಾದರಿಯಾಗಿಸಿಕೊಳ್ಳುವುದು ಸೂಕ್ತ ಎಂದು ಸಿ.ಎಂ. ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

      ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿಗಳು ಮಾತನಾಡಿ ಮಹನೀಯರ ಜಯಂತಿ ಆಚರಣೆಯಿಂದ ಆಯಾ ಕಾಲ ಘಟ್ಟದ ಮಾಹಿತಿಯೊಂದಿಗೆ ಯುವ ಜನತೆಗೆ ವಿಚಾರಧಾರೆಗಳು ಲಭ್ಯವಾಗುತ್ತವೆ. ಆಧುನಿಕ ಪ್ರಪಂಚದಲ್ಲಿ ಜೀವನ ಮೌಲ್ಯಗಳನ್ನು ಮರೆತು ಜೀವಿಸುತ್ತಿದಾರೆ, ಇಂತಹ ಮಹಾನೀಯರ ಜಯಂತಿಗಳಿಂದ ಅವರು ಬದುಕಿದ ರೀತಿ, ಅನುಸರಿಸಿದ ತತ್ವಗಳನ್ನು ಸ್ಮರಿಸುವುದರಿಂದ ವಿಚಾರೆಧಾರೆಗಳು ಎಲ್ಲರಿಗೂ ಉತ್ತಮ ಬದುಕು ಕಟ್ಟಿಕೊಳ್ಳುವಂತಾಗುತ್ತದೆ ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಸಿ. ಸಂಗಪ್ಪ, ಉಪವಿಭಾಗಧಿಕಾರಿ ವಿಜಯಕುಮಾರ್, ನಗರಸಭೆ ಪೌರಾಯುಕ್ತೆ ಲಕ್ಷ್ಮೀ, ಡಿ.ಡಿ.ಪಿ.ಐ ಎ.ಜಿ ಆಂಥೋನಿ ಹಾಗೂ ಸಮಾಜದ ವಿವಿಧ ಮುಖಂಡರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap