ಚಿತ್ರದುರ್ಗ
ಸಾವಿಗಿಂತ ಮೊದಲು ಬದುಕು ಸಾರ್ಥಕ ಮಾಡಿಕೊಳ್ಳದಿದ್ದರೆ ಬದುಕಿದ್ದು ವ್ಯರ್ಥ ಎಂಬುದನ್ನು ಅರಿಯಬೇಕು ಎಂದು ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಅನ್ನೇಹಾಳ್ ಗ್ರಾಮದ ಕರಿಯಮ್ಮ ದೇವಸ್ಥಾನ ಆವರಣದಲ್ಲಿ ಆದಿ ಕವಿ ಶ್ರೀಮಹರ್ಷಿ ವಾಲ್ಮೀಕಿಯ ಕಂಚಿನ ಪುತ್ಥಳಿಯ ಅನಾವರಣ ಮತ್ತು ಕರಿಯಮ್ಮ ದೇವಿ ಜಾತ್ರೆ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದರು
ಬೇಟೆಯಾಡಿಕೊಂಡು ಜೀವನ ಸಾಗಿಸುತ್ತಿದ್ದ ಆತ ಗುರುವಿನ ತತ್ವದಿಂದ ಬದಲಾವಣೆಯಾದ ಮಹಾನ್ ವ್ಯಕ್ತಿ ವಾಲ್ಮೀಕಿ. ಜೀವನ ಎಂಬುದು ಗಾಳಿಗೆ ಇಟ್ಟ ದೀಪ ಎಂದು ಅರಿತುಕೊಳ್ಳಬೇಕು. ದೇಹದ ಒಳಗಿನ ದೀಪ ಎಂದು ಹಾರುತ್ತದೆ ಎಂದು ತಿಳಿಯಲ್ಲ ಅದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿರಿ ಎಂದರು.
ಮನುಷ್ಯರಾಗಿ ಹುಟ್ಟಿದ್ದೇವೆ ಆದರೆ ದೇವರ ಸ್ಮರಣೆ ಮರೆತಿದ್ದಾರೆ. ವ್ಯವಹಾರಿಕ ಬದುಕಿಗೆ ಹೆಚ್ಚಿನ ಒತ್ತು ನೀಡುತ್ತಿರುವು ಸಮಾಜದಲ್ಲಿ ಜನರ ಮಧ್ಯೆ ಕಂದಕ ಸೃಷ್ಟಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಭಗವಂತ ಮಳೆಯನ್ನು ನೀಡಿಲ್ಲ ಅದಕ್ಕಾಗಿ ಮೊದಲ ಭಗವಂತನ ಪ್ರಾರ್ಥನೆ ಮಾಡಿ ಎಂದರು. ಸಾವಿರಾರು ಎಕರೆ ತೋಟಗಳು ಒಣಗುತ್ತಿದೆ ರೈತರ ಬದುಕು ತುಂಬಾ ಕಷ್ಟದ್ದಾರೆ ಅದಕ್ಕಾಗಿ ಮಳೆಗಾಗಿ ನಾನು ಸಹ ಬೇಡಿಕೊಳ್ಳುವೆ ಎಂದು ತಿಳಿಸಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ವಾಲ್ಮೀಕಿ ಮಹಾ ಕವಿ ಒಂದು ಜನಾಂಗಕ್ಕೆ ಸಿಮೀತರಲ್ಲ. ಅವರು ಬರೆದಿರುವ ವಾಲ್ಮೀಕಿ ರಾಮಾಯಣದಲ್ಲಿ ನಿತ್ಯ ಎದುರಿಸುವ ಸಮಸ್ಯೆಗಳಿಗೆ ಅಂದೆ ಪರಿಹಾರ ಬರೆದಿಟ್ಟುರುವ ಮಹಾನ್ ನಾಯಕ ವಾಲ್ಮೀಕಿ ಎಂದರು. ಯುವಕರಿಗೆ ವಾಲ್ಮೀಕಿ ಸ್ಪೂರ್ತಿದಾಯಕವಾಗಬೇಕು. ಸರ್ವ ಜನಾಂಗದ ಜನರಿಗೆ ಅನೇಕ ಕೊಡುಗೆಯನ್ನು ನೀಡಿದ್ದಾರೆ.
ನಾಯಕ ಜನಾಂಗದವರು ಕೆರೆ ಕಟ್ಟೆಗಳನ್ನು ಕೋಟೆಗಳನ್ನು ಕಟ್ಟಿ ಎಲ್ಲಾ ಸಮಾಜದವರನ್ನು ರಕ್ಷಣೆ ಮಾಡಿದಂತಹ ಜನಾಂಗ ನಾಯಕ ಜನಾಂಗವಾಗಿದೆ ಎಂದು ತಿಳಿಸಿದರು. ವಾಲ್ಮೀಕಿ ಮಾನವ ಕುಲಕ್ಕೆ ಸಂದೇಶ ನೀಡಿ ಲೋಕ ಕಲ್ಯಾಣಕ್ಕೆ ಪಣ ತೊಟ್ಟವರು ಎಂದು ಸಂತಸ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ನೀರಿನ ಬವಣೆ ಕುರಿತು ಸಹ ಮಾತನಾಡಿ ಅಧಿಕಾರಿಗಳು ಜನರಿಗೆ ನೀರು ಒದಗಿಸುವ ಕೆಲಸ ಮಾಡಬೇಕಾಗಿದೆ. ಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಹಾಕಿ ಅಧಿಕಾರಿಗಳ ಜೊತೆ ಮಾತನಾಡಿದರೆ ಸಾಲದು ಜನರಿಗೆ ಅಧಿಕಾರಿಗಳು ಮೊದಲು ನೀರು ಕೊಡಬೇಕು ಎಂದರು. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹೆಚ್ಚು ಶ್ರಮ ವಹಿಸಿ ನೀರು ನೀಡಿ ಎಂದು ಮನವಿ ಮಾಡಿದರು. ಟ್ಯಾಂಕರ್ ನೀರಿಗೆ ನೀಡುತ್ತಿರುವ ಹಣ ಸಾಲದು ಹಳೆಯ ಹಣ ನೀಡಿದರೆ ಹೊಸದಾಗಿ ನೀರು ಒಡೆಯಲು ಮುಂದೆ ಬರುತ್ತಾರೆ. ಟ್ಯಾಂಕರ್ ಗೆ ನೀಡುತ್ತಿರುವ ವೆಚ್ಚ ಹೆಚ್ಚಿಸಬೇಕು ಎಂದು ಹೇಳಿದರು.
ತಾಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ ನಾಯಕ ಜನಾಂಗದ ಒಗ್ಗಟ್ಟಿನಿಂದ ಸಮಾಜವನ್ನು ಸಂಘಟನೆ ಮಾಡುವ ಕಡೆ ಗಮನ ನೀಡಬೇಕು. ವಾಲ್ಮೀಕಿಯಂತೆ ನಾಯಕ ಜನಾಂಗದ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ತಂದೆ ತಾಯಿಗಳು ಶ್ರಮಿಸಬೇಕು. ಶಿಕ್ಷಣ, ಆರ್ಥಿಕ, ಸಾಮಾಜಿಕವಾಗಿ ಬಲಿಷ್ಠರಾಗಬೇಕು. ಆದಿ ಕವಿ ಮಹರ್ಷಿ ವಾಲ್ಮೀಕಿ ಅವರು ಜನಾಂಗ ಆಸ್ತಿಯಗಿದ್ದಾರೆ. ದೇಶದ ರಕ್ಷಣೆಯಲ್ಲಿ ನಾಯಕ ಜನಾಂಗ ಕೊಡುಗೆ ನೀಡಿದ್ದಾರೆ ಎಂದರು.
ಮಾಚಿದೇವ ಮಹಾ ಸಂಸ್ಥಾನದ ಗುರುಪೀಠದ ಮಡಿವಾಳ ಮಾಚಿದೇವಮಹಾಪ್ರಭು ಮಹಾಸ್ವಾಮಿ ಮಾತನಾಡಿದರು, ವಾಲ್ಮೀಕಿ ಮಹಾಸಭಾದ ವೀರೇಂದ್ರ ಸಿಂಹ ಉಪನ್ಯಾಸ ನೀಡಿದರು , ಚಿತ್ರದುರ್ಗ ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ , ತಾಲೂಕು ಪಂಚಾಯತ ಸದಸ್ಯ ಪ್ರತಿಭಾ, ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂದ್ರಕಲಾ ವರದರಾಜ್ ಗ್ರಾಮ ಪಂಚಾಯತಿ ಸದಸ್ಯರಾದ ಲತಾ ಲೋಕೇಶ್, , ಜಿ.ಪಿ.ಮಂಜುನಾಥ್ ಹಾಗೂ ಜಿ. ಪ್ರಶಾಂತ ಪುತ್ಥಳಿ ಕೊಡುಗೆ ನೀಡಿದ್ದಾರೆ, ರಂಗಣ್ಣ , ಕರಿಯಣ್ಣ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
