ಹೊಸಕೆರೆ : ಎಸ್.ಬಿ.ಐ ಬ್ಯಾಂಕ್ ಸೀಲ್ ಡೌನ್

ಮಿಡಿಗೇಶಿ

    ಆ.03 ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಗೆ ಸೇರಿದ ಹೊಸಕೆರೆ ಗ್ರಾಮದ ರಂಟವಳಲು ಗ್ರಾಮ್ಕಕೆ ಹಾದು ಹೋಗುವ ರಸ್ತೆ ಬದಿಯಲ್ಲಿನ ಎಸ್.ಬಿ.ಐ ಬ್ಯಾಂಕಿನ ವ್ಯವಸ್ಥಾಪಕರು ಸಿಬ್ಬಂದಿ ಸೇರಿದಂತೆ ನಾಲ್ವರಿಗೆ ಕೋವಿಡ್ -19 ಕೊರೊನಾ ಸೋಂಕು ದೃಢಪಟ್ಟಿರುವ ಬಗ್ಗೆ ವರದಿಯಾಗಿರುತ್ತದೆ.

     ಆ.3 ನೇ ತಾರೀಕಿನ ಆರೋಗ್ಯ ಇಲಾಖೆಯ ಮಾಹಿತಿಯÁಗಿರುತ್ತದೆ ಆದ್ದರಿಂದ ಬ್ಯಾಂಕಿನ ವ್ಯವಸ್ಥಾಪಕರ ವಾಸದ ಮನೆ ಹಾಗೂ ಎಸ್.ಬಿ.ಐ ಬ್ಯಾಂಕಿಗೆ ಸ್ಯಾನಿ ಟೈಸರ್ ಪಂಪಿನ ಮೂಲಕ ಹೊಸಕೆರೆ ಗ್ರಾಮ ಂಚಾಯಿತಿ ಪಿ.ಡಿ.ಓ ಹಾಗೂ ಸಿಬ್ಬಂದಿ ಸೇರಿ ಸಿಂಪಡಿಸಿದ್ದು ಸೀಲ್ ಡೌನ್ ಮಾಡಿರುತ್ತಾರೆ. ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ. ರಕ್ಷಣಾ ಇಲಾಖೆಯ ಸಿಬ್ಬಂದಿಯವರು ಹಾಜರಿರುತ್ತಾರೆ. ದಿನೇ ದಿನೇ ಗ್ರಾಮೀಣ ಪ್ರದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕು ವ್ಯಾಪಿಸುತ್ತಿರುವುದರಿಂದ ಜನ ಸಾಮಾನ್ಯರು ಭಯ ಭೀತರಾಗಿರುತ್ತಾರೆ.

    ಗ್ರಾಮ ಪಂಚಾಯಿತಿಯವರು ಸೀಲ್ ಡೌನ್ ನಿವಾಸಿಗಳ ಬಗ್ಗೆ ನಿರ್ಲಕ್ಷ್ಯ ತೋರಿಸದಂತೆ ಬಹಳ ಎಚ್ಚರ ವಹಿಸುವಂತೆ ಪ್ರಜ್ಞಾವಂತ ನಾಗರೀಕರು ಎಚ್ಚರಿಸಿರುತ್ತಾರೆ ಹಾಗೂ ಪ್ರತಿಯೊಬ್ಬರೂ ಸಹ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಮಾಸ್ಕ್ ಖಡ್ಡಾಯವಾಗಿ ಹಾಕಿಕೊಳ್ಳುವಂತೆ ಮನವಿ ಮಾಡಿರುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap