ಮಧುಗಿರಿ
ಇತ್ತೀಚೆಗೆ ಹೆಚ್ಚು ಮಳೆ ಸುರಿದಿದ್ದರಿಂದ ಸೋಮವಾರ ಶಾಲಾ ವೇಳೆಯಲ್ಲಿ ಸರಕಾರಿ ಶಾಲೆಯೊಂದರ ನಲಿಕಲಿ ಕೊಠಡಿಯ ಮೇಲ್ಛಾವಣಿಯ ಸೀಲಿಂಗ್‌ನ ಸಿಮೆಂಟ್ ಕಳಚಿ ಬಿದ್ದು, ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರುಗಳಿಗೆ ಯಾವುದೇ ಅಪಾಯ ಆಗಿರುವುದಿಲ್ಲ.
ತಾಲ್ಲೂಕಿನ ಕಸಬಾ ಹೋಬಳಿಯ ಕಾರಮರಡಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಟ್ಟು 8 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೇಲ್ಛಾವಣಿಯ ಗೋಡೆ ಬೀಳುತ್ತಿದ್ದಂತೆ ಮಕ್ಕಳು ಹಾಗೂ ಶಿಕ್ಷಕರು ಶಾಲೆಯ ಕೊಠಡಿಯಿಂದ ಹೊರ ಬಂದಿದ್ದಾರೆ. ಎಲ್ಲಾ ಮಕ್ಕಳಿಗೆ ಧೈರ್ಯ ಹೇಲಿ ಸಮಾಧಾನ ಪಡಿಸಿದ ನಂತರ ಶಿಕ್ಷಕರು ಶಾಲೆಯ ಅಂಗಳದಲ್ಲಿ ಪಾಠವನ್ನು ಮುಂದುವರೆಸಿದ್ದಾರೆ. ಈ ವಿಷಯ ತಿಳಿದ ಗ್ರಾಮಸ್ಥರು ಬಿಇಓ ರಂಗಪ್ಪ ಅವರಿಗೆ ಮಾಹಿತಿ ನೀಡಿದ್ದಾರೆ.
ಬಿಇಓ ಸ್ಥಳಕ್ಕೆ ಭೇಟಿ ನೀಡಿ, ಶಾಲೆಯ ಆವರಣದಲ್ಲಿರುವ ದೇವಾಲಯದ ಕೊಠಡಿಯಲ್ಲಿ ತಾತ್ಕಾಲಿಕವಾಗಿ ತರಗತಿ ನಡೆಸುವಂತೆ ಶಿಕ್ಷಕರಿಗೆ ಸೂಚಿಸಿದ್ದಾರೆ.ಶಾಲೆಯ ಕೊಠಡಿಯನ್ನು ರಿಪೇರಿ ಮಾಡಿಸುವುದಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ಈ ರೀತಿಯ ಕೊಠಡಿಗಳ ಬಗ್ಗೆ ಶಿಕ್ಷಕರು ಹೆಚ್ಚು ಗಮನ ಹರಿಸಿ ಅಪಾಯವನ್ನು ತಪ್ಪಿಸಬೇಕೆಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ