ಬೆಂಗಳೂರು:
ನಿರ್ದಿಷ್ಟವಾದಂತಹ ಆರೋಗ್ಯ ಸಮೀಕ್ಷೆಯನ್ನು ನಡೆಸಲು ಶಿಕ್ಷಕರನ್ನು ನಿಯೋಜಿಸಲಾಗುತ್ತಿದೆ.ಇದಕ್ಕಾಗಿ ಬುಧವಾರ ಅರ್ಜಿ ಕರೆಯಲಾಗಿದೆ.ಕೋವಿಡ್ -19 ನಿಂದ ಉಂಟಾಗುವ ಮತ್ತಷ್ಟು ಆರೋಗ್ಯ ಸಮಸ್ಯೆಗಳನ್ನು ತಡೆಯಲು ವಿಎಲ್ ಐ ( ಶೀತಜ್ವರ) ಸಾರಿ (ತೀವ್ರವಾದ ಉಸಿರಾಟದ ಸೋಂಕು) ಮತ್ತಿತರ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಮುಂಚಿತವಾಗಿ ಗುರುತಿಸಲು ಕುಟುಂಬಗಳ ಸಮೀಕ್ಷೆಯನ್ನು ರಾಜ್ಯಾದ್ಯಂತ ನಡೆಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ಆದರೆ, ಶಿಕ್ಷಕರು ತಮ್ಮ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಾಸ್ಕ್ ಗಳು, ಗ್ಲೌಸುಗಳನ್ನು ನೀಡಿದ್ದರೂ ನಮ್ಮಲಿ ಸರ್ವೆ ಮಾಡಲು ಭಯವಿದೆ, ಸೋಂಕನ್ನು ತಡೆಯುವ ತಾಂತ್ರಿಕ ಜ್ಞಾನವನ್ನು ಹೊಂದಿರದ ಕಾರಣ ಶಿಕ್ಷಕರಿಗೆ ಕೆಂಪು ವಲಯಗಳಲ್ಲಿ ಸರ್ವೆಗಳಿಗೆ ನಿಯೋಜಿಸಬಾರದು ಎಂದು ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಯೊಬ್ಬರು ಹೇಳುತ್ತಾರೆ.