ಕಿಡಿಗೇಡಿಗಳಿಂದ ಶಾಲಾ ಕಟ್ಟಡದ ಗೋಡೆ ದ್ವಂಸ

ಐ.ಡಿ.ಹಳ್ಳಿ

      ಆಂಧ್ರದ ಗಡಿಭಾಗದಲ್ಲಿರುವ ಸರ್ಕಾರಿ ಶಾಲೆಯ ಕೊಠಡಿಯ ಗೋಡೆಗಳನ್ನು ಕೆಲ ಕಿಡಿಗೇಡಿಗಳು ಹೊಡೆದುರುಳಿಸುವ ಘಟನೆ ಗರಣಿ ಗ್ರಾಮದಲ್ಲಿ ಬುಧವಾರ ದಂದು ನಡೆದಿದೆ.
        ಐ.ಡಿ.ಹಳ್ಳಿ ಹೋಬಳಿಯ ಗರಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 2 ಹಳೆಯ ಕೊಠಡಿಗಳ ಇದ್ದವು ಮಾರ್ಚ್ 26ರಂದು ಎರಡು ಶಾಲೆಯ ಗೋಡೆ ಹಾಗೂ 27 ರಂದು ರಾತ್ರಿ ಮತ್ತೊಂದು ಶಾಲೆಯ ಕೊಠಡಿಯನ್ನು ಕಿಡಿಗೇಡಿಗಳು ಹೊಡೆದುರುಳಿಸಿದರೆ.
       ಸಂವಿಧಾನದ ಆಶಯಗಳಲ್ಲಿ ಒಂದಾದ ಸರ್ಕಾರಿ ಶಾಲೆಯ ಬಡಮಕ್ಕಳಿಗೆ ಉತ್ತಮವಾದ ಶಿಕ್ಷಣ ಮತ್ತು ಸುಸಜ್ಜಿತವಾದ ಗಾಳಿ, ಬೆಳಕಿನ ವ್ಯವಸ್ಥೆ, ಉತ್ತಮ ಪರಿಸರ, ಹಾಗೂ ಶಾಲಾ ಕೊಠಡಿಗಳು ಸೇರಿದಂತೆ ಅಚ್ಚುಕಟ್ಟಾಗಿ ಇರಿಸಬೇಕಾದ ಸರ್ಕಾರ ಮತ್ತು ಸಾರ್ವಜನಿಕರ ಜವಾಬ್ದಾರಿ ಆಗಿದೆ, ಆದರೇ ಒಂದು ಸರ್ಕಾರಿ ಶಾಲೆಯ ಕೊಠಡಿಗಳನ್ನು ಉರುಳಿಸಿದ ಘಟನೆ ಗರಣಿ ಗ್ರಾಮದ ಕೆಲ ಕಿಡಿಗೇಡಿಗಳು ಶಾಲೆಯ ಗೋಡೆ ಗಳನ್ನೇ ಉರುಳಿಸಿದ್ದಾರೆ ಎಂದು ಹೇಳಿದರು ತಪ್ಪಾಗಲಾರದು.ಒಂದು ಶಾಲೆಯ ಕೊಠಡಿ ಇದ್ದರೆ ಲಕ್ಷಾಂತರ ವಿದ್ಯಾರ್ಥಿಗಳು ಬುದ್ಧಿವಂತರಗುತ್ತಾರೆ ಆದರೆ ಈ ಗ್ರಾಮದಲ್ಲಿ ಕೆಲದಿನಗಳಿಂದ ಕೆಲ ಕಿಡಿಗೇಡಿಗಳು ಹುಟ್ಟಿಕೊಂಡಿದ್ದು ಅವರನ್ನು ಮಟ್ಟ ಹಾಕುವಂತಹ ಕೆಲಸ ಪೊಲೀಸ್ ಅಧಿಕಾರಿಗಳು ಮಾಡಬೇಕಾಗಿದೆ…
        ಗರಣಿ ಗ್ರಾಮದ ಸರ್ಕಾರಿ ಶಾಲೆಯ 3 ಕೊಠಡಿಗಳನ್ನು ಉರುಳಿಸಿದ್ದರೆ ಎಂದು ಕಾರಣ ತಿಳಿದ ಮೇಲಧಿಕಾರಿಗಳು ಯಾರು ಸಹ ಭೇಟಿ ನೀಡಿಲ್ಲ? ಆದ್ದರಿಂದ ಇನ್ನು ಮುಂದಾದರೂ ಈ ಆಂಧ್ರದ ಗಡಿ ಭಾಗದ ಶಾಲೆಗಳಿಗೆ ಮೇಲಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರಿ ಕೊಠಡಿಗಳ ಇಲ್ಲದಂತಾಗುತ್ತದೆ..
         ಶಾಲೆಯ ಮುಖ್ಯ ಶಿಕ್ಷಕರಾದ ಕೃಷ್ಣ. ಬಿ. ರವರು ಮಾತನಾಡಿ ಹಳೆಯ ಕೊಠಡಿ ಆಗಿದ್ದರಿಂದ ಶಾಲೆಯ ವಿದ್ಯಾರ್ಥಿಗಳಿಗೆ ಅಪಾಯವಾಗಬಾರದು ಎಂಬ ದೃಷ್ಟಿಯಿಂದ ನಾನು ಕಟ್ಟಡವನ್ನು ತೆರವುಗೊಳಿಸುವಂತೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ನಾನು ಮನವಿ ಮಾಡಿದ್ದೆ. ಆ ಮನವಿಗೆ ಸ್ಪಂದಿಸಿದ ಅಧಿಕಾರಿ ಕಟ್ಟಡ ತೆರವಿಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.
     
       ಆದರೆ ಕೊಠಡಿಗಳನ್ನು ರಾತ್ರಿ ಸಮಯದಲ್ಲಿ ಕಿಡಿಗೇಡಿಗಳು ಮಾರ್ಚ್ 26ರಂದು ಎರಡು ಶಾಲೆಯ ಗೋಡೆ ಹಾಗೂ 27 ರಂದು ರಾತ್ರಿ ಒಂದು ಕೊಠಡಿಯನ್ನು ಒಡೆದು ಹಾಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಅದ್ದರಿಂದ ಸರಕಾರಿ ಆಸ್ತಿಯನ್ನು ನಾಶ ಮಾಡಿರುವಂತಹ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಮಿಡಿಗೇಶಿ ಪೊಲೀಸ್ ಠಾಣೆಗೆ ಇಂದು ದೂರು ನೀಡುತ್ತೇವೆ ಎಂದರು.
        ಎಸ್ಡಿಎಂಸಿ ಅಧ್ಯಕ್ಷ ಶಿಲ್ಪ ಹಾಗೂ ಸದಸ್ಯರು ಮಾತನಾಡಿ ಎಸ್ಡಿಎಂಸಿ ರಚನೆಯಾದ ದಿನದಿಂದ ನಾವು ಈ ಶಾಲೆಗೆ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿದ್ದೇವೆ. ಎಸ್ಡಿಎಂಸಿ ಅಧ್ಯಕ್ಷ ಹಾಗೂ ಸದಸ್ಯರು ನಾವೆಲ್ಲರೂ ಸೇರಿ ಉತ್ತಮವಾದ ಪರಿಸರದ ವಾತಾವರಣ ಕೋಸ್ಕರ ಹಲವಾರು ಗಿಡಗಳನ್ನು ಶಾಲಾ ಆವರಣದಲ್ಲಿ ನೆಟ್ಟಿದ್ದೇವು ಆದರೆ ಒಂದು ಗಿಡವು ಸಹ ಕಾಣದಂತಾಗಿದೆ.ಹಾಗೂ ವಿದ್ಯಾರ್ಥಿಗಳಿಗೆ ತಟ್ಟೆ ತೊಳೆಯುವುದಕ್ಕೆ ಹಾಗೂ ಕುಡಿಯುವುದಕ್ಕೆ ನೀರಿನ ಸಮಸ್ಯೆ ಇರುವುದನ್ನು ಕಂಡು  ನಾವೆಲ್ಲರೂ ಸ್ವಲ್ಪ ಸ್ವಲ್ಪ ಹಣವನ್ನು  ನಮ್ಮ ಸ್ವತಹ ಖರ್ಚಿನಲ್ಲಿ ನಾವು ಪೈಪು ಗಳನ್ನು ಖರೀದಿಸಿ ಕುಡಿಯುವ ನೀರಿನ ಥ್ಯಾಂಕ್ ಮತ್ತು ನಲ್ಲಿಗಳನ್ನು ಹಕಿಸಿದ್ದೇವೆ. ಇಂತಹ ಹಲವಾರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರೂ ಸಹ ಈ ಗ್ರಾಮದ ಕೆಲ ಕಿಡಿಗೇಡಿಗಳು ಶಾಲೆಯ ಕೊಠಡಿಗಳನ್ನು ರಾತ್ರೋರಾತ್ರಿ ನಾಶ ಮಾಡುವುದು ಎಷ್ಟರ ಮಟ್ಟಿಗೆ ಸರಿ ಇದು ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ ಎಂದರು.
         ಮಾ.ಒ.ಹೋ.ಸಮಿತಿಯ ತಾಲೂಕು ಅಧ್ಯಕ್ಷರಾದ ಗರಣಿ ಶ್ರೀನಿವಾಸ್ ರವರು ಮಾತನಾಡಿ ಈ ಶಾಲೆಯಲ್ಲಿ  ಶಿಕ್ಷಕರು ಉತ್ತಮವಾದ ಪಾಠಗಳನ್ನು ಬೋಧಿಸುತ್ತಿದ್ದಾರೆ ಆದರೇ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ಈ ರೀತಿ ಸರ್ಕಾರಿ ಶಾಲಾ ಕೊಠಡಿಗಳ ಗೋಡೆಗಳನ್ನೆ ಉರುಳಿಸುವುದು ಎಷ್ಟರ ಮಟ್ಟಿಗೆ ಸರಿ ಇದನ್ನು ಪೊಲೀಸ್ ಅಧಿಕಾರಿಗಳು ಹಾಗೂ ತಾಲ್ಲೂಕಿನ ಶಿಕ್ಷಣ ಅಧಿಕಾರಿಗಳು ಮತ್ತು ಹಾಲಿ ಶಾಸಕರಾದ ಎಮ್.ವಿ.ವೀರಭದ್ರಯ್ಯ ರವರು ಇದನ್ನು ಗಂಭೀರವಾಗಿ ಚರ್ಚಿಸಿ ಈ ಗ್ರಾಮದ ಶಾಲೆಯ ಕೊಠಡಿಗಳನ್ನು ಉರುಳಿಸಿದ ಕಾರಣದಿಂದ ದಯವಿಟ್ಟು ಶಾಸಕರ ಅನುದಾನದಲ್ಲಿ ಈ ಮೂರು ಹೊಸ ಕೊಠಡಿಗಳನ್ನು ನಿರ್ಮಾಣ  ಮಾಡಿಕೊಡಬೇಕು ಎಂದರು,
.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link