ವಿಜ್ಞಾನಿಗಳ ಕಾರ್ಯ ಶ್ಲಾಘನೀಯ: ದಿನೇಶ್ ಗುಂಡೂರಾವ್

ಬೆಂಗಳೂರು

      ಬಾಹ್ಯಾಕಾಶದಲ್ಲಿ ಭಾರತದ ಸಾಧನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್‍ಅವರು, ವಿಜ್ಞಾನಿಗಳ ಕಾರ್ಯ ಶ್ಲಾಘನೀಯ.ಪ್ರಧಾನಿ ನರೇಂದ್ರ ಮೋದಿ ಇದು ನನ್ನ ಸಾಧನೆಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

       ಕೆಪಿಸಿಸಿ ಕಚೇರಿಯಲ್ಲಿಇಂದು ಬೆಂಗಳೂರು ಉತ್ತರ ಲೋಕಸಭಾಕ್ಷೇತ್ರದ ಪ್ರಮುಖ ನಾಯಕರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಭಾರತ ಬಹಳ ಹಿಂದೆಯೇ ಸ್ಪೇಸ್ ಸೂಪರ್ ಪವರ್, ನ್ಯೂಕ್ಲಿಯರ್ ಸೂಪರ್ ಪವರ್‍ಆಗಿದೆ. ಇದನ್ನುರಾಜಕಾರಣಕ್ಕೆ ಉಪಯೋಗಿಸಿಕೊಳ್ಳಬೇಡಿ. ಇದು ನಿಮ್ಮ ಸಾಧನೆಅಂತ ಹೇಳಿಕೊಳ್ಳಬೇಡಿ ಎಂದು ಮೋದಿಯವರಿಗೆಟಾಂಗ್ ನೀಡಿದರು.ಹೈಪ್ ಮಾಡೋದು, ಮಾರ್ಕೆಟಿಂಗ್ ಮಾಡೋದು ಬೇಡ.ಮೋದಿಯವರು ಬಂದ ಮೇಲೆ ಭಾರತ ಮುಂದೆ ಬಂದಿದೆಎಂದು ಬಿಂಬಿಸೋದು ಸರಿಯಲ್ಲ. ಇದನ್ನು ಬಿಜೆಪಿ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳೋದು ಬೇಡಎಂದರು.

      ಇದೇ ವೇಳೆ ಬೆಂಗಳೂರು ಉತ್ತರ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡ ಮಾತನಾಡಿ, ನಾಯಕರು ಮತ್ತು ಕಾರ್ಯಕರ್ತರ ಮೇಲೆ ನಾನು ಅವಲಂಬಿತನಾಗಿದ್ದೇನೆ. ಇನ್ನೆರಡು ದಿನದಲ್ಲಿಕಾಂಗ್ರೆಸ್ ಮತ್ತುಜೆಡಿಎಸ್ ನಾಯಕರುಜಂಟಿ ಸಭೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.

      ನಾಳೆ ಅಥವಾ ನಾಳಿದ್ದು ಜಂಟಿಕಾರ್ಯಕರ್ತರ ಸಭೆ ನಡೆಯುತ್ತದೆ. ಸಭೆ ನಂತರ ವಿಧಾನಸಭಾ ವಾರು ಪ್ರಚಾರ ಮಾಡಲಿದ್ದೇವೆಎಂದು ಹೇಳಿದರು.

      ಇವತ್ತಿನ ಸಭೆಯಲ್ಲಿ ನಮ್ಮಕಾರ್ಯಕರ್ತರುಉತ್ಸಾಹದಲ್ಲಿದ್ದಾರೆ, ಜನರಲ್ಲಿ ಒಲವಿದೆ, ಅದನ್ನು ಮತವಾಗಿ ಪರಿವರ್ತನೆ ಮಾಡುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಗೆಲ್ಲುವಿನ ವಿಶ್ವಾಸ ವ್ಯಕ್ತಪಡಿಸಿದರು.

      ಬಿಜೆಪಿ ಶಾಸಕ ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬೆಂಗಳೂರು ದಕ್ಷಿಣಅಭ್ಯರ್ಥಿ ಬಿ.ಕೆ. ಹರಿಪ್ರಸಾದ್, ವದಂತಿಗಳಿಗೆ ಏನು ಹೇಳುವುದಿಲ್ಲ. ಅದರೆ ರಾಜಕೀಯದಲ್ಲಿ ನಾವು ನಮ್ಮ ಮಿತ್ರರು, ಶತ್ರುಗಳು ವಿರೋಧಿಗಳು ಎಲ್ಲರನ್ನು ಸಂಪರ್ಕಿಸುತ್ತೇವೆ. ಸೋಮಣ್ಣ ವಿಚಾರದಲ್ಲಿ ಸದ್ಯಕ್ಕೆ ನಾನು ಏನು ಹೇಳುವುದಿಲ್ಲ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap