ಎಸ್‍ಡಿಪಿಐ ನಿಷೇಧ ಪ್ರಸ್ತಾವದ ಸುತ್ತ ರಾಜಕೀಯ ಲೆಕ್ಕಚಾರ

ಬೆಂಗಳೂರು

     ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಹಿನ್ನೆಲೆ ಮತ್ತೆ ಎಸ್ ಡಿಪಿಐ ಸಂಘಟನೆ ನಿಷೇಧದ ಬೇಡಿಕೆ ಮುನ್ನಲೆಗೆ ಬಂದಿದೆ. ಸಂಘಟನೆ ನಿಷೇಧಿಸುವ ಕೂಗು ರಾಜ್ಯದಲ್ಲಿ ಮೊದಲಿನಿಂದಲೂ ಕೇಳಿ ಬರುತ್ತಿದ್ದರೂ,ಅದರೆ ಕಾರ್ಯರೂಪ ಮಾತ್ರ ಸಾಧ್ಯವಾಗಿಲ್ಲ.ಈ ನಿಷೇಧದ ಹಿಂದೆ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರವನ್ನು ಮೂರು ರಾಜಕೀಯ ಪಕ್ಷಗಳು ಹಾಕಿಕೊಂಡಿವೆ.

     ಎಸ್ ಡಿಪಿಐ ಸದ್ಯಕ್ಕೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಚರ್ಚೆಗೆ ಕಾರಣವಾಗಿರುವ ಸಂಘಟನೆ. ಬೆಂಗಳೂರು ಗಲಭೆಯ ಬಳಿಕ ಇದೀಗ ಎಸ್ ಡಿಪಿಐ ಸಂಘ ಟನೆ ನಿಷೇಧದ ಕೂಗು ಬಲವಾಗಿ ಕೇಳಿ ಬರುತ್ತಿದೆ.ಒಂದೆಡೆ ಬಿಜೆಪಿ ಎಸ್ ಡಿಪಿಐ ಸಂಘಟನೆ ಡಿ.ಜೆ.ಹಳ್ಳಿ ಗಲಭೆಗೆ ಮೂಲ ಕಾರಣವಾಗಿದ್ದು, ಈ ಬಾರಿ ನಿಷೇಧ ಖಚಿತ ಎಂದು ಹೇಳುತ್ತಿz್ದ.ಇತ್ತ ಕಾಂಗ್ರೆಸ್ ಪಕ್ಷ, ರಾಜಕೀಯ ಉದ್ದೇಶಕ್ಕಾಗಿ ಎಸ್ ಡಿಪಿಐ ಸಂಘಟನೆಗೆ ಬಿಜೆಪಿ ನಿಷೇಧ ಹೇರುವುದಿಲ್ಲ ಎಂದು ಆರೋಪಿಸುತ್ತಿದೆ.ದಿನೇ ದಿನೆ ರಾಜ್ಯದ ಚುನಾವಣಾ ಕಣದಲ್ಲಿ ಬಲವರ್ಧಿಸುತ್ತಿರುವ ಎಸ್ ಡಿಪಿಐ ಸಂಘಟನೆ ಪರೋಕ್ಷವಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಚುನಾವಣಾ ಲಾಭ ನಷ್ಟಕ್ಕೆ ಕಾರಣವಾಗಿದೆ.

     ಕಾಂಗ್ರೆಸ್‍ಗೆ ಮಗ್ಗಲ ಮುಳ್ಳಾ?: ಎಸ್‍ಡಿಪಿಐ ಸಂಘಟನೆ ಕಾಂಗ್ರೆಸ್ ಪಕ್ಷಕ್ಕೆ ಮಗ್ಗುಲ ಮುಳ್ಳೇ ಸರಿ.ಸುಮಾರು 13% ಮುಸ್ಲಿಂ ಜನಸಂಖ್ಯೆ ಹೊಂದಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಎಸ್‍ಡಿಪಿಐ ಸಂಘಟನೆ ಚುನಾವಣಾ ರಣಕಣದಲ್ಲಿ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ. ಮುಸ್ಲಿಂ ಮತಗಳನ್ನೇ ಗುರಿಯಾಗಿಸಿರುವ ಎಸ್‍ಡಿಪಿಐ, ಕಾಂಗ್ರೆಸ್ ಮುಸ್ಲಿಂ ಮತಬ್ಯಾಂಕ್‍ಗೆ ಕತ್ತರಿ ಹಾಕುತ್ತಿದೆ. ಎಸ್‍ಡಿಪಿಐ 2009ರಿಂದ ಅಸ್ತಿತ್ವಕ್ಕೆ ಬಂದಾಗಿನಿಂದ ಚುನಾವಣಾ ಕಣದಲ್ಲಿ ತನ್ನ ಬಲವರ್ಧನೆ ಮಾಡು ತ್ತಿದ್ದು,ಕೈ ನಾಯ ಕರ ನಿದ್ದೆ ಗೆಡಿಸಿರುವುದು ಸತ್ಯವಾಗಿದೆ.ರಾಜ್ಯದಲ್ಲಿ 30% ಗೂ ಅಧಿಕ ಮುಸ್ಲಿಂ ಮತಗಳಿರುವ ಒಟ್ಟು 19 ಕ್ಷೇತ್ರಗಳಿವೆ.ಈ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳನ್ನು ವಿಭಜಿಸುವ ಮೂಲಕ ಕಾಂಗ್ರೆಸ್ ಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.

     2013 ವಿಧಾನಸಭೆ ಚುನಾವಣೆಯಲ್ಲಿ ಎಸ್ ಡಿಪಿಐ ಒಟ್ಟು 23 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.ಪ್ರಮುಖವಾಗಿ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಯಾವ ಅಭ್ಯರ್ಥಿಗಳು ಗೆಲವು ಸಾಧಿಸದಿದ್ದರೂ ಮುಸ್ಲಿಮರ ಮತ ಒಡೆಯುವಲ್ಲಿ ಸಫಲವಾಗಿದೆ. 2013ರ ಚುನಾವಣೆ ಯಲ್ಲಿ ಒಟ್ಟು ಮತ ಚಲಾವಣೆಯಲ್ಲಿ ಎಸ್ ಡಿಪಿಐ ಸುಮಾರು 3.27% ಮತಗಳಿಸಲು ಯಶ ಕಂಡಿದೆ. ಆ ವೇಳೆ ಕಾಂಗ್ರೆಸ್ 36.76%, ಬಿಜೆಪಿ 20.07%, ಜೆಡಿ ಎಸ್ 20.45% ಮತಗಳಿಸಿತ್ತು.

    ಅದೇ 2018ರ ಚುನಾವಣೆ ವೇಳೆ ತನ್ನ ಬಲವನ್ನು ಇನ್ನಷ್ಟು ವರ್ಧಿಸಿದೆ. ಒಟ್ಟು 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ, ಎಸ್‍ಡಿಪಿಐ ಕೊನೆಗೆ ಕೇವ ಲ ಮೂರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣದಲ್ಲಿ ಉಳಿಸಿತು. ಈ ಚುನಾವಣೆಯಲ್ಲೂ ಸೋಲು ಕಂಡ ಎಸ್ ಡಿಪಿಐ ತನ್ನ ಮತ ಹಂಚಿಕೆಯನ್ನು ಹೆಚ್ಚಿಸಿತ್ತು.ಸುಮಾರು 10.50% ಮತವನ್ನು ಎಸ್ ಡಿಪಿಐ ತನ್ನತ್ತ ಸೆಳೆದಿತ್ತು. ಈ ವೇಳೆ ಬಿಜೆಪಿ 36.43%, ಕಾಂಗ್ರೆಸ್ 38.61% ಮತ್ತು ಜೆಡಿಎಸ್ 20.61% ಮತಗಳಿಸಿತ್ತು.

     2014ರ ಲೋಕಸಭೆ ಚುನಾವಣೆಯಲ್ಲಿ ಎಸ್ ಡಿಪಿಐ ಸ್ಪರ್ಧಿಸಿದ್ದ ಏಕೈಕ ಸ್ಥಾನವಾದ ದಕ್ಷಿಣ ಕನ್ನಡದಲ್ಲಿ ತನ್ನ ಮತ ಪ್ರಮಾಣವನ್ನು ಹೆಚ್ಚಿಸಿತ್ತು.2014ರ ಲೋಕಸಭೆ ಚುನಾವಣೆಯಲ್ಲಿ ದ.ಕನ್ನಡ ಕ್ಷೇತ್ರದಲ್ಲಿ 2.26% ಮತಗಳಿಸಿದ್ದ ಎಸ್ ಡಿಪಿಐ, 2019ರ ಚುನಾವಣೆಯಲ್ಲಿ ತನ್ನ ಮತಗಳಿಕೆಯನ್ನು 3.48%ಗೆ ಹೆಚ್ಚಿಸಿಕೊಂಡಿತ್ತು.ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಸ್ ಡಿಪಿಐ ಉತ್ತಮ ಪ್ರದರ್ಶನ ತೋರುತ್ತಿದೆ. ರಾಜ್ಯದ ವಿವಿಧೆಡೆ ಸುಮಾರು 125 ಸ್ಥಾನವನ್ನು ಗೆದ್ದಿದ್ದರೆ, ಪಂಚಾಯತಿ ಚುನಾವಣೆಯಲ್ಲಿ ಒಟ್ಟು 74 ಸ್ಥಾನವನ್ನು ಗೆದ್ದಿದ್ದರೆ, 97 ಸೀಟುಗಳಲ್ಲಿ ಎರಡನೇ ಸ್ಥಾನಕ್ಕೆ ಬಂದಿತ್ತು. ಇನ್ನು ಬೆಂಗಳೂರಲ್ಲಿ ಎಸ್ ಡಿಪಿಐ ತನ್ನ ಬಲವರ್ಧಿಸುತ್ತಿದ್ದು, ಶಿವಾಜಿನಗರ, ಸರ್ವಜ್ಞನಗರ, ಪುಲಕೇಶಿನಗರ ಕ್ಷೇತ್ರಗಳಲ್ಲಿ ತನ್ನ ಬಲವರ್ಧನೆ ಮಾಡುತ್ತಿದೆ. ಬಿಬಿಎಂಪಿ ಚುನಾವಣೆ ಯಲ್ಲೂ ತನ್ನ ಪ್ರಾಬಲ್ಯವನ್ನು ಹೆಚ್ಚಿಸುತ್ತಿದೆ.

     ಎಸ್ ಡಿಪಿಐ ಪ್ರಮುಖವಾಗಿ ಕಾಂಗ್ರೆಸ್ ಗೆ ಮಗ್ಗುಲ ಮುಳ್ಳಾಗಿದ್ದರೆ,ಬಿಜೆಪಿಗೆ ರಾಜಕೀಯವಾಗಿ ಲಾಭವನ್ನೇ ತರುತ್ತಿದೆ ಎಂಬುದು ತಜ್ಞರ ಅಭಿಪ್ರಾಯ. ಕಾಂಗ್ರೆಸ್ ಮತ ಬ್ಯಾಂಕ್ ನ್ನು ಗಣನೀ ಯವಾಗಿ ಒಡೆಯುತ್ತಿರುವ ಎಸ್ ಡಿಪಿಐ ಪರೋಕ್ಷವಾಗಿ ಬಿಜೆಪಿ ಗೆಲುವಿಗೆ ಕಾರಣವಾಗುತ್ತಿದೆ.ಈ ಹಿನ್ನೆಲೆ ಕಾಂಗ್ರೆಸ್ ಗೆ ಎಸ್ ಡಿಪಿಐ ನಿಷೇಧಿಸಿದರೆ ರಾಜಕೀಯ ಲಾಭವಾಗಲಿದ್ದರೆ, ಬಿಜೆಪಿಗೆ ರಾಜಕೀಯವಾಗಿ ನಷ್ಟವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

      ಇದೇ ಹಿನ್ನೆಲೆ ಎಸ್ ಡಿಪಿಐ ನಿಷೇಧಕ್ಕೆ ಬಿಜೆಪಿ ಮೀನಾಮೇಷ ನೋಡುತ್ತಿದ್ದರೆ, ಕಾಂಗ್ರೆಸ್ ನಾಯಕರು ಎಸ್ ಡಿಪಿಐ ಸಂಘಟನೆಯ ನಿಷೇಧಕ್ಕೆ ಪರೋಕ್ಷ ಒತ್ತಡ ಹೇರುತ್ತಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap