ಶಿರಾ:
ದೇಶ ಎಷ್ಟೇ ಬೆಳವಣಿಗೆಯ ನಾಗಾಲೋಟದಲ್ಲಿ ಸಾಗುತ್ತಿದ್ದರೂ ನಮ್ಮ ದೇಶದಲ್ಲಿನ ದೈವ ಭಕ್ತಿಯ ಭಾವನೆಗಳಿಗೆ ಎಂದೂ ಕೂಡಾ ಕುಂದುಂಟಾಗಬಾರದು ಎಂದು ರಾಜ್ಯ ಸಾರಿಗೆ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.
ಶಿರಾ ನಗರದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದ ಶ್ರೀ ಶಿವಶಂಕರಸ್ವಾಮಿ ದೇವಾಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸೋಮವಾರ ಕೈಗೊಳ್ಳಲಾಗಿದ್ದ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಭಾರತೀಯ ಸಾಂಸ್ಕøತಿಕ ಪರಂಪರೆಯಲ್ಲಿ ದೈವ ಸಂಕಲ್ಪ ಕೂಡಾ ಒಂದು ಭಾಗವಾಗಿದ್ದು ಸಂಕಷ್ಟಗಳನ್ನು ಈಡೇರಿಸುವಂತೆ ದೇವರ ಮೊರೆ ಹೋಗುವುದು ಕೂಡಾ ಸಾಮಾನ್ಯವಾಗಿದೆ. ಶಿರಾ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದಲೂ ಜವರಾಯ ಕೈಕೊಡುತ್ತಲೇ ಬಂದಿದ್ದು ಜನ-ಜಾನುವಾರುಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ದೈವ ಕೃಪೆಯಿಂದ ಈ ವರ್ಷ ಉತ್ತಮ ಮಲೆ-ಬೆಳೆಯಾಗುವಂತೆ ಲೋಕ ಕಲ್ಯಾಣಾರ್ಥವಾಗಿ ಕೈಗೊಂಡಿರುವ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡಿರುವುದು ಶ್ಲಾಘನಾರ್ಹ ಸಂಗತಿ ಎಂದರು.
ಶ್ರೀ ಶಂಕರ ಸೇವಾ ಟ್ರಸ್ಟ್, ವಿಪ್ರ ಗೆಳೆಯರ ಬಳಗ ಹಾಗೂ ಶ್ರೀ ಶಾರದಾ ಮಹಿಳಾ ಮಂಡಳಿಯ ವತಿಯಿಂದ ಶ್ರೀನಾರಾಯಣಸ್ವಾಮಿ ದೇವಸ್ಥಾನದಲ್ಲಿನ ಶ್ರೀ ಶಿವಶಂಕರ ಸ್ವಾಮಿ ದೇವಾಲಯದಲ್ಲಿ ಅಂದು ಬೆಳಿಗ್ಗೆ 7 ಗಮಟೆಗೆ ಗಣಪತಿ ಪೂಜೆ, ಪಂಚಾಮೃತ ಅಭಿಷೇಕ ಹಾಗೂ ಕುಂಭಾಭಿಷೇಕ