ಸೀಟಿಗಾಗಿ ಕಣ್ಣೀರು ಹಾಕುವ ದೇವೇಗೌಡ ಕುಟುಂಬ: ಜ್ಯೋತಿಗಣೇಶ್‍ಕಿಡಿ

ತುಮಕೂರು:

        ಜಿಲ್ಲೆಗೆ ಹೇಮಾವತಿ ವಿಚಾರದಲ್ಲಿ ಸಾಕಷ್ಟು ಅನ್ಯಾಯ ಮಾಡಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡಅವರು, ಸೊಸೆಯರ ಭಯದಿಂದ ಮೊಮ್ಮಕ್ಕಳಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟುಇಲ್ಲಿಗೆ ಬಂದಿದ್ದಾರೆ. ಜಿಲ್ಲೆಗೆಅನ್ಯಾಯ ಮಾಡಿಜಿಲ್ಲೆಯಿಂದಲೇ ಸ್ಪರ್ಧಿಸಲುಯಾವ ನೈತಿಕತೆಇದೆಎಂದು ಶಾಸಕ ಜ್ಯೋತಿಗಣೇಶ್‍ಕಿಡಿಕಾರಿದರು.

        ನಗರದ ಬಿಜೆಪಿ ಚುನಾವಣಾ ಪ್ರಚಾರಕಚೇರಿಯಲ್ಲಿ ನಡೆದ ತುಮಕೂರು ಗ್ರಾಮಾಂತರ ವ್ಯಾಪ್ತಿಯ ಹಾಲು ಉತ್ಪಾದಕರ ಸಂಘದ ಪ್ರತಿನಿಧಿಗಳು, ನಿರ್ದೇಶಕರು ಮತ್ತುಗ್ರಾ.ಪಂ.ಅಧ್ಯಕ್ಷರು, ಸದಸ್ಯರು ಸಭೆಯಲ್ಲಿ ಮಾತನಾಡಿದಅವರು, ದೇವೇಗೌಡರ ಕುಟುಂಬದವರಿಗೆ ರೈತರು, ಸೈನಿಕರು ಸತ್ತಾಗಕಣ್ಣೀರು ಬರಲಿಲ್ಲ ಆದರೆ ಸೀಟಿನ ವಿಚಾರ ಬಂದತಕ್ಷಣ ವೇದಿಕೆಯಲ್ಲಿಕಣ್ಣೀರು ಹಾಕುತ್ತಾರೆ, ಕುಟುಂಬದವರಿಗಾಗಿ ಕ್ಷೇತ್ರವನ್ನು ಬಿಟ್ಟು ಈಗ ಇಲ್ಲಿಗೆ ಬಂದಿರುವದೇವೇಗೌಡರ ಬಗ್ಗೆ ಜೆಡಿಎಸ್‍ನವರಿಗೆ ಭಯಇದೆ ಎಂದರು.

       ಮುಂದಿನ ಚುನಾವಣೆಗಳಲ್ಲಿ ಯಾವಕ್ಷೇತ್ರದಿಂದಇನ್ಯಾವ ಸಂಬಂಧಿಯನ್ನುತಂದು ನಿಲ್ಲಿಸುತ್ತಾರೋಎನ್ನುವ ಭಯಜಿಲ್ಲೆಯಜೆಡಿಎಸ್ ಮುಖಂಡರಿಗೆಇದೆ. ದೇವೇಗೌಡರುಇಲ್ಲಿ ಸ್ಪರ್ಧಿಸುವ ಬಗ್ಗೆ ಜನರ ವಿರೋಧಇದೆ. ಜನರ ಕೈಗೆ ಸಿಗದ ದೇವೇಗೌಡರನ್ನು ಗೆಲ್ಲಿಸಿಕೊಂಡರೆ ಯಾವುದೇ ಪ್ರಯೋಜನವಾಗುವುದಿಲ್ಲ, ಜನರ ಸಮಸ್ಯೆಗಳಿಗೂ ಸ್ಪಂದಿಸುವುದಿಲ್ಲ, ಜನರ ಸಮಸ್ಯೆಗೆ ಸ್ಪಂದಿಸುವ, ಹೋರಾಟ ಮಾಡುವ ಜಿ.ಎಸ್.ಬಸವರಾಜುಅವರನ್ನು ಗೆಲ್ಲಿಸಿಕೊಳ್ಳಬೇಕಿದೆ ಎಂದು ಹೇಳಿದರು.

      ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದಿನದ 18 ಗಂಟೆ ದುಡಿಯುತ್ತಿದ್ದಾರೆ. ಇದುದೇಶದಚುನಾವಣೆ, ದೇಶದ ಹಿತದೃಷ್ಠಿಯಿಂದ ಬಿಜೆಪಿ ಅಭ್ಯರ್ಥಿಯನ್ನುಗೆಲ್ಲಿಸುವ ಮೂಲಕ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕಿದೆ. ದೇಶವನ್ನು ಸುಭದ್ರಪಡಿಸಲು ಮೋದಿ ಅವರೊಂದಿಗೆ ನಾವೆಲ್ಲರೂ ಕೈ ಜೋಡಿಸಬೇಕಿದ್ದು, ಜಿಲ್ಲೆಯ ನೀರಾವರಿ ವಿಚಾರದಲ್ಲಿಅನ್ಯಾಯ ಮಾಡಿರುವ ದೇವೇಗೌಡ ಅವರನ್ನು ಸೋಲಿಸುವ ನಿಟ್ಟಿನಲ್ಲಿಎಲ್ಲರೂಕಾರ್ಯನಿರ್ವಹಿಸುವಂತೆಕರೆ ನೀಡಿದರು.

      ತುಮುಲ್ ನಿರ್ದೇಶಕ ರೇಣುಕಾ ಪ್ರಸಾದ್ ಮಾತನಾಡಿ ಬಿಜೆಪಿ ಅಭ್ಯರ್ಥಿಜಿ.ಎಸ್.ಬಸವರಾಜುಅವರನ್ನುಗೆಲ್ಲಿಸುವ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಂಘಗಳ ಪ್ರತಿನಿಧಿಗಳು ಹಾಗೂ ನಿರ್ದೇಶಕರುಗಳು ಶಕ್ತಿ ಮೀರಿ ಪ್ರಯತ್ನಿಸಬೇಕಿದೆ. ಮನೆ ಮನೆಗೆ ತೆರಳಿ ಬಿಜೆಪಿ ಸಾಧನೆಗಳನ್ನು ಮತದಾರನಿಗೆ ತಿಳಿಸುವ ಮೂಲಕ ಅವರ ಮನವೊಲಿಸಿ, ಬಿಜೆಪಿ ಪರ ಮತಚಲಾಯಿಸುವಂತೆ ಮಾಡಬೇಕಾಗಿರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಜಿ.ಎಸ್.ಬಸವರಾಜುಅವರಿಗೆ ಮತಕೊಡಿಸುವ ಮೂಲಕ ಅವರ ಗೆಲುವಿಗೆ ಕಾರಣೀ ಭೂತರಾಗೋಣ ಎಂದು ಕರೆ ನೀಡಿದರು. ಸಭೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ವಿವಿಧ ಹಾಲು ಉತ್ಪಾದಕರ ಸಂಘದ ಸದಸ್ಯರು, ನಿರ್ದೇಶಕರು, ಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link