ಡಿ.14ರಂದು “ಸೇಡು” ಚಿತ್ರ ರಾಜ್ಯಾದ್ಯಂತ ತೆರೆಗೆ

ದಾವಣಗೆರೆ:

    ಹೊಸಬರೇ ಸೇರಿ ನಿರ್ಮಾಣ ಮಾಡಿರುವ ‘ಸೇಡ್ ತಿರಸ್ಕೋಳೊ ವರೆಗೂ ಬಿಡುವುದಿಲ್ಲ ನಿನ್ನ” (ಸೇಡು) ಚಿತ್ರವು ಡಿ.14ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಟ ವಿಜಯ್ ಕಾರ್ತೀಕ್ ತಿಳಿಸಿದರು.

      ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಸ್ಪೆನ್ಸ್ ಥ್ರಿಲ್ಲರ್ ಮೂವಿಯಾಗಿರುವ ಸೇಡು ಚಿತ್ರವು ಡಿ.14ರಂದು ದಾವಣಗೆರೆ ಸೇರಿದಂತೆ ರಾಜ್ಯದ 77 ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಹೇಳಿದರು.

      ಚಿತ್ರದಲ್ಲಿ ನಾನು (ವಿಜಯ್ ಕಾರ್ತೀಕ್), ಶ್ರೀನಿಧಿ, ಯುವರಾಜ್ ಸಿಂಗ್, ಯತೀಶ್, ಲಕ್ಷ್ಮೀಶ್ ನಾಯಕ ನಟರಾಗಿ ಅಭಿನಯಿಸಿದ್ದು, ಸುಲಕ್ಷಾ ಹಾಗೂ ಭವ್ಯ ನಾಯಕಿಯರ ಪಾತ್ರ ನಿರ್ವಹಿಸಿದ್ದಾರೆ. ನಮ್ಮ ಈ ಏಳು ಜನರಲ್ಲಿ ಒಂದು ಪಾತ್ರ ಗುರಿಯೊಂದನ್ನು ಇಟ್ಟುಕೊಂಡು, ಗುರಿ ಮುಟ್ಟಲು ಪ್ರಯತ್ನಿಸದೇ, ಹಗಲುಗನಸು ಕಾಣುತ್ತಿರುತ್ತದೆ. ಈ ವೇಳೆ ಕೆಲ ಕಾರಣಗಳಲ್ಲಿ ವೈಮನಸ್ಸು ಮೂಡಿ, ಈ ವೈಮನಸ್ಸಿಗೆ ಕಾರಣವಾದವರನ್ನು ಪತ್ತೆ ಹಚ್ಚಿ, ಸೇಡು ತೀರಿಸಿಕೊಳ್ಳುವುದೇ ಚಿತ್ರದ ತಿರುಳಾಗಿದೆ ಎಂದು ಮಾಹಿತಿ ನೀಡಿದರು.

      ಯುವಕರು ಇಟ್ಟಿರುವ ಗುರಿ ಸಾಧಿಸಲು, ಛಲ ಬಿಡದೇ ಸತತ ಪರಿಶ್ರಮ ಹಾಕಿದಾಗ ಮಾತ್ರ ಗುರಿ ತಲುಪಲು ಸಾಧ್ಯ ಎಂಬ ಸಂದೇಶವನ್ನು ಚಿತ್ರ ನೀಡಿದೆ ಎಂದ ಅವರು, ನಾವೆಲ್ಲರೂ ಬೇರೆ, ಬೇರೆ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿದ್ದು, ನಮಗೆ ಬರುವ ವೇತನದಲ್ಲಿಯೇ ಇಂತಿಷ್ಟು ಹಣವನ್ನು ಕೂಡಿ ಇಟ್ಟು, ಸತತ ಮೂರುವರೆ ವರ್ಷಗಳ ಕಾಲ ಕಷ್ಟ ಪಟ್ಟು ಈ ಚಿತ್ರ ನಿರ್ಮಾಣ ಮಾಡಿದ್ದೇವೆ ಎಂದರು.

       ಕರ್ನಾಟಕದ ಮಂಗಳೂರು, ಭಟ್ಕಳ, ಕೊಪ್ಪ, ಶೃಂಗೇರಿ, ಬೆಂಗಳೂರು, ಮಂಡ್ಯ ಭಾಗದಲ್ಲಿ ಸತತ 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ. ಚಿತ್ರವು ಕೊನೆಯ ವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲಿದೆ. ನಮ್ಮ ಈ ಪ್ರಯತ್ನಕ್ಕೆ ಪ್ರೇಕ್ಷಕರು ಚಿತ್ರ ವೀಕ್ಷಿಸುವ ಮೂಲಕ ಸಹಕಾರ ನೀಡಬೇಕೆಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಚಿತ್ರ ತಂಡದ ಶ್ರೀನಿಧಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link