ಆಹಾರ ಪೊಟ್ಟಣಗಳ ಮೇಲಿನ ಕಡೆ ದಿನಾಂಕ ತಪ್ಪದೆ ಗಮನಿಸಬೇಕು

ಬರಗೂರು

       ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಬೇಕರಿ, ಹೋಟೆಲ್‍ಗಳು, ಪ್ರಾವಿಜನ್ ಸ್ಟೋರ್ಸ್‍ಗಳ ಮಾಲೀಕರು ಆಹಾರ ಸಾಗಾಟ, ಹಾಗೂ ಸಂಸ್ಕರಣೆ ಮಾಡುವವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರವಾನಗಿ ನೋಂದಣಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಸಿರಾ ತಾಲ್ಲೂಕು ಆಹಾರ ಸುರಕ್ಷತಾಧಿಕಾರಿ ಎನ್.ಟಿ. ಚಂದ್ರಪ್ಪ ಹೇಳಿದರು.

        ಸಿರಾ ತಾಲ್ಲೂಕು ಬರಗೂರು ಗ್ರಾಮದಲ್ಲಿ ಅಂಗಡಿ, ಬೇಕರಿ, ಹೋಟೆಲ್‍ಗಳಿಗೆ ಭೇಟಿ ನೀಡಿ ಸುರಕ್ಷಿತವಾದ ಶುದ್ದ ಆಹಾರದ ಬಗ್ಗೆ ಜಾಗೃತಿ ಮೂಡಿಸಿದರು.

        ಸುರಕ್ಷಿತ ಆಹಾರ ಮಾರಾಟ ಮಾಡುವುದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಆಹಾರದಿಂದ ಆಗುವ ತೊಂದರೆಯನ್ನು ತಪ್ಪಿಸಲು ಸಾಧ್ಯವಾಗುವುದು. ಯಾವುದೇ ರೀತಿಯ ಕಲಬೆರಕೆ ಕಂಡು ಬಂದಲ್ಲಿ ಸಾರ್ವಜನಿಕರು ಸಹ ಪ್ರಶ್ನಿಸುವ ಸಾಧ್ಯತೆ ಇರುತ್ತೆ. ಪಾಕೆಟ್‍ಗಳ ಮೇಲಿನ ಎಷ್ಟು ದಿನಗಳ ಒಳಗೆ ಬಳಸಬೇಕು ಎಂಬ ಕೊನೆ ದಿನಾಂಕವನ್ನು ಪ್ರತಿಯೊಬ್ಬರು ನೋಡಿ ಆಹಾರ ಪದಾರ್ಥಗಳನ್ನು ಬಳಸಬೇಕು. ಬರೀ ಮಾತ್ರೆ, ಜೌಷಧಿಗಳ ಕಾಲಾವಧಿ ಮುಗಿದು ಹೋಗಿದ್ದರೆ ಉಪಯೋಗಿಸಬಾರದು ಎಂದು ತಿಳಿಯವ ಮೊದಲು ಆಹಾರ ಪದಾರ್ಥಗಳ ಮೇಲಿನ ಕಾಲಾವಧಿ ನೋಡಿ ಬಳಸಬೇಕು ಎಂದರು.

        ಆರೋಗ್ಯ ಇಲಾಖೆಯ ಮನುಕಿರಣ್, ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ಕಾರ್ಯಕರ್ತರಾದ ಬಿ.ಸಿ. ಬಸವರಾಜು, ಹೋಟೆಲ್ ರಾಜಶೇಖರ್, ಶ್ರೀನಿವಾಸ್ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap