ತಾಲ್ಲೂಕು ಆಡಳಿತದಿಂದ ಸೀಡ್ ಬಾಲ್ ತಯಾರಿಕೆ

ಗುಬ್ಬಿ

     ಪರಿಸರ ಸಂರಕ್ಷಣೆಯಿಂದ ಮಾತ್ರ ವಿನಾಶದಂಚಿಗೆ ತಲುಪಿರುವ ಅಮೂಲ್ಯವಾದ ಪರಿಸರವನ್ನು ಉಳಿಸಲು ಸಾಧ್ಯವಿದ್ದು ಈನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸುವ ಮೂಲಕ ಅಮೂಲ್ಯವಾದ ಅರಣ್ಯ ಸಂಪತ್ತನ್ನು ಉಳಿಸಿ ಬೆಳೆಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ವಲಯ ಅರಣ್ಯಧಿಕಾರಿ ಹೆಚ್.ಆರ್.ರಮೇಶ್ ತಿಳಿಸಿದರು.

     ತಾಲೂಕಿನ ಗುಬ್ಬಿ ಹೊಸಹಳ್ಳಿ ಸಸ್ಯಕ್ಷೇತ್ರದಲ್ಲಿ ಅರಣ್ಯ ಇಲಾಖೆ, ತಾಲೂಕು ಪಂಚಾಯತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸ್ವ ಸಹಾಯಕರು ಮತ್ತು ವಿದ್ಯಾರ್ಥಿಗಳು ಸಹಯೋಗದೊಂದಿಗೆ ಸೀಡ್ ಬಾಲ್ ತಾಯಾರಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು ಅತ್ಯಂತ ಕಡಿಮೆ ಖರ್ಚಿನಲ್ಲಿ ಸಸ್ಯಗಳನ್ನು ಬೆಳೆಯಲು ವಿಶೇಷವಾದ ಮಾರ್ಗವಾಗಿದೆ ಇದರಲ್ಲಿ ಎಲ್ಲಾ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳು ಭಾಗವಹಿಸಿದ್ದು ಇದು ಸಾರ್ವಜನಿಕ ಜಾಗೃತಿಯಾಗಬೇಕಾಗಿದೆ ಎಂದು ತಿಳಿಸಿದರು.

     ಶ್ರೀಗಂದ ಹುಣಸೆ,ಕಾಡುಜಾಲಿ,ಹೊಂಗೆ,ನೇರಲೆ ಹಾಗೂ ಬೇವು ಇಂತಹ ಹಲವು ಜಾತಿಯ ಬೀಜಗಳನ್ನು ಮಣ್ಣಿನ ಉಂಡೆಯಲ್ಲಿ ಹಾಕಿ ಬೀಜದ ಉಂಡೆ ನಿರ್ಮಾಣ ಮಾಡಲಾಗುತ್ತಿದೆ ಇಂದು ಸುಮಾರು 10 ಸಾವಿರ ವಿವಿಧ ಜಾತಿಯ ಬೀಜದ ಉಂಡೆಗಳನ್ನು ಮಾಡಿ ಅವುಗಳನ್ನು ಅರಣ್ಯ ಪ್ರದೇಶಗಳು, ರಸ್ತೆ ಬದಿಗಳು ಶಾಲಾ ಕಾಲೇಜು ವಲಯಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಅರಣ್ಯ ಭಾಗದಲ್ಲಿ ಹಾಕಲಾಗುತ್ತದೆ ಇದರಿಂದ ಸಾಕಷ್ಟು ಅರಣ್ಯ ಬೆಳೆಸಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

      ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಸಾಲರ್ ಅಹಮದ್, ಕರಿಯಪ್ಪ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ವರ್ಗದವರು, ಸ್ವ ಸಹಾಯ ಗುಂಪಿನ ಸದಸ್ಯರು ಹಾಗೂ ಹೊಸಹಳ್ಳಿ ಶಾಲೆಯ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap