ರಾಜಭವನದ ಗಾಂಧಿ ವಿಚಾರ ಸಂಕಿರಣಕ್ಕೆ ಆಯ್ಕೆ

ದಾವಣಗೆರೆ;

        ಬೆಂಗಳೂರಿನ ರಾಜಭವನದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಜರುಗಲಿರುವ ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಹಾಗೂ ತತ್ವಗಳು ಎಂಬ ವಿಷಯ ಕುರಿತಾದ ವಿಚಾರ ಸಂಕಿರಣದಲ್ಲಿ ಪತ್ರಿಕೆ ಮಂಡಿಸಲು ದಾವಣಗೆರೆ ವಿಶ್ವವಿದ್ಯಾಲಯದ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

       ವಿಶ್ವವಿದ್ಯಾಲಯದ ವಿಜ್ಞಾನ ಭವನದಲ್ಲಿ ಬುಧವಾರ ನಡೆದ ಆಯ್ಕೆ ವಿಚಾರ ಸಂಕಿರಣದಲ್ಲಿ ಅತ್ಯುತ್ತಮ ಪತ್ರಿಕೆ ಮಂಡಿಸಿದ ಆಯೇಷಾ ಸಿದ್ಧಿಕಾ(ಸಮಾಜಶಾಸ್ತ್ರ ವಿಭಾಗ), ನಂದಿನಿ(ಪತ್ರಿಕೋದ್ಯಮ ವಿಭಾಗ), ಎಂ.ಬಸಯ್ಯ(ಅರ್ಥಶಾಸ್ತ್ರ ವಿಭಾಗ), ತಿಪ್ಪೇಸ್ವಾಮಿ (ಸಮಾಜಶಾಸ್ತ್ರ ವಿಭಾಗ) ಅವರುಗಳನ್ನು ಬೆಂಗಳೂರಿನ ವಿಚಾರ ಸಂಕಿರಣಕ್ಕೆ ಆಯ್ಕೆ ಮಾಡಲಾಯಿತು.

       ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಹಾಗೂ ತತ್ವಗಳನ್ನು ಕುರಿತಾದ ವಿಷಯದ ಮೇಲೆ ಪತ್ರಿಕೆ ಮಂಡಿಸಲು ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆಗೆ ವಿಶ್ವವಿದ್ಯಾಲಯದ ಪ್ರತಿಯೊಂದು ವಿಭಾಗಗಳಿಂದ ತಲಾ ಇಬ್ಬರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಂತ ಒಟ್ಟು 52 ವಿಧ್ಯಾಥಿಗಳನ್ನು ಆಹ್ವಾನ್ವಿಸಲಾಗಿತ್ತು. ಕಾರ್ಯಕ್ರಮದ ತೀರ್ಪುಗಾರರಾಗಿ ವಾಣಿಜ್ಯ ನಿಕಾಯದ ಡೀನ್ ಪ್ರೊ.ಪಿ.ಲಕ್ಷ್ಮಣ, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಎಸ್.ಸುಚಿತ್ರಾ ಪಾಲ್ಗೊಂಡಿದ್ದರು. ಉತ್ತಮವಾಗಿ ಪತ್ರಿಕೆ ಮಂಡನೆ ಮಾಡಿದ ನಾಲ್ವರು ವಿದ್ಯಾರ್ಥಿಗಳನ್ನು ಕೆಲವು ನಿರ್ದಿಷ್ಟ ಮಾನದಂಡ ಆಧರಿಸಿ ಅಂತಿಮಗೊಳಿಸಲಾಯಿತು.

         ಉಪಕುಲಪತಿ ಪ್ರೊ.ಎಸ್.ವಿ.ಹಲಸೆ, ಕುಲಸಚಿವ ಪ್ರೊ.ಪಿ.ಕಣ್ಣನ್, ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕ ಪ್ರೊ.ಕೆ.ಬಿ.ರಂಗಪ್ಪ, ಕಲಾ ನಿಕಾಯದ ಡೀನ್ ಪ್ರೊ.ಬಿ.ಪಿ.ವೀರಭದ್ರಪ್ಪ, ರಾಜ್ಯಶಾಸ್ತ್ರ ವಿಭಾಗದ ಬೋಧನಾ ಸಹಾಯಕರಾದ ಡಾ.ಶ್ರೀಧರ ಬಾರ್ಕಿ, ಬಿ.ಧನಂಜಯಮೂರ್ತಿ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap