ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಟಿ.ಭಾರತಿ ಆಯ್ಕೆ

ಹರಪನಹಳ್ಳಿ

         ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟದ ಜೋಡೋ ಸ್ಪರ್ಧೆಗೆ ತಾಲ್ಲೂಕಿನ ಹಾರಕನಾಳು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಟಿ.ಭಾರತಿ ಆಯ್ಕೆಯಾಗಿದ್ದಾಳೆ.

           ಹಾರಕನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಕಟ್ಟಿ ಗ್ರಾಮದ ಮರಡಿ ಬಸಪ್ಪ, ಲಕ್ಷ್ಮಮ್ಮ ಅವರ ಪುತ್ರಿ ಭಾರತಿ 9ನೇ ತರಗತಿ ಅಭ್ಯಾಸ ಮಾಡುತ್ತಿದ್ದಾಳೆ. ಬೆಂಗಳೂರಲ್ಲಿ ನಡೆದ ರಾಜ್ಯಮಟ್ಟದ ಜೋಡೋ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಂಗಾರದ ಪದಕ ತನ್ನದಾಗಿಸಿಕೊಂಡಿದ್ದಳು. 2018ರಲ್ಲಿ ಹಿಮಾಚಲಪ್ರದೇಶ ಹಾಗೂ 2017ರಲ್ಲಿ ನಡೆದ ರಾಷ್ಟ್ರಮಟ್ಟದ ಜೋಡೋ ಪಂದ್ಯಾವಳಿ ಭಾಗವಹಿಸಿ ಕ್ರೀಡಾಸಕ್ತರ ಮೆಚ್ಚುಗೆಗೆ ಪಾತ್ರಳಾಗಿದ್ದಳು.

          ಸದ್ಯ ಪುಣೆಯಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಗ್ರಾಮೀಣ ಪ್ರತಿಭೆ ಭಾರತಿ ಉತ್ತಮ ಸಾಧನೆ ಮಾಡುವ ತವಕದಲ್ಲಿದ್ದಾಳೆ. `ಮುಂಬರುವ ಪಂದ್ಯವಾಳಿಯಲ್ಲಿ ಚಿನ್ನದ ಪದಕ ಪಡೆಯುವ ಗುರು ಹೊಂದಿದ್ದೇನೆ. ಸಂಜೀವಕುಮಾರ ಹಾಗೂ ಡಿ.ಬಾಷಾ ಅವರ ಮಾರ್ಗದರ್ಶನವೇ ನನ್ನ ಈ ಸಾಧನೆಗೆ ಕಾರಣ’ ಎಂದು ಭಾರತಿ ಸ್ಮರಿಸಿದರು.

          ಭಾರತಿ ಕ್ರೀಡಾ ಆಸಕ್ತಿಗೆ ತಂದೆ ಮರಡಿ ಬಸಪ್ಪ ತಾಯಿ ಲಕ್ಷ್ಮಮ್ಮ ಹಾಗೂ ಮಾವ ಗಾಟಿನ ಬಸವರಾಜ ಪ್ರೋತ್ಸಾಹ ನೀಡುತ್ತಿದ್ದಾರೆ. ವಿದ್ಯಾರ್ಥಿನಿ ಭಾರತಿ ಸಾಧನೆಗೆ ಹಾರಕನಾಳು, ಹುಲಕಟ್ಟಿ ಗ್ರಾಮಸ್ಥರು, ಎಸ್.ಡಿ.ಎಂ.ಸಿ ಸಮಿತಿ ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link