ತುಮಕೂರು:
ಗುರುಶ್ರೀ ಕಾಲೇಜ್ ಆಫ್ ಕಾಮರ್ಸ್ ಸೋಶಿಯಲ್ ವರ್ಕ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಸಂಭ್ರಮ ಎಂಬ ಶೀರ್ಷಿಕೆಯಡಿಯಲ್ಲಿ ಬಿ ಕಾಂ ಮತ್ತು ಎಂ ಕಾಂ ವಿದ್ಯಾರ್ಥಿಗಳು ಆಯೋಜಿಸಿದ್ದು ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡಿಗೆ ಸಮಾರಂಭವನ್ನು ಸಿದ್ದಗಂಗಾ ಪಾರ್ಮಸಿ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮ ವನ್ನು ಉದ್ಘಾಟಿಸಿ ಗುರುಶ್ರೀ ಕಾಲೇಜಿನ ಸಂಸ್ಥಾಪಕರಾದ ಹೆಚ್ ಜಿ ಬಸವರಾಜುರವರು ಕಾರ್ಯಕ್ರಮವನ್ನು ಕುರಿತು ಕಾಲೇಜು ಹಾಗೂ ವಿದ್ಯಾರ್ಥಿಗಳ ಸಂಬಂಧ ಚೆನ್ನಾಗಿ ಮೂಡಿ ಬರುತ್ತಿದ್ದು ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು ಜಾಗತೀಕರಣದ ಯುಗದಲ್ಲಿ ನಿಮ್ಮ ಪಾತ್ರವು ಬಹಳ ಮುಖ್ಯವಾಗಿರುತ್ತದೆ ಹಾಗೂ ನಿಮ್ಮ ಮುಂದಿನ ಜೀವನವು ಸುಖವಾಗಿರಲಿ ಎಂದು ಹಾರೈಸಿದರು ನಂತರ ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಬಿ ಶೇಖರ್ ರವರು ಮಾತನಾಡಿ ಗುರುಶ್ರೀ ಕಾಲೇಜ್ ಹಿಂದಿನಿಂದಲೂ ಒಳ್ಳೆಯ ವಿದ್ಯಾಭ್ಯಾಸವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಸಂಯೋಜಿತ ಕಾಲೇಜುಗಳಲ್ಲಿ ತನ್ನದೇ ವಿಶಿಷ್ಟತೆಯನ್ನು ಗುರುಶ್ರೀ ಕಾಲೇಜ್ ಹೊಂದಿದೆ ಪರಮಪೂಜ್ಯ ಆಶೀರ್ವಾದದೊಂದಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯನಿರ್ವಹಿಸಲಿ ಹಾಗೂ ನಿಮ್ಮ ಮುಂದಿನ ಜೀವನವು ಉಜ್ವಲವಾಗಿರಲಿ ಎಂದು ಹೇಳಿದರು
ಹಾಗೂ ಹಿರಿಯ ಎಂ ಕಾಂ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅನುಭವವನ್ನು ಅಭಿಪ್ರಾಯಗಳಲ್ಲಿ ದೊಡ್ಡ ಕನಸುಗಳನ್ನು ಹೊತ್ತುಕೊಂಡು ಕಾಲೇಜಿಗೆ ಬಂದಿದ್ದೆವು ನಮ್ಮ ಗುರಿ ಮತ್ತು ಕನಸುಗಳು ಈ ಕಾಲೇಜಿನಿಂದ ನನಸು ಮಾಡಿಕೊಳ್ಳುವುದಕ್ಕೆ ಸಾಧ್ಯವಾಯಿತು
ಎಂದು ಅಭಿಪ್ರಾಯಪಟ್ಟರು ನಂತರ ಗುರುಶ್ರೀ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ದಿನೇಶ್ ರವರು ಮಾತನಾಡಿ 2012- 13ನೇ ಸಾಲಿನಿಂದ ಇಲ್ಲಿಯವರೆಗೆ ಒಟ್ಟು 230 ಬಿ ಕಾಂ ಹಾಗೂ 304 ಎಂ ಕಾಂ ಪದವಿಧರರು ಈ ಸಂಸ್ಥೆಯಿಂದ ಪದವಿ ಪೂರ್ಣಗೊಳಿಸಿ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೆ ಶ್ರೀ ಪರಮಪೂಜ್ಯರ ಆಶೀರ್ವಾದದಿಂದ ಇನ್ನೂ ಹೆಚ್ಚಿನ ರೀತಿಯಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು
ಕೊನೆಯಲ್ಲಿ ಸಿದ್ದಗಂಗಾ ಕಾಲೇಜಿನ ನಿವೃತ್ತಿ ಪ್ರಾಂಶುಪಾಲರಾದ ವೀರಭದ್ರಯ್ಯ ನವರು ಮಾತನಾಡಿ ಹಣ ಕೊಡಬಹುದು ಮನೆ ಕೊಡಬಹುದು ವಿದ್ಯೆ ಕೊಡಲಾದಿತೆ ವಿದ್ಯೆ ಇಲ್ಲದವನ ವರ್ತನೆಗೂ ಇರುವವನ ವರ್ತನೆಗೆ ಅನಂತ ವ್ಯತ್ಯಾಸಗಳಿವೆ ಮನುಷ್ಯನು ಬೇಳೆದರೆ ಬೆಟ್ಟ ಗುಡ್ಡವ ಹೀರಿ ಬೆಳೆಯುವಂತಹ ತೇಗವಾಗಿ ನಾಲ್ಕಾರು ಜನರಿಗೆ ಉಪಯೋಗವಾಗುವಂತಿರಬೇಕು ನಂತರ ಕೊನೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರಯ್ಯ ನವರು ಸಂಭ್ರಮ ಕಾರ್ಯಕ್ರಮ ಕುರಿತು ಅನೇಕ ನೀತಿಗಳು ದುಷ್ಟಾಂತಗಳು ನಿಮ್ಮ ಮುಂದೆ ಇಟ್ಟಿರುವುದು ಎಲ್ಲಾ ನಿಮ್ಮ ಅಭಿವೃದ್ಧಿಗಾಗಿ ಮತ್ತು ನಿಮ್ಮ ತಂದೆ ತಾಯಿಗಳ ಕನಸುಗಳನ್ನು ಈಡೇರಿಸಿಕೊಳ್ಳುವುದಕ್ಕೆ ನೀವು ಯಾವಾಗಲೂ ಕ್ರಿಯಾಶೀಲರಾಗಿರಬೇಕು ಎಂದು ಕ್ರಿಯಾಶೀಲರಾಗಿ ಇರಬೇಕೆಂದು ತಿಳಿಸಿದರು ಕಾರ್ಯಕ್ರಮದಲ್ಲಿ ಸಿದ್ದಾರ್ಥ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ ಎಸ್ ಕುಮಾರ್ ಹಾಗೂ ಗುರುಶ್ರೀ ಕಾಲೇಜಿನ ಸಿದ್ದೇಶ್ ಪ್ರಜ್ವಲ್ ಪ್ರದೀಪ್ ಸತೀಶ್ ಬಿಂದು ಲೋಕೇಶ್ ಹಾಗೂ ಸಮಾಜ ಕಾರ್ಯದ ಪ್ರಾಧ್ಯಾಪಕರಾದ ಪ್ರಕಾಶ್ ಮತ್ತು ಸಿಬ್ಬಂದಿ ವರ್ಗದವರು ಮತ್ತಿತರರು ಹಾಜರಾಗಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
