ಮೂರು ಅಂಗಡಿಗಳಲ್ಲಿ ಸರಣಿ ಕಳ್ಳತನ

ಮಿಡಿಗೇಶಿ

      ಮಾ.3 ಕಳೆದ ಎರಡು ಮೂರು ತಿಂಗಳುಳಿಂದ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಪೋಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಹಲವಾರು ಗ್ರಾಮಗಳಲ್ಲಿ ವಿವಿಧ ರೀತಿಯ ಕ್ರೈಮ್‍ಗಳು ನಡೆಯುತ್ತಿರುವ ಬಗ್ಗೆ ಈಗಾಗಲೇ ಸ್ಥಳೀಯ ಪತ್ರಿಕೆಗಳಲ್ಲಿ ಹಾಗೂ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಹಾಗೂ ದೃಶ್ಯಮಾದ್ಯಮಗಳಲ್ಲಿ ಕಳ್ಳತನಗಳು ನಡೆಯುತ್ತಿರುವ ಬಗ್ಗೆ ಸುದ್ದಿಗಳು ಪ್ರಚಾರಗೊಂಡಿರುವ ವಿಷಯ ರಕ್ಷಣಾ ಇಲಾಖೆಯ ತಾಲ್ಲೂಕು ಮಟ್ಟದ, ಸಬ್‍ಡಿವಿಜನ್ ಮಟ್ಟದ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳವರುಗಳಿಗೆ ತಿಳಿಯದಿರುವ ವಿಷಯವೇನು ಆಗಿಲ್ಲವಾದರೂ ಸಹ ಸದರಿ ಮೇಲ್ಕಂಡ ಅಧಿಕಾರಿಗಳವರು ಮೌನವಾಗಿರುವುದು ಸ್ಷಷ್ಟವಾಗಿ ತಿಳಿದು ಬರುತ್ತಿದೆ ಎಂಬುದಾಗಿ ಪತ್ರಿಗೆ ಪ್ರಜ್ಞಾವಂತ ನಾಗರೀಕರು ದೂರು ನೀಡಿರುತ್ತಾರೆ.

     ಆದ್ದರಿಂದ ಇನ್ನಾದರೂ ತುಮಕೂರು ಇಲ್ಲೆಯ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳವರು ಹೆಚುತ್ತಿರುವ ಕಳ್ಳತನಗಳು ನಡೆಯದಂತೆ ಗಮನ ಹರಿಸಲು ಮುಂದಾಗುವರೇ ಕಾದು ನೋಡೋಣವೇ?

     ಇತ್ತೀಚಿನ ದಿನಗಳಲ್ಲಿ ನಾಟಿ ಹಸುಕರು, ಸೀಮೆ ಹಸು ಕರುಗಳ, ದ್ವಿಚಕ್ರ ವಾಹನಗಳ ಕಳವು ಹೊಲಗದ್ದೆಗಳಲ್ಲಿ ರೈತರು ಬೇಳೆದಿರುವಂತಹ ವಾಣಿಜ್ಯ ಬೆಳೆಗಳ ಕಳವು ಇತ್ಯಾದಿ ಹಾಗೂ ಈ ಹಿಂದೆ ಹೊಸಕೆರೆ ಹೊರವಲಯದಲ್ಲಿನ ಎರಡು ವೈನ್ಸ್‍ಗಳ ಮದ್ಯ ಕಳವು ಇತ್ಯಾದಿಗಳು, ಮತೆ ಕೆಲವು ಹಸು ಕರುಗಳ ಕಳವು ವಿಫಲ ಯತ್ನಗಳು ನಡೆದಿರುತ್ತವೆ.

      ತಾ 02-03-2019 ರಂದು ರಾತ್ರಿ ಮಧುಗಿರಿ -ಪಾವಗಡ ರಾಜ್ಯದ ಹೆದ್ದಾರಿ. ರಸ್ತೆ ಹೊಸಕೆರೆಯ ಬಸ್ ನಿಲ್ದಾಣದ ಬಳಿಯ ಮೂರು ಅಂಗಡಿಗಳಲ್ಲಿ ಸರಳಿ ಕಳ್ಳತನಗಳು ನಡೆದಿದ್ದು ಸದರಿ ಅಂಗಡಿ ಮಾಲೀಕರು ಮಿಡಿಗೇಶಿ ಪೋಲೀಸ್ ಠಾಣೆಗೆ ಲಿಖಿತ ದೂರನ್ನು ನೀಡುವುದಾಗಿ ಪತ್ರಿಕೆಗೆ ತಿಳಿಸಿರುತ್ತಾರೆ, ಅಂಗಡಿ ಮಾಲೀಕರು ನೀಡುವ ದೂರನ್ನು ಮಿಡಿಗೇಶಿ ಪೋಲೀಸಿನವರು ದಾಖಲಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟ ವಿಚಾರವಾಗಿರುತ್ತದೆ.

1) ಅಂಗಡಿ ತಮ್ಮಣ್ಣ

      ಅಂಗಡಿಯ ಹಿಂಬದಿಯ ಜಂಕ್ಷೀಟ್ ತಗಡು ಕತ್ತರಿಸಿ ಒಳ ನುಗ್ಗಿದ ಕಳ್ಳರು ಗಟ್ಕಾ ಹಾಗೂ ಸಿಗರೇಟ್ ಗಳು ಸೇರಿದಂತೆ ಹದಿನೆಂಟು ಸಾವಿರ ಬೆಲೆ ಬಾಳುವ ಸಾಮಾನುಗಳು ಹಾಗೂ ಸಿಲ್ವರ್ ಬಾಕ್ಸ್ ಹಾಗೂ ಮಣ್ಣಿನ ಹುಂಡಿಯಲ್ಲಿ ಸಂಗ್ರಹಿಸಿದ್ದಂತಹ ಸುಮಾರು ಹದಿಮೂರು ಸವಿರ ನಗದು ಹಣ ಹಾಗೂ ಎಂಟು ನೂರು ಬಾಳುವ ಕನ್ನಡಕ ಕಳುವಾಗಿರುವುದಾಗಿ ತಿಳಿಸಿರುತ್ತಾನೆ.

  2) ಅಂಗಡಿಯ ವಿಜಯ್ ಕುಮಾರ್

      ಐದಾರು ಸಾವಿರ ರೂ ಬೆಲೆ ಬಾಳುವ ಸಿಗರೇಟ್ ಹಾಗೂ ಗುಟ್ಕಾ ವಸ್ತುಗಳು ಮತ್ತು ಐದು ನೂರು ನಗದು ಹಣ

3) ಅಂಗಡಿಯ ಬಸವಲಿಂಪ್ಪ

       ಅಂಗಡಿಯ ಮೇಲ್ಚಾವಣಿಯ ಜಂಕ್ಷೀಟ್ ಕತ್ತರಿಸಿ ಒಳ ನುಗ್ಗಿದ ಕಳ್ಳರು ಎರಡರಿಂದ ಮೂರು ಸಾವಿರ ನಗದು ಹಣ ಹಾಗೂ ನಾಲ್ಕೈದು ಸಾವಿರ ಬೆಲೆ ಬಾಳುವ ಸಿಗರೇಟ್ ಹಾಗೂ ಗುಟ್ಕಾ ವಸ್ತುಗಳು ಕಳುವಾಗಿರುವುದಾಗಿ ತಿಳಿಸಿರುತ್ತಾರೆ. ಸಾರ್ವಜನಿಕರ ಆರೋಪ ಹೊಸಕೆರೆ ಬಸ್ ನಿಲ್ದಾಣದ ಬಳಿಯಿಂದ ರಾತ್ರಿ ಪಹರೆಗೆ ಬರುವಂತಹ ರಕ್ಷಣಾ ಸಿಬ್ಬಂದಿಯವರುಗಳಿಗೆ ಪಾವಗಡ, ಮಿಡಿಗೇಶಿ ಹೋಬಳಿಯಿಂದ ರಾತ್ರಿಸಮಯದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಭಂಧಿಸಿದ ಅಕ್ರಮ ಕಲ್ಲಿನ ಡಿಮ್ಮಿಗಳು ಹಾಗೂ ಅಕ್ರಮಮರಳು ಸಾಗಾಣಿಯ ಲಾರಿ, ಟಿಪ್ಪರ್, ಟ್ರ್ಯಾಕ್ಟರ್‍ಗಳ ತಪಾಸಣೆ ಬಿಟ್ಟರೆ ಹೊಸಕೆರೆ ಒಳಗಡೆ ರಾತ್ರಿ ಪಹರೆಯಲ್ಲಿ ತಿರುಗಿಯೂ ನೋಡುವುದಿಲ್ಲ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link