ಮಿಡಿಗೇಶಿ
ಜ.30 ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ನೂತನ ರೈಲ್ವೆ ಸಂಪರ್ಕಗಳು ರಸ್ತೆ ನಿರ್ಮಿಸಲು ಬೇಕಾದ ಭೂಮಿಯ ಸ್ವಾಧೀನ ಪಡಿಸಿಕೊಳ್ಳುವ ಮುನ್ನ ರೈಲ್ವೆ ಭೂ ಸ್ವಾಧೀನ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ರೆವಿನ್ಯೂ ಕಂದಾಯ ಇಲಾಖೆಯ ಅಧಿಕಾರಿಗಳವರು ಒಟ್ಟಿಗೆ ಸೇರಿ ರೈತರುಗಳ ಸಮ್ಮುಖದಲ್ಲಿ ಭೂಸ್ವಾಧೀನಕ್ಕೆ ಚಾಲನೆ ನೀಡಬೇಕಾಗಿರುವುದು ಘನ ಸರ್ಕಾರಗಳ ಅಧಿಕೃತ ಆದೇಶವಾಗಿರುತ್ತದೆಯಾದ್ದರಿಂದ ಇದಕ್ಕೆ ಸಂಬಂಧಿಸಿದ ತುಮಕೂರಿನಿಂದ ರಾಯದುರ್ಗದವರೆವಿಗಿನ ಭೂ ಸ್ವಾಧೀನನದ ರೈಲ್ವೆ ಅಧಿಕಾರಿ ಮೃತ್ಯುಂಜಯ, ಅಪರ ಜಿಲ್ಲಾಧಿಕಾರಿ ಚನ್ನ ಬಸಪ್ಪ.ಕೆ,
ಸಭೆಯಲ್ಲಿ ಪಾಲ್ಗೊಂಡಿದ್ದು ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ರೆವೆನ್ಯೂ ಕಂದಾಯಾಧಿಕಾರಿ, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷ ಪಾನೇತ್ರಪ್ಪ, ವಿಷಯ ನಿರ್ವಾಹಕ ನಂಜುಂಡಯ್ಯ, ಹೊಸಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು, ಹೊಸಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ರೈಲ್ವೆ ರಸ್ತೆಗೆ ಭೂಮಿಯನ್ನು ನೀಡುತ್ತಿರುವ ರೈತಾಪಿ ವರ್ಗದವರು ತಾ 29-01-2019 ರಂದು ಮದ್ಯಾಹ್ನ ನಾಲ್ಕು ಗಂಟೆಯ ವೇಳೆಯಲ್ಲಿ ಹೊಸಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿನ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದು ಭೂಸ್ವಾಧೀನದ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಸಂಗ್ರಹಿಸಿ ಮಾತುಕತೆ ನಡೆಸಿದರು.
ರೈಲ್ವೆ ಭೂಸ್ವಾಧೀನ ಅಧಿಕಾರಿ ಮೃತ್ಯುಂಜಯರವರು ಮಾತನಾಡಿ ಈಗಾಗಲೇ ಜಿಲ್ಲೆಯ ಪಾವಗಡ ತಾಲ್ಲೂಕಿನ ಅವಾರ್ಡ್ ಆಗಿದ್ದು (ಪರಿಹಾರ ಕೊಡಲು ಸಿದ್ಧತೆಯಾಗಿದೆ) ಜಿಲ್ಲಾಧಿಕಾರಿಗಳವರ ಅನುಮೋದನೆ ಆಗಬೇಕಾಗಿರುತ್ತದೆ, ಕೊರಟಗೆರೆ ತಾ. ಪುನರ್ ವ್ಯವಸ್ಥೆಗೆ ಸಿದ್ಧವಾಗಿದೆ (ಫೈನಲ್ ಗೆ ರೆಡಿಯಾಗಿದೆ) ಮಧುಗಿರಿ ತಾಲ್ಲೂಕು ಪ್ರಾರಂಭವಾಗಿರುವುದಾಗಿ ತಿಳಿಸಿದರು, ಮಧುಗಿರಿ ತಾಲ್ಲೂಕಿನ ಬಿಜವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ 34 ಎಕರೆ ಹಳೆಕಾಯ್ದೆ ಪ್ರಕಾರ ಸ್ವಾದೀನ ಪಡಿಸಿಕೊಂಡಿರುವುದಾಗಿ ತಿಳಿಸಿದರು. ಸದರಿ ಸರ್ಕಾರ ನೀಡುವ ಪರಿಹಾರದ ಹಣವನ್ನು ಭೂ ಸ್ವಾಧೀನ ಪಡಿಸಿಕೊಂಡಂತಹ ಫಲಾನುಭವಿ ರೈತನ ಬ್ಯಾಂಕ್‍ನ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಹಣವನ್ನು ಜಮೆ ಮಾಡಲಾಗುವುದೆಂದು ತಿಳಿಸಿದರು.
ತಾ 01-01-2014 ರ ಸರ್ಕಾರದ ಸುತ್ತೋಲೆ ಅನ್ವಯವಾಗಲಿದೆಯೆಂದು ತಿಳಿಸಿದರು ಹಾಗೂ ಭೂಸ್ವಾಧೀನ ಸರ್ಕಾರ ಪಡಿಸಿಕೊಂಡ ದಿನದಿಂದ ರೈತನ ಖಾತೆಗೆ ಪರಿಹಾರದ ಹಣ ಸೇರುವವರೆಗೆ ಸಾಂತ್ವನ ಶೇಕಡ 12% ಅಧಿಕ ಮಾರುಕಟ್ಟೆ ಬೆಲೆ ಸೇರಿಸಿ ಹಣವನ್ನು ಜಮೆ ಮಾಡಿಕೊಡಲಾಗುವುದೆಂದು ತಿಳಿಸಿದರು. ತುಮಕೂರಿನಿಂದ ಆಂಧ್ರದ ರಾಯದುರ್ಗದವರೆಗೆ 102 ಕಿ,ಮೀಟರ್ ದೂರ ಅಂತರವಿರುವುದಾಗಿ ತಿಳಿಸಿದರು.
ಒಂದು ಎಕರೆಗೆ ಪರಿಹಾರ ಕಾನೂನಿನ ಪ್ರಕಾರ ಆಯಾ ತಾಲ್ಲೂಕಿನ ಸಬ್‍ರಿಜಿಸ್ಟರ್ ಅಧಿಕಾರಿಗಳವರು ಆಯಾ ಗ್ರಾಮದ ವ್ಯಾಪ್ತಿಯಲ್ಲಿನ ಭೂಮಿಯ ಬೆಲೆಯನ್ನಾಧರಿಸಿ ಹಾಗೂ ಮೂರು ವರ್ಷದ ಕಾಲಾವಧಿಯಲ್ಲಿ ಆ ಗ್ರಾಮದಲ್ಲಿನ ನಡೆದಿರುವ ಮಾರಾಟದ ಬೆಲೆಗಳನ್ನು ಸಂಗ್ರಹಿಸಿ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿರುವ ಬೆಲೆಯನ್ನ ನಿಗದಿಪಡಿಸಲಾಗುವುದು.
ತಾಲ್ಲೂಕು, ಜಿಲ್ಲೆ, ಪಟ್ಟಣ, ಪ್ರದೇಶ ವಾಪ್ತಿಗೆ ಸೇರಿದ ಐದು ಕಿ,ಮೀ ದೂರದವರೆಗಿನ ದರ ನಿಗದಿ ಪಡಿಸಿ ಒಂದೂವರೆ ಪಟ್ಟು ಜಾಸ್ತಿ ಬೆಲೆ ಕೊಡಲಾಗುವುದು. ರೈಲ್ವೆ ಮಾರ್ಗಕ್ಕೆ ಸ್ವಾಧೀನ ಪಡಿಸಿಕೊಳ್ಳಲಿರುವ ಭೂಮಿಯಲ್ಲಿ ತೆರೆದ ಬಾವಿ, ಕೊಳವೆಬಾವಿ, ತೋಟಗಳು, ಹುಣಸೆ, ಮಾವು, ತೆಂಗು, ಅಡಿಕೆ, ತೇಗ, ಹೊನ್ನೆ, ಬೇವಿನ ಮರ, ಇತ್ಯಾದಿ ಬೆಲೆಬಾಳುವಂತಹ ಮರಗಿಡಗಳು ಕಟಾವುಗಳಾಗುವ ಸಂದರ್ಭ ಒದಗಿ ಬಂದಲ್ಲಿ ಸದರಿ ಗಿಡಮರಗಳ ಅಂದಾಜು ನಷ್ಠದ ಬಗ್ಗೆ ಖಾತರಿ ಪಡಿಸಿಕೊಂಡು ಪರಿಹಾರ ನೀಡಲಾಗುವುದೆಂದು ತಿಳಿಸಿದರು.
ಭೂಸ್ವಾಧೀನ ಸಂದರ್ಭದಲ್ಲಿ ಏನಾದರೂ, ಯಾರಾದರೂ, ಕೈ ತಪ್ಪಿಹೋಗಿದ್ದಲ್ಲಿ ಅಂತಹವರು ಅರ್ಜಿಗಳನ್ನು ಹಾಗೂ ಇಲಾಖೆಯ ನಿಗದಿ ಪಡಿಸಲಾಗಿರುವ ದಾಖಾಲಾತಿಗಳನ್ನು ಇಲಾಖೆಗೆ ನೀಡಲು ಕಾಲಾವಕಾಶ ನೀಡಿದ್ದು ಶೀಘ್ರದಲ್ಲಿ ದಾಖಲಾತಿ ಒದಗಿಸುವಂತೆ ಸೂಚಿಸಿದರು. ಈಗ ಮತ್ತೊಮ್ಮೆ ಜಾಯಿಂಟ್ ಸರ್ವೆ ಕಾರ್ಯಾ ನಡೆಯುತ್ತಿದ್ದು ಇದರ ಬಗ್ಗೆ ರೈತರು ಕೈ ಜೋಡಿಸುವಂತೆಯು ತಿಳಿಸಿದರಲ್ಲದೆಯೇ ಜೆ,ಎಮ್,ಸಿ,ಯವರ ತೀರ್ಮಾನವೇ ಅಂತಿಮವಾಗಲಿದೆ ಎಂಬುದಾಗಿ ಮಿಡಿಗೇಶಿ ಹೋಬಳಿಯ ಹೊಸಕೆರೆ ಹಾಗೂ ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಪರಿಹಾರದ ಬಗ್ಗೆ ವಿಷಯ ತಿಳಿಯಪಡಿಸಿದರು.
ಸಾರ್ವಜನಿಕರಿಂದ ಭೂಸ್ವಾಧೀನ ಅಧಿಕಾರಿಗಳವರ ಗಮನಕ್ಕೆ ಹೊಸಕರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದ ಸರ್ವೆ ನಂ 28 ರಲ್ಲಿ 25 ಎಕರೆ ಸರ್ಕಾರದ ಭೂಮಿಯಿದ್ದು ಈಗಾಗಲೇ 3.10 ಎಕರೆ, 2.10 ಎಕರೆ ಹಾಗೂ ಒಂದು ಎಕರೆ ಭೂಮಿಯನ್ನು ಸಾಗುವಳಿ ನೀಡಲಾಗಿರುತ್ತದೆ. ಇನ್ನುಳಿದ 19 ಎಕರೆ ಉಳಿಕೆ ಭೂಮಿಯನ್ನು ಕೆಲವರು ಸ್ವಾಧೀನ ಪಡಿಸಿಕೊಳ್ಳುತ್ತಿದ್ದು {ಕೊಂಡಿದ್ದು} ಈ ಬಗ್ಗೆ ರೆವಿನ್ಯೂ ಇಲಾಖಾಧಿಕಾರಿಗಳವರು ಹಾಗೂ ರೈಲ್ವೆ ಭೂಸ್ವಾಧೀನಾಧಿಕಾರಿಗಳವರು ಗಮನಿಸುವಂತೆ ಚಿಕ್ಕದಾದ ಚೀಟಿಯೊಂದರಲ್ಲಿ ಈ ಮೆಲ್ಕಂಡ ಅಧಿಕಾರಿಗಳವರಿಗೆ ಮಾಹಿತಿ ನೀಡಿದರು. ಮುಂದೇನಾಗುವುದು ಕಾದುನೋಡೊಣ ?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
