ತುಮಕೂರು

ತುಮಕೂರು ನಗರದ ಮಿನಿವಿಧಾನಸೌಧದಲ್ಲಿರುವ ತುಮಕೂರು ತಾಲ್ಲೂಕು ಕಚೇರಿಯ “ಪಡಸಾಲೆ’’ಯ ಕಾರ್ಯಚಟುವಟಿಕೆಗಳಿಗೆ ಶನಿವಾರ ಸರ್ವರ್ ಸಮಸ್ಯೆಯಿಂದ ಅಡಚಣೆ ಉಂಟಾಗಿ, ಸಾರ್ವಜನಿಕರಿಗೆ ಅನಾನುಕೂಲ ಆಯಿತು.
ಶನಿವಾರ ಬೆಳಗಿನಿಂದಲೂ ಅನಿರೀಕ್ಷಿತವಾಗಿ ಸರ್ವರ್ ಸಮಸ್ಯೆ ಕಾಡಗೊಡಗಿತು. ಇದರ ಪರಿಣಾಮವಾಗಿ ಆನ್‍ಲೈನ್ ಕೆಲಸ ಕಾರ್ಯಗಳು ವಿಪರೀತ ವಿಳಂಬ ಆಗತೊಡಗಿದವು. ವಿಶೇಷವಾಗಿ ಆಧಾರ್ ಕಾರ್ಡ್ ಕೌಂಟರ್ ಅಂತೂ ಸಂಪೂರ್ಣ ಸ್ಥಗಿತವಾಯಿತು.ಆಧಾರ್ ಕಾರ್ಡ್ ಕೌಂಟರ್‍ಗೆ ಸಹಜವಾಗಿ ಸಾರ್ವಜನಿಕರು ಅಧಿಕವಾಗಿಯೇ ಬರುತ್ತಾರೆ. ಆಧಾರ್ ತಿದ್ದುಪಡಿ, ಹೊಸ ಆಧಾರ್ ಕಾರ್ಡ್, ನವೀಕರಣ ಮೊದಲಾದ ಕಾರಣಗಳಿಂದ ಸದಾ ಜನರು ಇಲ್ಲಿ ಇದ್ದೇ ಇರುತ್ತಾರೆ. ಆದರೆ ಶನಿವಾರ ಬಂದ ಸಾರ್ವಜನಿಕರು ನಿರಾಶೆಯಿಂದ ಬರಿಗೈಲಿ ಹಿಂತಿರುಗುವಂತಾ ಯಿತು.
ಜನರು ಸ್ವಲ್ಪ ಹೊತ್ತು ಕಾಯುತ್ತ ನಿಂತರಾದರೂ, ಸರ್ವರ್ ಸಮಸ್ಯೆ ತಕ್ಷಣಕ್ಕೆ ಬಗೆಹರಿಯಲಾರದೆಂಬುದನ್ನು ಅರಿತು ವಾಪಸ್ಸಾದರು. ಈ ಬಗ್ಗೆ ತಹಸೀಲ್ದಾರ್ ಕಚೇರಿಯು ತಕ್ಷಣವೇ ಸೂಚನಾ ಫಲಕದಲ್ಲಿ ಮಾಹಿತಿಯನ್ನೂ ಪ್ರಕಟಿಸಿತು. ಸೋಮವಾರ ಬರುವಂತೆ ಸೂಚಿಸಲಾಯಿತು. ಈ ಮಧ್ಯೆ ಕೆಲವು ಸಾರ್ವಜನಿಕರು ಖಾಸಗಿ ಸೇವಾ ಕೇಂದ್ರಕ್ಕೂ ತೆರಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








