ಸೇವೆಯೇ ನಮ್ಮ ಮೊದಲ ಧ್ಯೇಯ : ತಾರಾ ಶರ್ಮ

ತಿಪಟೂರು :

     ಇನ್ನರ್‍ವ್ಹೀಲ್ ಕ್ಲಬ್ ಎಂದರೆ ಸಹಕಾರ, ಸೌಹಾರ್ಧತೆ ಮತ್ತು ಸೇವೆಯೆಗೆ ಹೆಸರಾಗಿದ್ದು ಸೇವೆಯೇ ನಮ್ಮ ಮೊದಲ ಧ್ಯೇಯವೆಂದು ತಿಪಟೂರು ಇನ್ನರ್‍ವ್ಹೀಲ್ ಕ್ಲಬ್‍ನ ಅಧ್ಯಕ್ಷೆ ತಾರಾಶರ್ಮ ತಿಳಿಸಿದರು.

    ನಗರದ ಖಾಸಗಿ ಹೋಟೆಲ್ಲಿನಲ್ಲಿ ಆಯೋಜಿಸಿದ್ದ 2019-20ನೇ ಸಾಲಿನ ಇನ್ನರ್‍ವ್ಹೀಲ್ ಪದಾಧಿಆಖರಿಗಳು ಪದಗ್ರಹಣ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಹಿಂದಿನ ಅಧ್ಯಕ್ಷೆ ಭಾಗ್ಯಾಮೂರ್ತಿಯವರಿಂದ ಸಂಘದ ಬ್ಯಾಡ್ಜ್ ಹಾಕಿಸಿಕೊಂಡು ಮಾತಾನಾಡಿದ ಅವರು ನಮ್ಮ ಸಂಸ್ಥೆಯ ಧ್ಯೇಯದಲ್ಲಿ ಮೊದಲನೇಯದು ಸೇವೆ ಇಲ್ಲಿರುವ ಎಲ್ಲರು ಸಂಘದ ಮತ್ತು ಸಮಾಜದ ಸೇವಕರಿದ್ದಂತೆ ಎಂದು ತಿಳಿಸಿದರು.

    ಅವರು ಹಿಂದಿನ ಅಧ್ಯಕ್ಷರಾದ ಭಾಗ್ಯಮೂರ್ತಿಯವರು ಉತ್ತಮವಾದ ಕೆಲಸಗಳನ್ನು ಮಾಡಿ ಸಂಘವನ್ನು ಉನ್ನತ ಸ್ಥಾನದಲ್ಲಿ ನಿಲ್ಲಿಸಿ ಎಲ್ಲರೂ ಗುರುತಿಸುವಂತೆ ಮಾಡಿದ್ದಾರೆ ಆದ್ದರಿಂದ ಅವರಿಗಿಂತ ಉತ್ತಮವಾದ ಸೇವೆಯನ್ನು ಮಾಡುವ ಜವಾಬ್ದಾರಿಯನ್ನು ನಮ್ಮ ಮೇಲೆ ಹೊರಿಸಿದ್ದಾರೆ ಅದನ್ನು ನಾವು ಉತ್ತಮರೀತಿಯಲ್ಲಿ ಹಿಂದಿನ ಸಾಲಿನ ಪದಾಧಿಕಾರಿಗಳು ಅಧ್ಯಕ್ಷರ ಸಹಾಯದಿಂದ ಇನ್ನು ಹೆಚ್ಚಿನ ರೀತಿಯಲ್ಲಿ ಸಂಘದ ಕಾರ್ಯಗಳನ್ನು ಮಾಡುತ್ತಾ ಸಂಘವನ್ನು ಒಂದು ಮಾದರಿ ಸಂಘವನ್ನಾಗಿ ಮಾಡೋಣವೆಂದು ಪದಾಧಿಕಾರಿಗಳಿಗೆ ಮತ್ತು ಸದಸ್ಯರುಗಳಿಗೆ ಕರೆನೀಡಿದರು.

     ಜಿಲ್ಲಾ ಚೇರ್‍ಮನ್ ಲಲನಾ ಮೂರ್ತಿ ಮಾತನಾಡಿ ಹಿಂದಿನ ಅಧ್ಯಕ್ಷರು ಉತ್ತಮವಾದ ಕೆಲಸವನ್ನು ಮಾಡಿ ಸಂಘದ ಅಭಿವೃದ್ಧಿಯನ್ನು ಮಾಡಿದ್ದಾರೆ ಅದರ ಜೊತೆಗೆ ಸಂಘವನ್ನು ಸಾರ್ವಜನಿಕರು ಗುರುತಿಸುವಂತಹ ಕೆಲಸವನ್ನು ಮಾಡಿದ್ದಾರೆ ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಿಮ್ಮ ಮೇಲಿದ್ದು ಅದನ್ನು ಉಳಿಸಿಕೊಂಡು ಸಂಘವನ್ನು ಮುನ್ನೆಡುಸುವ ಜೊತೆಗೆ ಈ ಬಾರಿಯ ನಮ್ಮ ದ್ಯೇಯವಾಕ್ಯ ಒಟ್ಟಾಗಿ ಎಲ್ಲರ ಜೊತೆಯಲ್ಲಿ ನಾವು ಎಂದಾಗಿದ್ದು ಇದರ ಅಡಿಯಲ್ಲಿ ನಾವು ಈ ಬಾರಿಯ ಕೆಲಸವನ್ನು ಮಾಡಬೇಕಾಗಿದ್ದು ಸಮಾಜದ ಕೆಳವರ್ಗದವರನ್ನು ಮೇಲೆತ್ತುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು.

     ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ರೋಟರಿ ಅಧ್ಯಕ್ಷ ತೋಂಟದಾರ್ಯ ಮಾತನಾಡಿ ನಾವು ಕೋಟಿ ವೃಕ್ಷ ನಾಟಿ ಎಂಬ ಕಾರ್ಯಕ್ರಮವನ್ನು ಮಾಡುತ್ತಿದ್ದು ಪ್ರಕೃತಿಯನ್ನು ಉಳಿಸೋಣ ಮತ್ತು ಮುಖ್ಯವಾಗಿ ಪರಿಸರಕ್ಕೆ ಮಾರಕವಾದ ಮಹಾಮಾರಿ ಪ್ಲಾಸ್ಟಿಕ್‍ಅನ್ನು ನಿಯಂತ್ರಿಸಬೇಕಾಗಿದ್ದು ಅದನ್ನು ನಾವು ಬಳಸದೇ ಇದ್ದು ಬಳಸುವವರಿಗೆ ತಿಳುವಳಿಕೆ ನೀಡುವ ಮೂಲಕ ಅರಿವು ಮೂಡಿಸು ಕಾರ್ಯವನ್ನು ಜೊತೆಯಾಗಿ ಮಾಡೋಣ ಎಂದು ಕರೆನೀಡಿದರು.

     ಕಾರ್ಯಕ್ರಮದಲ್ಲಿ ಸಂಘ ಹಿಂದಿನ ಅಧ್ಯಕ್ಷರಾದ ಭಾಗ್ಯಮೂರ್ತಿ, ನೂತನವಾಗಿ ಅಧಿಕಾರ ಸ್ವೀಕರಿಸಿದ ಉಪಾಧ್ಯಕ್ಷೆ ಸ್ವರ್ಣಗೌರಿ, ಕಾರ್ಯದರ್ಶಿ ಪ್ರೇಮಾ ನಟರಾಜ್, ಜಂಟಿ ಕಾರ್ಯದರ್ಶಿ ಮಂಜುಳ, ಖಜಾಂಚಿ, ಜಯ ಬಸವರಾಜು, ಐ.ಎಸ್.ಓ ಸುಮನ ಜಯದೇವ್, ಎಡಿಟರ್ ರಾಜೇಶ್ವರಿ ಮತ್ತಿರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link