ಪ್ರಯಾಣಿಕರಿಗೆ ಉತ್ತಮ ಸೇವೆ ಕಲ್ಪಿಸುವುದು ನನ್ನ ಗುರಿ: ಹ್ಯಾರಿಸ್

ಬೆಂಗಳೂರು

       ಬಸ್ ಪ್ರಯಾಣದರ ಹೆಚ್ಚಳಕ್ಕಿಂತ ಮುಖ್ಯವಾಗಿ ಪ್ರಯಾಣಿಕರಿಗೆ ಉತ್ತಮ ಸೇವೆ ಕಲ್ಪಿಸುವುದು ನನ್ನ ಗುರಿಯಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷ ಎನ್.ಎ. ಹ್ಯಾರಿಸ್ ತಿಳಿಸಿದ್ದಾರೆ

      ಡೀಸೆಲ್ ದರ ಹೆಚ್ಚಳದಿಂದ ಬಸ್ ಪ್ರಯಾಣದರ ಹೆಚ್ಚಿಸುವ ಬೇಡಿಕೆಯಿದೆ ಆದರೆ ಪ್ರಯಾಣದರ ಹೆಚ್ಚಿಸುವ ಪ್ರಸ್ತಾಪ ಸದ್ಯ ನಮ್ಮ ಮುಂದಿಲ್ಲ ಎಂದರು. ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಟಿಕೆಟ್ ದರವೂ ಹೆಚ್ಚಳ ಮಾಡಬೇಕು ಎನ್ನುವುದಕ್ಕಿಂತ ಪ್ರಯಾಣಿಕರಿಗೆ ಒಳ್ಳೆಯ ಸೇವೆ ನೀಡಬೇಕು. ತದನಂತರ, ದರ ಹೆಚ್ಚಿಸುವ ಬಗ್ಗೆ ಚಿಂತನೆ ಮಾಡೋಣ ಎಂದು ನುಡಿದರು. ಎಲೆಕ್ಟ್ರಿಕ್ ಬಸ್‍ಗಳನ್ನು ನೇರವಾಗಿ ಖರೀದಿಸಬೇಕಾ, ಇಲ್ಲವೆ ಗುತ್ತಿಗೆಯಲ್ಲಿ ಖರೀದಿಸಬೇಕೆ ಎನ್ನುವುದು ಗೊಂದಲದಲ್ಲಿದೆ. ಹೀಗಾಗಿ, ಕಡತಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದರು.

ಗುರುತಿನ ಚೀಟಿ

        ಇಲ್ಲಿಯವರೆಗೂ ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕರಿಗೆ ಗುರುತಿನ ಚೀಟಿ ಇಲ್ಲ ಎಂದು ಕೇಳಿದ ಪ್ರಶ್ನೆಗೆ ಶೀಘ್ರವೆ ಎಲ್ಲ ಚಾಲಕ ಹಾಗೂ ನಿರ್ವಾಹಕರಿಗೆ ಗುರುತಿನ ಚೀಟಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸ್ಮಾರ್ಟ್ ಕಾರ್ಡ್

        ಬಿಎಂಟಿಸಿ ಪ್ರಯಾಣಿಕರಿಗೆ ಮೆಟ್ರೋ ರೈಲು ಮಾದರಿಯಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಕಲ್ಪಿಸಲು ಈಗಾಗಲೇ ಆಕ್ಸಿಸ್ ಬ್ಯಾಂಕ್ ಜೊತೆಗೆ ಒಪ್ಪಂದವಾಗಿದೆ. ಇದು ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ ಎಂಬುದು ಗೊತ್ತಿಲ್ಲ. ಶೀಘ್ರವೆ ಸ್ಮಾರ್ಟ್ ಕಾರ್ಡ್ ಜಾರಿ ಮಾಡುವ ಮೂಲಕ, ಅವ್ಯವಹಾರಕ್ಕೆ ಕಡಿವಾಣ ಹಾಕಲಾಗುವುದು ಎಂದು ಅವರು ಹೇಳಿದರು.

      ಬಿಎಂಟಿಸಿ ಸಂಬಂಧಿಸಿದ ವಾಣಿಜ್ಯ ಕಟ್ಟಡಗಳನ್ನು ಪರಿಣಾಮಕಾರಿಯಾಗಿ ದುರಸ್ಥಿ ಮಾಡಿ, ಬಾಡಿಗೆಗೆ ನೀಡಲಾಗುವುದು. ಹಾಗೂ ಟಿಟಿಎಂಸಿಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಒಟ್ಟಾರೆ ಬಿಎಂಟಿಸಿ ಲಾಭದತ್ತ ಕೊಂಡೊಯ್ಯಲು ಎಲ್ಲ ರೀತಿಯ ಸೂಕ್ತ ಕ್ರಮಗಳನ್ನು ಅನುಸರಿಸಲಾಗುವುದು ಎಂದು ಅವರು ಹೇಳಿದರು.

        ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ವಿಜಯ ಕಾಲೇಜಿಗೆ ನಾನು ಬಿಟಿಎಸ್ ಬಸ್ ನಲ್ಲೇ ಹೋಗುತ್ತಿದ್ದೆ ಸಂಸ್ಥೆಯ ಅಧ್ಯಕ್ಷನಾಗಿರುವ ನಾನು ಮುಂದಿನ ದಿನಗಳಲ್ಲಿ, ಬಿಎಂಟಿಸಿ ಬಸ್ ನಲ್ಲೇ ಪ್ರಯಾಣಿಸಿ, ಅಲ್ಲಿನ ಸಮಸ್ಯೆಗಳನ್ನು ಪರಿಶೀಲನೆ ನಡೆಸಿ ಬಗೆಹರಿಸಲು ಪ್ರಯತ್ನ ನಡೆಸಲಾಗುದು ಎಂದು ತಿಳಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link