ಬೆಂಗಳೂರಿನ ಭೂಕಂಪನ ಕೇಂದ್ರಗಳನ್ನು ಗುರುತು ಮಾಡಿದ ವಿಜ್ಞಾನಿಗಳು

ಬೆಂಗಳೂರು

         ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಿಗೆ ಹೊಂದಿಕೊಂಡಿರುವ ಅರ್ಕಾವತಿ ಪ್ರದೇಶದ ಭೂಮಿಯಲ್ಲಿ ದೋಷವಿರುವುದು ಕಂಡುಬಂದಿದ್ದು, ಭೂಕಂಪನ ಸಂಭವಿಸುವ ಪ್ರಾಂತ್ಯಗಳಾಗಿ ಗುರುತಿಸಲಾಗಿದೆ.

        ಭೂಕಂಪನ ಸಂಭವಿಸುವ ಪ್ರಾಂತ್ಯಗಳಾಗಿ ಗುರುತಿಸಿರುವ ಸ್ಥಳಗಳಲ್ಲಿ ರಿಕ್ಟರ್ ಮಾಪಕದಲ್ಲಿ ಭೂಕಂಪನಗಳ ತೀವ್ರತೆ ಕಡಿಮೆಯಿರುವುದರಿಂದ ಆತಂಕ ಪಡಬೇಕಾಗಿಲ್ಲ ಎನ್ನುವುದು ಸಂಶೋಧನೆಯಿಂದ ತಿಳಿದುಬಂದಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರದ ವಿಜ್ಞಾನಿ ರಮೇಶ್ ಡಿಕ್‍ಪಾಲ್ ತಿಳಿಸಿದ್ದಾರೆ..

        ದಶಕಗಳಿಂದ ಕರ್ನಾಟಕದಲ್ಲಿ ಭೂಕಂಪನದ ಘಟನೆಗಳನ್ನು ಕೇಂದ್ರದಿಂದ ನಿಗಾವಹಿಸಿ. 2017ರಲ್ಲಿ ಚನ್ನಪಟ್ಟಣದಲ್ಲಿ ಹಾಗೂ 2014ರಲ್ಲಿ ಕನಕಪುರದಲ್ಲಿ ಭೂಮಿ ಕಂಪಿಸಿರುವುದನ್ನು ದಾಖಲು ಮಾಡಿದಾಗ ತೀವ್ರತೆ ಕಡಿಮೆ ಇರುವುದು ಕಂಡುಬಂದಿದೆ.

        ತಿಪ್ಪಗೊಂಡನಹಳ್ಳಿ ಅಣೆಕಟ್ಟು ಪ್ರದೇಶ ಹಾಗೂ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಭವಿಸಿರುವ ಭೂಂಕಪನಗಳನ್ನು ದಾಖಲು ಮಾಡಲಾಗಿದೆ 2013ರಲ್ಲಿ ಚಿತ್ರದುರ್ಗದಲ್ಲಿ 7 ಬಾರಿ ಭೂಕಂಪ ಸಂಭವಿಸಿರುವುದನ್ನು ದಾಖಲು ಮಾಡಲಾಗಿದೆ ಎಂದ ಅವರು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಭೂಮಿಯ ವ್ಯಾಪ್ಪಿಯ ಭೂಮಿಯಲ್ಲಿ ದೋಷ ಪತ್ತೆಯಾಗಿದೆ.
ಭೂಕಂಪನಗಳಿಂದ ಬೆಂಗಳೂರು ಪ್ರಾಂತ್ಯವೂ ಸುರಕ್ಷಿತವಾಗಿಲ್ಲ ಎಂಬ ಅಂಶ ಅಧ್ಯಯನದಿಂದ ತಿಳಿದು ಬಂದಿದೆ ಆದರೆ ರಿಕ್ಟರ್ ಮಾಪಕದಲ್ಲಿ ಭೂಕಂಪನಗಳ ತೀವ್ರತೆ ಕಡಿಮೆಯಿರುವದರಿಂದ ಹೆಚ್ಚಿನ ಆತಂಕ ಪಡಬೇಕಿಲ್ಲ ಎಂದು ವಿವರಿಸಿದ್ದಾರೆ.

2.5ರಷ್ಟು ತೀವ್ರತೆ

        ಕಳೆದು ಕೆಲವು ವರ್ಷಗಳಿಂದ ಕಡಿಮೆ ತೀವ್ರತೆಯ ಭೂಕಂಪ ಸಂಭವಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ 2018, ನ. 3ರಲ್ಲಿ ಚಿತ್ರದುರ್ಗದಲ್ಲಿ 1.6 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. 2013ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ 7 ಬಾರಿ ಭೂಮಿ ನಡುಗಿದೆ. ಸಿಗೆಹಟ್ಟಿ ಗ್ರಾಮದಲ್ಲಿ ಭೂಕಂಪದ ತೀವ್ರತೆ 2.5ರಷ್ಟು ದಾಖಲಾಗಿರುವುದು ದೃಢಪಟ್ಟಿದೆ ಎಂದು ವಿವರಿಸಿದರು.

         ಕರಾವಳಿ ಮತ್ತು ಉತ್ತರ ಒಳನಾಡಿನ, ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳು ಭೂಕಂಪ ಸಂಭವಿಸುವ ವಲಯಗಳಾಗಿವೆ ಎಂದು ವಿಜ್ಞಾನಿಗಳು ಮತ್ತು ತಜ್ಞರು ತಿಳಿಸಿದ್ದಾರೆ. ಚಿತ್ರದುರ್ಗ, ಭಟ್ಕಳ, ಉಡುಪಿ ಮತ್ತು ಬೆಂಗಳೂರು ಪ್ರಾಂತ್ಯದ ಭೂಮಿಗಳಲ್ಲಿ ದೋಷವಿರುವುದು ಇತ್ತೀಚೆಗೆ ನಡಸಿದ ಅಧ್ಯಯನದಿಂದ ಪತ್ತೆಹಚ್ಚಲಾಗಿದೆ.

        ಭೂಕಂಪನ ರಾಜ್ಯದ ದಕ್ಷಿಣ ಭಾಗದಲ್ಲಿ ಅದರಲ್ಲೂ ಪ್ರಮುಖವಾಗಿ ಬೆಂಗಳೂರು-ಮೈಸೂರು ಪ್ರಾಂತ್ಯದಲ್ಲಿ ಸಂಭವಿಸಿವೆ. ರಾಜ್ಯದ ಐತಿಹಾಸಿಕ ಸ್ಥಳ ಬಳ್ಳಾರಿಯಲ್ಲೂ ಭೂಮಿ ನಡುಗಿದೆ ಎಂದು ತಜ್ಜರು ವಿವರಣೆ ನೀಡಿದ್ದಾರೆ.

Recent Articles

spot_img

Related Stories

Share via
Copy link