ರೈತರ ಪ್ರತಿಭಟನೆಯ ನಡುವೆಯೂ ಅಧಿವೇಶನ ಆರಂಭ

ಬೆಳಗಾವಿ:

         ರೈತರ ಹಾಗೂ ಕಬ್ಬು ಬೆಳಗಾರರ ಪ್ರತಿಭಟನೆ ಬಿಸಿ ನಡುವೆಯೂ ಇಲ್ಲಿನ ಸುವರ್ಣ ಸೌಧದಲ್ಲಿ ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭಗೊಂಡಿದ್ದು, ಸಮ್ಮಿಶ್ರ ಸರ್ಕಾರದ ಮೂಢನಂಬಿಕೆಗೆ ಬೆಳಗಾವಿ ಚಳಿಗಾಲದ ಅಧಿವೇಶನದ ಮಹತ್ವದ ಒಂದು ಗಂಟೆ ವ್ಯರ್ಥವಾತು.

      ಸಾಮಾನ್ಯವಾಗಿ ಅಧಿವೇಶನ ಬೆಳಗ್ಗೆ 11ಕ್ಕೆ ಆರಂಭವಾಗುವುದು ವಾಡಿಕೆ. ಆದರೆ ಇಂದು ಅಧಿವೇಶನ ಮಧ್ಯಾಹ್ನ 12.15ಕ್ಕೆ ಚಾಲನೆಗೊಂಡಿತು. ಇದಕ್ಕೆ ಕಾರಣ ಯಮಗಂಡಕಾಲ. ಇಂದು ಬೆಳಗ್ಗೆ 10.30 ರಿಂದ 12ಗಂಟೆಯವರೆಗೆ ಯಮಗಂಡಕಾಲ ಇದ್ದು, ಇದಾದ ಬಳಿಕವೇ ಅಧಿವೇಶನ ಆರಂಭಿಸಲು ನಿರ್ಧರಿಸಲಾಯಿತು.

       ಸಾಮಾನ್ಯವಾಗಿ ಸಮ್ಮಿಶ್ರ ಸರ್ಕಾರ ಆರಂಭವಾದಂದಿನಿಂದಲೂ ಸಾಕಷ್ಟು ಕಾರ್ಯಕ್ರಮಗಳು ಶಾಸ್ತ್ರ, ಜ್ಯೋತಿಷ್ಯವನ್ನು ಆಧರಿಸಿಯೇ ನಡೆಯುತ್ತಿದೆ. ಮುಖ್ಯಮಂತ್ರಿ ಹೆಚ್. .ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ದೈವಭಕ್ತರಾಗಿದ್ದು, ಮೂಢನಂಬಿಕೆಗೆ ಆದ್ಯತೆ ನೀಡಿದ್ದಾರೆ.

         ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಇದಕ್ಕೆ ಬೆಲೆ ಕೊಡುತ್ತಿರಲಿಲ್ಲ. ರಾಹುಕಾಲದ ಬಜೆಟ್ ಮಂಡಿಸಿ ವಿಶೇಷತೆ ಮೆರೆದಿದ್ದರು. ಆದರೆ ಈಗಿನ ಸಮ್ಮಿಶ್ರ ಸರ್ಕಾರ ಸಂಪೂರ್ಣ ಜ್ಯೋತಿಷ್ಯವನ್ನು ಆಧರಿಸಿ ಮುನ್ನಡೆಯುತ್ತಿದ್ದು, ಸಚಿವ ಹೆಚ್.ಡಿ. ರೇವಣ್ಣ ಸೂಚನೆ ಅಡಿಯೇ ಎಲ್ಲವೂ ನಿಗದಿಯಾಗುತ್ತಿದೆ.

        ಜ್ಯೋತಿಷ್ಯ, ಶಾಸ್ತ್ರವನ್ನು ಅಪಾರವಾಗಿ ನಂಬುವ ರೇವಣ್ಣ ಸಲಹೆ ಮೇರೆಗೆ ಇಂದು ಯಮಗಂಡಕಾಲದಲ್ಲಿ ಚಳಿಗಾಲದ ಅಧಿವೇಶನಕ್ಕೆ ಚಾಲನೆ ನೀಡದಿರಲು ನಿರ್ಧರಿಸಲಾಗಿತ್ತು.

         ಬೆಂಗಳೂರು, ಬೆಳಗಾವಿ ಎಲ್ಲಿಯೇ ಅಧಿವೇಶನ ನಡೆಯಲಿ ಅದರ ಆರಂಭ ಬೆಳಗ್ಗೆ 11ಕ್ಕೆ ಆಗುತ್ತಿತ್ತು. ಆದರೆ ಇದಕ್ಕೆ ಭಿನ್ನವಾಗಿ ಇಂದು ಬೆಳಗಾವಿ ಅಧಿವೇಶನ 12.15ಕ್ಕೆ ಆರಂಭವಾಗಿದೆ. ಇದರ ಹಿಂದೆ ಮೂಢನಂಬಿಕೆಯೇ ಕಾರಣ ಎನ್ನಲಾಗಿದೆ. ಹಿಂದೆ ಸಚಿವ ಸಂಪುಟ ರಚನೆ, ವಿಸ್ತರಣೆ, ಕಚೇರಿ ಪ್ರವೇಶ ಇತ್ಯಾದಿ ಪ್ರಮುಖ ಕಾರ್ಯಕ್ರಮಗಳು ಶಾಸ್ತ್ರ, ಜ್ಯೋತಿಷ್ಯವನ್ನು ಆಧರಿಸಿಯೇ ಮುನ್ನಡೆಯುತ್ತಿದೆ. ಇದೀಗ ಬೆಳಗಾವಿ ಅಧಿವೇಶನ ಆರಂಭ ಕೂಡ ಇದಕ್ಕೆ ಭಿನ್ನವಾಗಿಲ್ಲ.

       ಇನ್ನು ಅಧಿವೇಶನಕ್ಕೆ ಮುನ್ನ ಸುವರ್ಣ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ 116 ನೇ ಜನುಮದಿನ ಅಂಗವಾಗಿ ಮಾಜಿ ಸಿ.ಎಂ ದಿ. ನಿಜಲಿಂಗಪ್ಪ ಭಾವಚಿತ್ರಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುಷ್ಪನಮನ ಸಲ್ಲಿಸಿದರು.

      ಇದಕ್ಕೂ ಮುನ್ನ ಮುಖ್ಯಮಂತ್ರಿಗಳನ್ನು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ರೈತರು ಸ್ವಾಗತಿಸಿದರು.ಅದರಲ್ಲೂ ರೈತ ಮಹಿಳೆಯರು ಆರತಿ ಬೆಳಗಿ, ಹಾರ ಹಾಕಿ ಸ್ವಾಗತಿಸಿದರು.

         ಸುವರ್ಣಸೌಧದ ಮುಂಭಾಗ ಹೆಬ್ಬಾವೊಂದು ಕಾಣಿಸಿಕೊಂಡಿದೆ. ಸುವರ್ಣ ವಿಧಾನಸೌಧದ ಮುಖ್ಯದ್ವಾರದ ಹೊರ ಪೊಲಿಸ್ ಠಾಣೆಯ ಬಳಿ ಹೆಬ್ಬಾವು ಪ್ರತ್ಯಷಗೊಂಡಿದೆ.

         ಹೆಬ್ಬಾವು ನಾಲ್ಕೂವರೆ ಅಡಿ ಉದ್ದವಿದ್ದು, ಹೆಬ್ಬಾವು ಕಂಡು ಪೊಲೀಸರು ಸೇರಿದಂತೆ ಸ್ಥಳೀಯರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ಇನ್ನು ಹೆಬ್ಬಾವು ಹಿಡಿಯಲು ಉರಗ ತಜ್ಞರು ಆಗಮಿಸಿದ್ದರಾದರೂ, ಹೆಬ್ಬಾವು ಚರಂಡಿಯ ಒಳಗೆ ಹೋಗಿ ನಾಪತ್ತೆಯಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link