ಅಧಿವೇಶನ ರಣರಂಗವಾಗುವ ಮುನ್ಸೂಚನೆ

ಹೊನ್ನಾಳಿಃ-

        ರಾಜ್ಯದಲ್ಲಿ ಮರಳು, ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯು ಡಿಸೆಂಬರ್‍ನಲ್ಲಿ ನಡೆಯುವ ಬೆಳಗಾವಿ ಅಧಿವೇಶನದಲ್ಲಿ ವಿರೋಧಪಕ್ಷ ಹಾಗೂ ಜನತೆಯ ಅಕ್ರೋಷವನ್ನು ಎದುರಿಸುವ ಪರಿಸ್ಥಿತಿ ಹಾಗೂ ಅಧಿವೇಶನ ರಣರಂಗವಾಗುವ ಮುನ್ಸೂಚನೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಅವರು ಹೊನ್ನಾಳಿ ತಾಲೂಕು ಕಚೇರಿ ಮುಂದೆ ಶಾಸಕ ಎಂ.ಪಿ.ರೇಣುಕಾಚಾರ್ಯ ಕಳೆದ ಮಂಳವಾರದಿಂದ ನಡೆಸುತ್ತಿರುವ ಆಹೋರಾತ್ರಿ ಧರಣಿ ಸತ್ಯಾಗ್ರಹದ 4ನೇ ದಿನವಾದ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

       ಒಂದು ಮನೆ ನಿರ್ಮಾಣಕ್ಕೆ ಮರಳು ಆತೀ ಅಗತ್ಯವಾಗಿದ್ದು ಮರಳೇ ಸಿಗುವುದಿಲ್ಲವೆಂದಾದರೆ ಮನೆ ಕಟ್ಟುವವರು, ಬಡಿಗೆ ಕಬ್ಬಿಣ, ಬಣ್ಣ ಹೀಗೆ ಮನೆ ನಿರ್ಮಾಣದ ಹಲವಾರು ಹಂತಗಳ ಸಾವಿರಾರು ಕೆಲಸಗಾರಿಗೆ ಕೆಲಸವೇ ಇಲ್ಲದೆ ನಿರುದ್ಯೋಗ ತಾಂಡವವಾಡುತ್ತದೆ ಎಂದು ಸರ್ಕಾರ ಅರ್ಥಮಾಡಿಕೊಳ್ಳಬೇಕು ಎಂದರು.

      ಮೆಕ್ಕೆಜೋಳ,ಬತ್ತ ಖರೀದಿ ಕೇಂದ್ರಗಳಿಗೆ ಕೇಂದ್ರ ಸರ್ಕಾರದ ಹಣ ಬಿಡುಗಡೆ ಮಾಡಿದ್ದರೂ ಕೂಡ ರಾಜ್ಯ ಸರ್ಕಾರ ಇನ್ನೂ ಹಲವಾರು ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ತೆರೆಯುವಲ್ಲಿ ಮೀನಾಮೇಷ ಎಣಿಸುತ್ತಿರುವುದು ಈ ಸರ್ಕಾರಕ್ಕೆ ರೈತರ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಸಾಬೀತುಪಡಿಸುವಂತಿದೆ ಎಂದರು.

     ಜೆಡಿಎಸ್ ಪಕ್ಷದವರು ಚುನಾವಣಾ ಪೂರ್ವದಲ್ಲಿ ತಾವು ಅ„ಕಾರಿಕ್ಕೆ ಬರುವುದಿಲ್ಲ ಎಂದುಕೊಂಡು ಮುಂದಾಲೋಚನೆ ಇಲ್ಲದೆ ಬಾಯಿಗೆ ಬಂದಂತೆ ಪ್ರಣಾಳಿಕೆಯಲ್ಲಿ ಭರವಸೆಗಳನ್ನು ನೀಡಿದ್ದು ಇದೀಗ ತಾವೇ ಇಟ್ಟ ಬೋನಿಗೆ ತಾವೇ ಬಿದ್ದಂತಾಗಿದೆ ಎಂದು ಲೇವಡಿ ಮಾಡಿದರು.
ಅನ್ನಕ್ಕೆ ಇರಲಿ ಈಗಿನ ಮೈತ್ರಿಸರ್ಕಾರ ಮಣ್ಣಿಗೂ (ಮರಳಿಗೂ ) ಆಡಚಣೆ ಮಾಡುತ್ತಿದ್ದು ಬೆಳಗಾವಿ ಅ„ವೇಶನದಲ್ಲಿ ಬಿಜೆಪಿಯ ಎಲ್ಲಾ ಶಾಸಕರೂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರಕ್ಕೆ ಚಾಟಿ ಬೀಸಲಿದ್ದಾರೆ ಹಾಗೂ ವಿಶೇಷವಾಗಿ ಹೊನ್ನಾಳಿ ಮರಳು ಹೋರಾಟವನ್ನು ಪ್ರಸ್ತಾಪಿಸಲಿದ್ದೇವೆ ಎಂದರು.

       ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ,ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯಾವೊಬ್ಬ ರೈತರ ಮನೆಗೆ ಇಂದಿಗೂ ಜಿಲ್ಲಾಡಳಿತ ಅಧಿಕಾರಿಗಳು ಭೇಟಿ ಮಾಡಿಲ್ಲ, 46 ಸಾವಿರ ಕೋಟಿ ರೈತರ ಸಾಲ ಮನ್ನಾ ಎಂದು ಹೇಳುವ ಸರ್ಕಾರ ಇದುವರೆಗೂ ಸಾಲ ಮನ್ನಮಾಡದೇ ಮುಖ್ಯಮಂತ್ರಿ ತಾನು ಸಾಂದರ್ಭಿಕ ಶಿಶು ಎಂದು ಅಸಹಾಯಕತೆಯನ್ನು ತೋಡಿಕೊಳ್ಳುತ್ತಿರುವುದು ದುರಾದೃಷ್ಟಕರ ಎಂದು ಹೇಳಿದರು.

        ಸರ್ಕಾರದ ವಿರುದ್ಧ ಶನಿವಾರ ನ್ಯಾಮತಿ ತಾಲೂಕು ಬಂದ್ ನಂತರ ಸೋಮವಾರ ಹೊನ್ನಾಳಿ ತಾಲೂಕು ಬಂದ್ ಆಚರಿಸಲಾಗುವುದು ಎಂದು ಹೇಳಿದರು.ಶಿವಮೊಗ್ಗ ಬಿಜೆಪಿ ರೈತ ಮುಖಂಡ ಮಹೇಂದ್ರ ಜಿ.ಪಂ. ಮಾಜಿ ಸದಸ್ಯ ಕೆ.ವಿ. ಚನ್ನಪ್ಪ ಇತರರು ಮಾತನಾಡಿದರು.

          ಜಿ.ಪಂ.ಸದಸ್ಯ ಎಂ.ಆರ್.ಮಹೇಶ್, ಆರಕೆರೆ ನಾಗರಾಜ್, ಶಾಂತರಾಜ್ ಪಾಟೀಲ್,ಕುಬೇಂದ್ರಪ್ಪ, ಪ್ರೇಮ್‍ ಕುಮಾರ್‍ಬಂಡಿಗಡಿ , ಚಿನ್ನಪ್ಪಮಾರಿಕೊಪ್ಪ , ಎಂ.ಪಿ.ರಮೇಶ್,ನರಸಗೊಂಡನಹಳ್ಳಿ ರಘು,ತಾ.ಪಂ. ಸದಸ್ಯರು, ಪ.ಪಂ. ಹಾಲಿ,ಮಾಜಿ ಸದಸ್ಯರುಗಳು, ಮುಖಂಡರು, ಕಾರ್ಯಕರ್ತರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap