ಸೇವೆ ಎಂಬ ಸೊಡರು” ಪುಸ್ತಕ ಬಿಡುಗಡೆ

ಬ್ಯಾಡಗಿ:

      ಯುವ ಜನತೆ ವಾಟ್ಸ್ಯಾಪ್, ಫೇಸ್‍ಬುಕ್‍ನಲ್ಲಿ ಕಾಲ ಕಳೇಯುವ ಸಮಯವನ್ನು ಪುಸ್ತಕ ಓದುವಲ್ಲಿ ಕಳೆದರೆ, ಜ್ಞಾನ ವೃದ್ಧಿಯಾಗುವುದರೊಂದಿಗೆ ತಮ್ಮ ಬದುಕು ಹಸನವಾಗುತ್ತದೆ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ತಿಳಿಸಿದರು.

        ತಾಲೂಕಿನ ಕದರಮಂಡಲಗಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ನೀವೃತ್ತ ಶಿಕ್ಷಕ ನಾಗಪ್ಪ ರೊಡ್ಡನವರ ಬರೆದ “ಸೇವೆ ಎಂಬ ಸೊಡರು” ಪುಸ್ತಕವನ್ನು ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಶ್ರೀಗಳು ಬಿಡುಗಡೆಗೊಳಿಸಿ ಆಶಿರ್ವಚನ ನೀಡಿದರು.

        ಇಂದಿನ ಕಾಲದಲ್ಲಿ ಯುವ ಸಮುದಾಯ ಮೋಬೈಲ್ ಜೀವನಕ್ಕೆ ಹೊಂದಿಕೊಂಡಿದ್ದಾರೆ. ಅಲ್ಲದೇ, ಉದ್ವೇಗದ ಜೀವನ ನಡೆಸುತ್ತಿದ್ದಾರೆ. ಇದು ಆರೋಗ್ಯ ದೃಷ್ಠಿಯಿಂದ ಒಳ್ಳೆಯದಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಪೂರ್ವಜರ ಸಂಪ್ರದಾಯದ ನಿಯಮಗಳನ್ನು ಪಾಲಿಸುವಲ್ಲಿ ಒಂದಾದರೆ ಆತಂಕ (ಟೆಂಕ್ಷನ್) ಜೀವನ ಕಡಿಮೆಯಾಗಿ ನೆಮ್ಮದಿಯ ಬದುಕನ್ನು ಸಾದಿಸಲು ಸಾಧ್ಯವೆಂದರು.

        ಲಿಂಗನಾಯಕನಹಳ್ಳಿ ಮಠದ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ, ಇಂದಿನ ತಂತ್ರಜ್ಞಾನದ ಬದುಕಿನ ಜಂಜಾಟದಲ್ಲಿ ಮನುಷ್ಯ ಹಣ ಗಳಿಸುವ ವರ್ಗಕ್ಕೆ ಹೆಚ್ಚು ಒತ್ತು ನೀಡುತ್ತಾರೆ ವಿನ: ಸಂಸ್ಕøತಿ, ಸಂಘಟನೆ, ಹಾಗೂ ಸಮಾಜ ಸೇವೆಯನ್ನು ತೊಡಗಿಸುಕೊಳ್ಳುವಲ್ಲಿ ಮಿನಮೇಷ ಏಣಿಸುತ್ತಾರೆ. ಹಾಗಾಗಿ ಇಂದಿನ ದಿನಮಾನಗಳಲ್ಲಿ ನೆಮ್ಮದಿ ದೊರೆಯುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

          ಪ್ರೋ.ಎಚ್.ಕೆ ಕಲ್ಲಜ್ಜನವರ ಮಾತನಾಡಿ ಕೃತಿ ರಚನಾಕಾರರು ಒಬ್ಬ ಸಾಮಾನ್ಯ ರೈತರ ಮಗನಾಗಿ ಜನಿಸಿ ಶಿಕ್ಷಕ ವೃತ್ತಿ ಸೇರಿ ಜೊತೆ ಜೊತೆಗೆ ಸಮಾಜ ಗುರುತಿಸುವಂತಹ ಸಾಮಾಜಿಕ ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಜ್ಞಾನ ಸಂಪಾದನೆ ಮಾಡಿಕೊಳ್ಳುವಂತೆ ಯುವಕರಿಗೆ ಮನವಿ ಮಾಡಿಕೊಂಡರು.

          ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿ, ಕೃತಿ ರಚನೆಕಾರ ನಾಗಪ್ಪ ರೊಡ್ಡನವರ ತಮ್ಮ ವೃತ್ತಿಯ ಜೊತೆಗೆ ಪಿಯುಸಿಯ 10.ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರಿಗೆ ವಿದ್ಯಾಭ್ಯಾಸ ಪೂರೈಸಿದ್ದಾರೆ, ಹಲವಾರು ಮಠಮಾನ್ಯಗಳಿಗೆ ದೇಣಿಗೆ ನೀಡಿದ್ದಾರೆ. ಹಾಗೂ ಹಲವಾರು ಧಾರ್ಮಿಕ ಕಾರ್ಯಗಳನ್ನು ಮಾಡಿದ್ದಾರೆ ಎಂದರು.

        ಕಾರ್ಯಕ್ರಮದ ಅಂಗವಾಗಿ ಉಚಿತ ಸಕ್ಕರೆ ಕಾಯಿಲೆ, ಉಚಿನ ನೇತ್ರ ತಪಾಸಣೆ, ಹಾಗೂ ರಕ್ತದಾನ ಶಿಬೀರವನ್ನು ಏರ್ಪಡಿಸಲಾಗಿತ್ತು.ಈ ಸಂದರ್ಭದಲ್ಲಿ ಡಾ.ಮೃತಂಜಯ್ಯ ತುರಕಾನಿ, ಡಾ.ಬಸವರಾಜ ತಳವಾರ, ನೀವೃತ್ತ ಪ್ರಾಚಾರ್ಯ ಎಸ್.ಬಿ.ತವರದ, ಎ.ಜಿ.ಹಿರೇಮಠ, ಜೆ.ಎಂ.ಮಠದ, ಎನ್.ವಿ.ಬೊಡ್ಕೆ, ರವೀಂದ್ರ ಪಟ್ಟಣಶೆಟ್ಟಿ, ಬಸವರಾಜ ಕಾಕೊಳ, ಶಿವಬಸಮ್ಮ ಲೆಕ್ಕಣನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಚೆನ್ನಬಸವಣ್ಣ ರೊಡ್ಡನವರ ಸ್ವಾಗತಿಸಿದರು. ಡಿ.ಬಿ.ಕೂಸಗೂರ ನಿರೂಪಿಸಿದರು. ಮಲ್ಲಿಕಾರ್ಜುನ ರೊಡ್ಡನವರ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link