ಬೆಂಗಳೂರು
ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ ನೀಡಿರುವ ಅನುಮತಿ ವಿರೋಧಿಸುತ್ತಿರುವ ತಮಿಳು ನಾಡು ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.ಡಿಎಂಕೆ ಮೇಕೆದಾಟು ಯೋಜನೆ ವಿರೋಧಿಸಿ ಹೋರಾಟ ಮಾಡುತ್ತಿರುವುದನ್ನು ವಿರೋಧಿಸಿ ಉಗ್ರ ಹೋರಾಟ ಮಾಡಲಾಗುವುದು. ನಾಳೆ ಬೆಳಿಗ್ಗೆ ನಗರದ ಮೈಸೂರು ಬ್ಯಾಂಕ್ ವ್ರತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ರಾಮನಗರದ ಜಿಲ್ಲಾ ಕೇಂದ್ರದಲ್ಲೂ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು ಹಾಗೂ ಸಂಜೆ ಮೇಕೆಗಳಿಗೆ ಸನ್ಮಾನ ಮಾಡುವ ಮೂಲಕ ತಮಿಳು ನಾಡಿನ ಧೋರಣೆಯನ್ನು ವಿರೋಧಿಸಲಾಗುವುದು ಎಂದು ಅವರು ತಿಳಿಸಿದರು.ಮೇಕೆದಾಟು ಯೋಜನೆಗೆ ಯಾರದೇ ಅಡೆ ತಡೆ ಇಲ್ಲ. ಆದ್ದರಿಂದ ಸರ್ಕಾರ ಶೀಘ್ರ ಯೋಜನೆಯ ಸಮಗ್ರ ನೀಲ ನಕ್ಷೆ ತಯಾರಿಸಿ ಅನುದಾನ ಬಿಡುಗಡೆ ಮಾಡಿ ಶಂಕುಸ್ಥಾಪನೆ ನೆರವೇರಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.
ಮೈಸೂರು ದಸರಾ ಉತ್ಸವವನ್ನು ವೈಭವವಾಗಿ ಆಚರಿಸಿದ ಸರ್ಕಾರ ಹಂಪಿ ಉತ್ಸವವನ್ನು ಗಂಭೀರವಾಗಿ ಪರಿಗಣಿಸಿಲ್ಲ. ರಿವಾಜಿನಂತೆ ಉತ್ಸವ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.ಕ್ರಷ್ಣಸಾಗರದ ಬಳಿ ಕಾವೇರಿ ಪ್ರತಿಮೆ ಹಾಗೂ ಡಿಸ್ನಿಲ್ಯಾಂಡ್ ಮಾಡುವ ಆತುರ ಏನಿದೆ. ಯಾವುದೇ ಕಾರಣಕ್ಕೂ ಅಲ್ಲಿ ಪ್ರತಿಮೆ ಬೇಡ ಎಂದು ವಾಟಾಳ್ ನಾಗರಾಜ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ