ವಿಶೇಷ ಆರ್ಥಿಕ ವಲಯ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ

      ವಿಶೇಷ ಆರ್ಥಿಕ ವಲಯ (ಎಸ್‌ಇಜಡ್)ಗಳನ್ನು ಸ್ಥಾಪಿಸಲು ಟ್ರಸ್ಟ್ ಗಳಿಗೆ ಮತ್ತು ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವ ಮಸೂದೆ ಬುಧವಾರ ಲೋಕಸಭೆಯಲ್ಲಿ ಧ್ವನಿ-ಮತದಿಂದ ಅಂಗೀಕಾರ ಪಡೆದಿದೆ. ವಿಶೇಷ ಆರ್ಥಿಕ ವಲಯಗಳ (ತಿದ್ದುಪಡಿ) ಸುಗ್ರೀವಾಜ್ಞೆ, 2019ಕ್ಕೆ ಬದಲಾಗಿ ವಿಶೇಷ ಆರ್ಥಿಕ ವಲಯ (ತಿದ್ದುಪಡಿ) ಮಸೂದೆ 2019 ತರಲಾಗಿದೆ.

       ಮಸೂದೆ ಕುರಿತ ಚರ್ಚೆಗೆ ಉತ್ತರಿಸಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಸಾಧಕ-ಬಾಧಕಗಳನ್ನು ಪರಿಶೀಲಿಸಿದ ನಂತರ ರಾಷ್ಟ್ರಪತಿಯವರು ಸುಗ್ರೀವಾಜ್ಞೆ ಹೊರಡಿಸಲು ಅಧಿಕಾರ ಹೊಂದಿದ್ದಾರೆ. ಸಬ್‍ ಕ ಸಾಥ್-ಸಬ್‍ ಕ ವಿಕಾಸ್‍ ಅಂಶ ಮಸೂದೆಯಲ್ಲಿದೆ. ವಿಶೇಷ ಆರ್ಥಿಕ ವಲಯಗಳಿಗೆ ವಾಜಪೇಯಿ ಸರ್ಕಾರ ನೀಡಿದ್ದ ವಿನಾಯಿತಿಗಳನ್ನು 2011-12ರಲ್ಲಿ ಕಾಂಗ್ರೆಸ್ ಸರ್ಕಾರ ಹಿಂಪಡೆದಿತ್ತು ಎಂದು ಹೇಳಿದರು.

      ಮಸೂದೆ ವಿರೋಧಿಸಿ ಆರ್ ಎಸ್‍ಪಿ ಸದಸ್ಯ ಆರ್.ಕೆ.ಪ್ರೇಮಚಂದ್ರನ್‍ ಅವರು ಮಂಡಿಸಿದ ಸಾಂವಿಧಾನಿಕ ನಿರ್ಣಯವನ್ನು ಸದನ ತಿರಸ್ಕರಿಸಿತು.ಇದಕ್ಕೂ ಮುನ್ನ ಚರ್ಚೆಗಾಗಿ ಮಸೂದೆಯನ್ನು ಸದನದಲ್ಲಿ ಮಂಡಿಸಿ ಮಾತನಾಡಿದ ಸಚಿವ ಪಿಯೂಷ್‍ ಗೋಯಲ್, ವಿಶೇಷ ಆರ್ಥಿಕ ವಲಯ ಕಾಯ್ದೆ 2005 ರ ಸೆಕ್ಷನ್ 2 ರ ಉಪವರ್ಗ (5)ರ ತಿದ್ದುಪಡಿ ನಂತರ, ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಅನುಮತಿ ನೀಡುವುದಕ್ಕೆ ಕೇಂದ್ರ ಸರ್ಕಾರವು ಸೂಚಿಸಿದ ಟ್ರಸ್ಟ್ ಅಥವಾ ಯಾವುದೇ ಸಂಸ್ಥೆ ಪರಿಗಣನೆಗೆ ಅರ್ಹವಾಗಿರುತ್ತವೆ. ತಿದ್ದುಪಡಿ ಮಸೂದೆ ಜಾರಿಯಿಂದ ದೇಶೀಯ ಮತ್ತು ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾಗಲಿದೆ ಎಂದು ಹೇಳಿದರು.

       ರಫ್ತು ಉತ್ತೇಜನಕ್ಕಾಗಿ ಎಸ್‌ಇಜಡ್‌ಗಳ ಸ್ಥಾಪನೆ, ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ಒದಗಿಸಲು ವಿಶೇಷ ಆರ್ಥಿಕ ವಲಯ ಗಳ ಕಾಯ್ದೆ 2005 ಗೆ ತಿದ್ದುಪಡಿ ತಂದು ಮಸೂದೆ ಜಾರಿಗೆ ತರಲಾಗಿತ್ತು.ಆದರೆ, ಈ ಉದ್ದೇಶ ಬಿಟ್ಟು ಖಾಸಗಿ ಉದ್ಯಮಗಳು ವಿಶೇಷ ಆರ್ಥಿಕ ವಲಯಕ್ಕೆ ನೀಡಿದ್ದ ಜಮೀನನ್ನು ರಿಯಲ್‌ ಎಸ್ಟೇಟ್‌ ಉದ್ಯಮವನ್ನಾಗಿಸಿಕೊಂಡಿವೆ ಎಂಬ ವ್ಯಾಪಕ ದೂರುಗಳು ಈ ಹಿಂದೆ ಕೇಳಿ ಬಂದಿದ್ದವು.ಈ ಹಿನ್ನೆಲೆಯಲ್ಲಿ ಸರ್ಕಾರ ಟ್ರಸ್ಟ್ ಗಳಿಗೆ ಮಸೂದೆ ಮೂಲಕ ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಅವಕಾಶ ನೀಡಲು ಮುಂದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap