ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಜಗಳೂರು:

      ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆಗಳನ್ನು ಖಂಡಿಸಿ ಸೂಕ್ತ ರಕ್ಷಣೆ, ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುವ ಮೂಲಕ ಪಟ್ಟಣದಲ್ಲಿ ಶುಕ್ರವಾರ ತಹಶಿಲ್ದಾರ್ ಹುಲ್ಲಮನಿ ತಿಮ್ಮಣ್ಣ ಅವರಿಗೆ ಆಶಾ ಕಾರ್ಯಕರ್ತೆಯರು ಮನವಿ ಸಲ್ಲಿಸಿದರು.

      ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಕೋವಿಡ್-19ನಲ್ಲಿ ಭಾಗವಹಿಸಿ ಮನೆ ಮನೆಗಳಿಗೆ ತೆರಳಿ ಆರೋಗ್ಯದ ಬಗ್ಗೆ ಸಮೀಕ್ಷೆ ನಡೆಸುವ ಕಾರ್ಯದಲ್ಲಿ ನಿರತರಾಗಿದ್ದು, ಕೊರೋನಾ ನಿಯಂತ್ರಣ ಗೊಳಿಸಲು ಭಯ ಮತ್ತು ಆತಂಕ ಉಂಟಾಗಿದ್ದರೂ ಸಹ ಎದೆಗುಂದದೆ ಕಾರ್ಯ ನಿರ್ವಹಿಸುವ ಕಾರ್ಯಕರ್ತರ ಮೇಲೆ ಕಿಡಿಗೇಡಿಗಳಿಂದ ಹಲ್ಲೆ ನಡೆಯುತ್ತಿರುವುದು ವಿಷಾಧನೀಯ ಸಂಗತಿಯಾಗಿದ್ದು, ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸಬೇಕು.

     ಕಳೆದ ಎರಡು ತಿಂಗಳಿನಿಂದ ಲಾಕ್‍ಡೌನ್ ಹಿನ್ನಲೆಯಲ್ಲಿ ಅತ್ಯಲ್ಪ ಗೌರವಧನದಿಂದಾಗಿ ಜೀವನ ನಡೆಸುವುದು ದುಸ್ತರವಾಗಿದೆ ಕೋವಿಡ್-19 ಅಂತ್ಯವಾಗುವರೆಗೂ ಅಶಾ ಕಾರ್ಯಕರ್ತೆಯರಿಗೆ 10 ಸಾವಿರ ವಿಶೇಷ ಪ್ಯಾಕೆಜ್ ಘೋಷಿಸಿ ಅಗತ್ಯಕ್ಕನುಗುಣವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಒದಗಿಸಿ ಕೊರೋನಾದಿಂದ ಸಾವಿಗೀಡಾದ ಆಶಾ ಕಾರ್ಯಕರ್ತೆಯರ ಕುಟುಂಬಕ್ಕೆ 50 ಲಕ್ಷ ವಿಮಾ ಸೌಲಭ್ಯವನ್ನು ಕಲ್ಪಿಸಬೇಕೆಂದು ಅವರು ಮೂಲಕ ಒತ್ತಾಯಿಸಿದರು.

     ತಾಲ್ಲೂಕಿನ ಸೊಕ್ಕೆ ಸೇರಿದಂತೆ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿದ್ದಾರೆ.ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ತಾಲ್ಲೂಕು ಅಧ್ಯಕ್ಷರಾದ ಮಾರಕ್ಕ, ಕಾರ್ಯದರ್ಶಿ ಲೀಲಾವತಿ, ಸಹಕಾಯ್ದರ್ಶಿ ತಿಪ್ಪಮ್ಮ, ಸದಸ್ಯರುಗಳಾದ ಮಮತಾ, ಚಾಂದಿನಿ, ಎಸ್.ಆರ್. ಇಂದಿರಾ, ಶ್ವೇತಾ, ಅಂಬಿಕಾ, ಶಶಿಕಲಾ, ಗೀತಮ್ಮ, ಮಂಜಮ್ಮ, ಪಾರ್ವತಮ್ಮ, ಶಾಂತಮ್ಮ, ಭೀಮಕ್ಕ, ಸವಿತಾ, ನಾಗರತ್ನಮ್ಮ, ರೇಣುಕಮ್ಮ, ಪದ್ಮ, ಮಂಜುಳಾ ಸೇರಿದಂತೆ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link