ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆ

ಚಿತ್ರದುರ್ಗ:

        ಪ್ರಧಾನಿ ನರೇಂದ್ರಮೋದಿರವರ ನಾಲ್ಕುವರೆ ವರ್ಷಗಳ ಸಾಧನೆಯನ್ನು ನಿಮ್ಮ ನಿಮ್ಮ ಬೂತ್‍ಗಳಲ್ಲಿ ಮನೆ ಮನೆಗೆ ತಲುಪಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಶಕ್ತಿ ಕೇಂದ್ರದ ಪ್ರಮುಖರಿಗೆ ಸೂಚಿಸಿದರು.ಬಿಜೆಪಿ.ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು ಬೂತ್ ಮಟ್ಟದಲ್ಲಿ ಲೋಕಸಭಾ ಚುನಾವಣೆ ಸಿದ್ದತೆ ಮಾಡಿಕೊಳ್ಳಬೇಕು. ಒಬ್ಬೊಬ್ಬರಿಗೆ ಐದು ಬೂತ್‍ಗಳ ಜವಾಬ್ದಾರಿ ವಹಿಸಲಾಗಿದೆ.

        ಸ್ಟಿಕ್ಕರ್ ಅಂಟಿಸಿ ಕರ ಪತ್ರ ಮನೆ ಮನೆಗೆ ವಿತರಿಸಿ ಪ್ರಧಾನಿ ಮೋದಿರವರ ಸಾಧನೆಯನ್ನು ಜನತೆಗೆ ತಿಳಿಸಿ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿ.ಯನ್ನು ಗೆಲ್ಲಿಸಿ ಎರಡನೇ ಬಾರಿ ಮೋದಿರವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುವಂತೆ ಮನವಿ ಮಾಡಿದರು.

         ಚಿತ್ರದುರ್ಗ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಬಲಿಷ್ಟವಾಗಿದೆ. ದಿನದಿಂದ ದಿನಕ್ಕೆ ಪಕ್ಷಕ್ಕೆ ವರ್ಚಸ್ಸು ಹೆಚ್ಚುತ್ತಲೇ ಇದೆ. ಯುವಕರು, ಮಹಿಳೆಯರು ಹಾಗೂ ವಿದ್ಯಾವಂತರು ಪಕ್ಷದ ಕಡೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಇನ್ನೂ ರೈತರು, ಕೂಲಿ ಕಾರ್ಮಿಕರು ಸಹ ಬಿಜೆಪಿಯ ಕಡೆಗೆ ಆಸಕ್ತಿ ತೋರುತ್ತಿದ್ದಾರೆಂದು ಅವರು ಹೇಳಿದರು

        ಬರುವ ಲೋಕಸಭಾ ಚುನಾವಣೆಯನ್ನು ನಾವು ಸಮರ್ಥವಾಗಿ ಎದುರಿಸಲು ಸಜ್ಜಾಗಬೇಕು. ಕಾರ್ಯಕರ್ತರು ಸಣ್ಣ ಸಣ್ಣ ವಿಚಾರಗಳಿಗೆ ನಮಸ್ತಾಪ ಮಾಡಿಕೊಳ್ಳದೆ ಗೆಲುವಿನ ಗುರಿ ಹೊಂದಿ ಕೆಲಸ ಮಾಡಬೇಕು. ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಆಗಿರುವ ಹಲವು ಅಭಿವೃದ್ದಿ ಕೆಲಸಗಳು ಮತ್ತು ಕೆಲವು ಬದಲಾವಣೆಗಳನ್ನು ಜನರ ಬಳಿ ಇಟ್ಟು ಅವರ ಮನಸ್ಸು ಪರಿವರ್ತನೆ ಮಾಡುವುದು ಶಕ್ತಿ ಕೇಂದ್ರದ ಮುಖಸ್ಥರ ಜವಾಬ್ದಾರಿಯೂ ಆಗಿದೆ ಎಂದು ಕೆ.ಎಸ್.ನವೀನ್ ಹೇಳಿದರು

          ಚಿತ್ರದುರ್ಗ ಲೋಕಸಭೆಯಲ್ಲಿ ಗೆಲುವಿನ ವಾತಾವರಣ ನಿರ್ಮಾಣವಾಗಿರುವ ಕಾರಣಕ್ಕಾಗಿಯೇ ಸಾಕಷ್ಟು ಮಂದಿ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಪಕ್ಷದ ನಾಯಕರು ಸಮರ್ಥ ಅಭ್ಯರ್ಥಿಗೆ ಟಿಕೆಟ್ ಕೊಡುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪಕ್ಷದ ಸಂಘಟನೆಯ ಕಡೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಇದೇ ವೇಳೆ ಕರೆ ನೀಡಿದರು

         ದೇಶದೆಲ್ಲೆಡೆ ಮೋದಿರವರ ಪರ ವಾತಾವರಣವಿದೆ. ದೇಶಕ್ಕೆ ಬಲಿಷ್ಟ ಪ್ರಧಾನಿ ಬೇಕು ಎಂದು ಬಹುಜನರು ನಿರೀಕ್ಷಿಸಿದಂತೆ ಕೆಲಸ ಮಾಡಿ ಎಂತಹ ಸವಾಲು ಸಮಸ್ಯೆಗಳು ಎದುರಾದರೂ ಸಮರ್ಥವಾಗಿ ನಿಭಾಯಿಸಿದ್ದಾರೆ. ರೈತರ ಖಾತೆಗಳಿಗೆ ನೇರವಾಗಿ ಎರಡು ಸಾವಿರ ರೂ.ಜಮಾ ಆಗಲಿದೆ. ಆಯುಷ್ಮಾನ್ ಭಾರತ್ ಹೀಗೆ 300 ಕ್ಕೂ ಹೆಚ್ಚು ಜನಪರ ಯೋಜನೆಗಳನ್ನು ದೇಶದ ಜನತೆಗೆ ಕೊಡುಗೆಯಾಗಿ ನೀಡಿದ್ದಾರೆ ಎಂದು ನುಡಿದರು

         ಬಹುಶಃ ಎಲ್ಲರೂ ಫಲಾನುಭವಿಗಳಾಗಿರುವುದರಿಂದ ನಿಮ್ಮ ಬೂತ್ ಮಟ್ಟದಲ್ಲಿ ಬಿಜೆಪಿ.ಪಕ್ಷದ ಪರ ಪ್ರಚಾರ ಪ್ರಾರಂಭಿಸಿ ಅದಕ್ಕಾಗಿ ಸಂಘಟನೆಯಿಂದ ಒಬ್ಬರು ರಾಜಕೀಯವಾಗಿ ಒಬ್ಬರನ್ನು ಜೋಡಿಸಿದ್ದೇವೆ. ಹತ್ತು ಶಕ್ತಿ ಕೇಂದ್ರಗಳಲ್ಲಿ ಎರೆಡೆರಡು ಸಭೆ ನಡೆಸಿ ವಿಶೇಷ ಗಮನ ಕೊಡಿ ಎಂದು ಶಕ್ತಿ ಕೇಂದ್ರದ ಪ್ರಮುಖರಿಗೆ ತಿಳಿಸಿದರು.ವಿಭಾಗೀಯ ಸಹಪ್ರಭಾರಿ ಜಿ.ಎಂ.ಸುರೇಶ್, ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಶ್‍ಸಿದ್ದಾಪುರ, ಪ್ರಧಾನ ಕಾರ್ಯದರ್ಶಿ ಕಲ್ಲೇಶಯ್ಯ, ವಕ್ತಾರ ನಾಗರಾಜ್‍ಬೇದ್ರೆ, ನಗರಾಧ್ಯಕ್ಷ ತಿಪ್ಪೇಸ್ವಾಮಿ, ಶಿವಣ್ಣಾಚಾರ್, ಖಜಾಂಚಿ ನರೇಂದ್ರ, ಸತೀಶ್ ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link