ಶಾಲಾ ಪ್ರಾರಂಭೋತ್ಸವಕ್ಕೆ ಅನ್ನದಾತನ ಪ್ರಾತ್ಯಕ್ಷತೆ

ಚಳ್ಳಕೆರೆ

      ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇಯಾದ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡು ಬಂದಿರುವ ಪ್ರತಿಷ್ಠಿತ ಎಸ್‍ಆರ್‍ಎಸ್ ವಿದ್ಯಾಸಂಸ್ಥೆ ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ಧೀಕ್ಷೆಯನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಬದುಕನ್ನು ಬೆಳಕಾಗಿಸುವಲ್ಲಿ ಸಫಲವಾಗಿದೆ.

       ಈ ಹಿನ್ನೆಲೆಯಲ್ಲಿ ಜ್ಞಾನದ ಜೋತೆಗೆ ಹಸಿವನ್ನು ನೀಗಿಸುವ ಶಕ್ತಿವುಳ್ಳ ರೈತರ ಹಸಿರು ಕ್ರಾಂತಿಯನ್ನು ನೆಪಿಸುವ ಸಲುವಾಗಿ ಇಂದು ಶಾಲಾ ಪ್ರಾರಂಭದ ದಿನ ಶಾಲಾ ಮಕ್ಕಳಿಗೆ ರೈತರ ಪರಿಶ್ರಮದ ಬಗ್ಗೆ ಪ್ರಾತ್ಯಕ್ಷತೆ ನೀಡುವ ಮೂಲಕ ಪ್ರಸ್ತುತ ವರ್ಷದ ಶಾಲೆಯ ದೈನದಿನ ದಿನಚರಿಗೆ ಚಾಲನೆ ನೀಡಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸುಜಾತಲಿಂಗಾರೆಡ್ಡಿ ತಿಳಿಸಿದರು.

      ಅವರು, ಸೋಮವಾರ ಶಾಲಾ ಆವರಣದಲ್ಲಿರುವ ಶಾಲಾ ಕೈತೋಟದಲ್ಲಿ ನೇಗಿಲ ಯೋಗಿಯ ರೈತನನ್ನು ಕರೆದು ನೇಗಿಲು ಹಾಗೂ ಉಳಿಮೆ ಮಾಡುವ ಎತ್ತುಗಳನ್ನು ಪೂಜಿಸಿ ಮಕ್ಕಳಿಗೆ ರೈತರ ಪರಿಶ್ರಮದಿಂದ ನಮ್ಮ ಆಹಾರದ ಸಮಸ್ಯೆ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಹಸಿರು ಇದ್ದರೆ ಮಾತ್ರ ಎಲ್ಲರ ಉಸಿರು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಾಲೆಗೆ ಆಗಮಿಸಿದ ಪೋಷಕರಿಗೆ ಗಿಡಗಳನ್ನು ವಿತರಿಸಿ ಗಿಡ ನೆಡುವಂತೆ ಮನವಿ ಮಾಡಿದರು. ಶಾಲಾ ಮಕ್ಕಳು ಹಾಗೂ ಶಿಕ್ಷಕರು ಶಾಲೆಯ ಪ್ರಾರಂಭದ ದಿನ ನೆನಪಿಗಾಗಿ ಗಿಡಗಳನ್ನು ನೆಟ್ಟರು.

      ಚಳ್ಳಕೆರೆ ನಗರ ವಾಣಿಜ್ಯ ನಗರಿಯಾಗಿ ಪ್ರಖ್ಯಾತಿ ಹೊಂದಿದ್ದು, ಇತ್ತೀಚಿನ ದಿನಗಳಲ್ಲಿ ಇದು ವಿಜ್ಞಾನ ನಗರಿಯಾಗಿ ವಿಶ್ವಮಟ್ಟದಲ್ಲಿ ಹೆಸರು ಪಡೆದಿದೆ. ಇಂತಹ ಬಹುಮುಖ ಪ್ರತಿಭೆವುಳ್ಳ ಚಳ್ಳಕೆರೆ ನಗರದ ಶೈಕ್ಷಣಿಕ ಅಭಿವೃದ್ಧಿಗಾಗಿ ಎಸ್‍ಆರ್‍ಎಸ್ ವಿದ್ಯಾಸಂಸ್ಥೆ ಪ್ರಸ್ತುತ ವರ್ಷದಿಂದಲೇ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸುವ ಐಎಎಸ್, ಕೆಎಎಸ್, ನೆಟ್, ಸಿಇಟಿ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಭವಿ ಶಿಕ್ಷಕರಿಂದ ತರಬೇತಿ ನೀಡಲು ಯೋಜನೆ ಸಿದ್ದವಿದ್ದು, ರಾಜಸ್ಥಾನದ ಕೋಟಾದಿಂದ ತಜ್ಞರು ಆಗಮಿಸಿ ತರಬೇತಿ ನೀಡುವರು ಎಂದರು.

       ಪ್ರಾಚಾರ್ಯ ವಿಜಯ್ ಮಾತನಾಡಿ, ಶಾಲಾ ಮಕ್ಕಳಿಗೆ ರೈತರ ಬಗ್ಗೆ ಹಾಗೂ ಹಸಿರಿನ ವೈಭವದ ಬಗ್ಗೆ ಪರಿಪಕ್ವತೆಯನ್ನು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳು ನಿತ್ಯ ಸೇವಿಸುವ ಆಹಾರ ಉತ್ಪಾದನೆ ಮಾಡುವಲ್ಲಿ ರೈತರ ಪರಿಶ್ರಮವನ್ನು ಅರ್ಥೈಸಿಕೊಳ್ಳಲು ಮಕ್ಕಳಿಗೆ ಪ್ರಾಯೋಗಿಕವಾಗಿ ರೈತ ಹಾಗೂ ಉಳಿಮೆ ಮಾಡುವ ಎತ್ತು ಹಾಗೂ ನೇಗಿಲಿನೊಂದಿಗೆ ಮಕ್ಕಳಿಗೆ ತಿಳಿಸಿದ್ದು, ಇದು ಮಕ್ಕಳ ಮನದಲ್ಲಿ ಸದಾಕಾಲ ಶಾಶ್ವತವಾಗಿ ಉಳಿಯುತ್ತದೆ ಎಂದರು.

       ಆಡಳಿತಾಧಿಕಾರಿ ಆತ್ಮಾನಂದ ಮಾತನಾಡಿ, ಶಾಲೆಯ ಪ್ರಾರಂಭೋತ್ಸವ ಶಿಕ್ಷಕರು ಹಾಗೂ ಮಕ್ಕಳಿಗೆ ಹೊಸ ಆತ್ಮಾವಿಶ್ವಾಸವನ್ನುಂಟು ಮಾಡಲಿ ಎಂಬ ದೃಷ್ಠಿಯಿಂದ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಕರು ಮಕ್ಕಳೊಂದಿಗೆ ಪೋಷಕರೂ ಸಹ ಕೈಜೋಡಿಸಿ ಈ ಕಾರ್ಯಕ್ರಮಕ್ಕೆ ವಿಶೇಷ ಮೆರಗನ್ನು ತಂದಿದ್ಧಾರೆಂದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕ, ಶಿಕ್ಷಕಿಯರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link