ಪಾವಗಡ
ಮಾಘಮಾಸದ ಹುಣ್ಣಿಮೆ ದಿಂದ ಪ್ರತಿ ವರ್ಷದಂತೆ ಶ್ರೀ ಜೆಷ್ಠ ದೇವಿ ಶಿತಲಾಂಬ ಹಾಗೂ ಶ್ರೀಶನಿಮಾಹತ್ಮ ಕಳ್ಯಾಣೋತ್ಸವ ಮತ್ತು ಬ್ರಹ್ಮರಥಹೋತ್ಸವ ಬುಧುವಾರ ನಡೆಯುತು.
ಪಟ್ಟಣದ ಸುತ್ತು ಮುತ್ತಲು ಗ್ರಾಮೀಣ ಭಾಗದ ಭಕ್ತಾಧಿಗಳು ಹಾಗೂ ಅಂತರಾಜ್ಯದ ಭಕ್ತಾಧಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಅರಕೆಯನ್ನು ತೀರಿಸುತ್ತಾರೆ.
ಈ ಹಿಂದೆ ಶನಿಮಾಹತ್ಮ ಜಾತ್ರೆಯ ಸಂದರ್ಭದಲ್ಲಿ ಗ್ರಾಮೀಣಾ ಭಾಗದ ರೈತರು ಎತ್ತಿನ ಗಾಡಿಯಲ್ಲಿ ಅನ್ನಸಂತರ್ಪಣೆ ಮಾಡುವ ಪ್ರತೀತಿ ಇತ್ತು ದಿನಗಳು ಕಳೆದಂತೆಲ್ಲ ಜಾನುವಾರು ಇಲ್ಲದ ಕಾರಣ ಬೆರಳು ಎಣಿಕೆಷ್ಟು ರೈತರು ಈ ಸಂಪ್ರಾದವನ್ನು ಮುಂದುವರೆದಿದ್ದಾರೆ.
ಭಕ್ತಾಧಿಗಳಾದ ನಾಗೇಂದ್ರ ಹಾಗೂ ಪಿ.ಎಸ್.ಕೆ ವೆಂಕಟೇಶ್‍ಭಾಬು ಮಾತನಾಡಿ ಶ್ರೀ ಶಿತಲಾಂಬ ಮತ್ತು ನವಗ್ರಹ ಅನುಗ್ರಹದಿಂದ ಶನಿಮಾಹತ್ಮ ದೇವರ ಜಾತ್ರೆಯನ್ನು ಮಾಘ ಮಾಸದ ಹುಣಿಮೆ ದಿನ ನಡೆಯುತ್ತದೆ ಶನಿ ದೇವರ ಕೃಪೆಯಿಂದ ತಾಲ್ಲೂಕು ಜನತೆ ಮತ್ತು ರೈತಾಪಿ ವರ್ಗದ ಜನರಿಗೆ ಒಳ್ಳೆಯ ದಿನಗಳು ಬರಲಿ,ಈ ವರ್ಷವಾದರು ಮಳೆ ಬೆಳೆ ಅಗಲಿ ಎಂದು ಶುಭ ಹಾರೈಸಿದರು.
ಫೆ.17 ರಿಂದ 28 ರತನಕ ವಿವಿಧ ಅಲಂಕಾರಗಳಿಂದ ದೇವರ ಪೂಜೆ ಸಲ್ಲಿಸಿ,ಸಂಜೆ 6 ಗಂಟೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೇವರ ವಿಗ್ರಹಗಳನ್ನು ಮೆರವಣೆಗೆ ಮಾಡುತ್ತಾರೆ.ಈ ಕಾರ್ಯಾಕ್ರಮದಲ್ಲಿ ಎಸ್.ಎಸ್.ಕೆ ಸಂಘದ ಅಧ್ಯಕ್ಷ ಧರ್ಮಪಾಲ್, ಕಾರ್ಯಾದರ್ಶಿ ಆನಂದರಾವ್,ಚಂದ್ರಮೋಹನ್,ಪುರಸಭೆ ಅಧ್ಯಕ್ಷ ಸುಮಾಅನಿಲ್,ಮುಖ್ಯಾಧಿಕಾರಿ ನವೀನ್‍ಚಂದ್ರ , ಸಂಘದ ಉಪಾಧ್ಯಕ್ಷ ಶ್ರೀನಿವಾಸ್,ಪುರುಷೋತ್ತಮರೆಡ್ಡಿ,ನಾಗಭೂಷಣರೆಡ್ಡಿ,ಶಾಂತಿದೇವರಾಜು,ಗಂಗಾಧರ,ಪಣೇಂದ್ರ,ರೋಟರಿ ಮಾಜಿ ಅಧ್ಯಕ್ಷ ನಾರಾಯಣಪ್ಪ,ನಾಗರಾಜು ಹಾಜರಿದರು.