ತಾಲ್ಲೂಕು ಕಛೇರಿಯಲ್ಲಿ ಶಂಕರಾಚಾರ್ಯರ ಜಯಂತೋತ್ಸವ

ಹಿರಿಯೂರು :

     ಸನಾತನ ಭಾರತದ ಸಂಸ್ಕøತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಜಗದ್ಗುರು ಶ್ರೀ ಆದಿಶಂಕರಾಚಾರ್ಯರು ಮೊದಲಿಗರು ಎಂಬುದಾಗಿ ತಾಲ್ಲೂಕು ತಹಶೀಲ್ದಾರರಾದ ನಫೀಜಾಬೇಗಂ ಹೇಳಿದರು.

      ನಗರದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಜಗದ್ಗುರು ಶಂಕರಾಚಾರ್ಯರ ಜಯಂತೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

      ಕೇವಲ 32 ವರ್ಷಗಳ ಜೀವಿತದಲ್ಲಿ ಅವರು ಸಾಧಿಸಿದ್ದು ಅಪಾರ. ಈ ಅಲ್ಪಾವಧಿಯಲ್ಲಿಯೇ ಭಾರತದಾದ್ಯಂತ ಸಂಚರಿಸಿ ಅದ್ವೈತತತ್ವವನ್ನು ಪ್ರತಿಪಾದಿಸುತ್ತಾ, ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿ, ಸನಾತನ ಹಿಂದೂಧರ್ಮವನ್ನು ಪುನರುಜ್ಜೀವನಗೊಳಿಸಿದರು ಎಂಬುದಾಗಿ ಅವರು ಹೇಳಿದರು.

      ಈ ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರರಾದ ಮಂಜಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಸಿ.ವಿ.ನಟರಾಜ್, ಸಮಾಜಕಲ್ಯಾಣ ಅಧಿಕಾರಿ ಶ್ರೀಮತಿ ಸುಮತಿ, ತಾ.ಪಂ.ಅಧಿಕಾರಿ ಅಶ್ವತ್ಥಾಮ, ತಾ.ಪಂ.ಸದಸ್ಯ ಓಂಕಾರಪ್ಪ, ರೆವಿನ್ಯೂ ಇಲಾಖೆ ಟಿ.ಶ್ರೀನಿವಾಸ್‍ರೆಡ್ಡಿ, ಬಸವರಾಜ್, ವೆಂಕಟೇಶ್, ಬಿ.ಆರ್.ಶ್ರೀನಿವಾಸ್, ಚನ್ನಬಸವರಾಜ್ ಬ್ರಾಹ್ಮಣ ಸಮಾಜದ ಮುಖಂಡರುಗಳಾದ ಹೆಚ್.ಪ್ರಭಾಕರ್,

        ನರಸಿಂಹಮೂರ್ತಿಧರ್ಮಪುರ, ಜೆ.ಎನ್.ಚಂದ್ರಶೇಖರ್, ಪ್ರಶಾಂತ್ ಅರ್ಚಕರು, ಶ್ರೀಮತಿ ವಿಜಯಲಕ್ಷ್ಮೀ, ರಾಜಸ್ವನಿರೀಕ್ಷಕರಾದ ಲಕ್ಷ್ಮಣ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಾಲ್ಲೂಕು ಕಛೇರಿ ಸಿಬ್ಬಂದಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap