ಕೊಠಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ

ಮಧುಗಿರಿ :

          ತಾಲೂಕು ಸತತ ಬರಪೀಡಿತ ಪ್ರದೇಶವಾಗಿದ್ದು, ರೈತಾಪಿ ವರ್ಗ ತಮ್ಮ ಮಕ್ಕಳಿಗೆ ಕಷ್ಟಪಟ್ಟು ಶಿಕ್ಷಣ ಕೊಡಿಸುತ್ತಿದೆ. ಬಡತನ ಹೋಗಲಾಡಿಸಲು ವಿದ್ಯೆಯೊಂದೇ ಪ್ರಮುಖ ಅಸ್ತ್ರ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

           ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 40 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ 3 ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಸರ್ವಸ್ವವನ್ನೂ ನೀಡುವ ಶಕ್ತಿ ವಿದ್ಯೆಗಿದ್ದು, ವಿದ್ಯಾರ್ಥಿಗಳು ಶ್ರಮವಹಿಸಿ ಉನ್ನತ ಶಿಕ್ಷಣ ಗಳಿಸಿದಾಗ ಮಾತ್ರ ಬಡತನ ಹೋಗಲಾಡಿಸಲು ಸಾಧ್ಯ ಹಿಂದೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿರಲಿಲ್ಲ. ಸರ್ಕಾರ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

          ಬಿಇಓ ನರಸಿಂಹಯ್ಯ, ಉಪ ಪ್ರಾಂಶುಪಾಲ ಹನುಮಂತರಾಯಪ್ಪ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಪುರಸಭಾ ಸದಸ್ಯರಾದ ಎಂ.ಎಲ್. ಗಂಗರಾಜು, ಎಂ.ವಿ. ಮಂಜುನಾಥ್ ತಾ.ಪಂ ಸದಸ್ಯ ನಾಗಭೂಷಣ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮರುಡಪ್ಪ, ಮುಖಂಡ ತುಂಗೋಟಿ ರಾಮಣ್ಣ ಷಫೀ ಅಹಮದ್, ಡಯಟ್ ಪ್ರಾಂಶುಪಾಲ ವೈ.ಎನ್. ರಾಮಕೃಷ್ಣಯ್ಯ, ಇತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link