ಚಳ್ಳಕೆರೆ
ಹಿಂದು ಸಮಾಜದಲ್ಲಿ ತಮ್ಮದೇಯಾದ ತತ್ವ, ಸಿದ್ದಾಂತಗಳ ಮೂಲಕ ಹೊಸ ಕ್ರಾಂತಿಗೆ ನಾಂದಿಹಾಡಿದವರು ಶಂಕರಚಾರ್ಯರು. ಬಾಲ್ಯದಲ್ಲಿಯೇ ಧಾರ್ಮಿಕ ವಿಚಾರಗಳತ್ತ ತಮ್ಮನ್ನು ತೊಡಗಿಸಿಕೊಂಡ ಅವರು, 16ನೇ ವಯಸ್ಸಿನಲ್ಲಿಯೇ ತಮ್ಮ ಎಲ್ಲಾ ಶಿಕ್ಷಣವನ್ನು ಪೂರೈಸಿ ಹಿಂದೂ ಧರ್ಮದ ಸರ್ವತೋಮುಖ ಅಭಿವೃದ್ಧಿಗಾಗಿ ದೇಶದೆಲ್ಲೆಡೆ ಕಾಲ್ನಡಿಗೆ ಪ್ರವಾಸ ಕೈಗೊಂಡ ಹೆಗ್ಗಳಿಕೆ ಅವರದ್ದು ಎಂದು ನಿವೃತ್ತ ಶಿಕ್ಷಕ ಹಾಗೂ ಚಿಂತಕ ಎ.ಅನಂತಪ್ರಸಾದ್ ತಿಳಿಸಿದರು.
ಅವರು, ಗುರುವಾರ ಇಲ್ಲಿನ ಶ್ರೀರಾಮಮಂದಿರದಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘ ಹಮ್ಮಿಕೊಂಡಿದ್ದ ಶಂಕರಚಾರ್ಯರ 888ನೇ ಜನ್ಮದಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯಾವುದೇ ರೀತಿಯ ಆಧುನಿಕತೆಯ ಸ್ಪರ್ಶವಿಲ್ಲದೆ ಕೇವಲ ಜ್ಞಾನದ ಸಹಕಾರದಿಂದ ಸಮಾಜದ ಪರಿವರ್ತನೆಗೆ ಶ್ರಮಿಸಿದ ಅವರು ಎಲ್ಲಾ ಧರ್ಮಗಳ ಪಾಲನೆಗೆ ಮುಕ್ತ ಅವಕಾಶವನ್ನು ಕಲ್ಪಿಸಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಅನಂತರಾಮ್ ಗೌತಮ್ ಮಾತನಾಡಿ, ಶಂಕರಚಾರ್ಯರ ಸಾಧನೆಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶವನ್ನು ಇದೇ ಮೊದಲ ಬಾರಿಗೆ ಸರ್ಕಾರವೇ ಮಾಡುತ್ತಿರುವುದು ಸಂತಸವಿಷಯ. ಕಳೆದ ನೂರಾರು ವರ್ಷಗಳಿಂದ ಹಿಂದೂ ಧರ್ಮ ಗಟ್ಟಿಯಾಗಿ ನೆಲೆಯೂರಲು ಕಾರಣಕರ್ತರೆ ಜಗದ್ಗುರು ಶಂಕರಚಾರ್ಯರು. ದೇಶದ ನಾಲ್ಕು ದಿಕ್ಕುಗಳಲ್ಲಿ ಅದ್ವೈತ್ವ ಮಠಗಳನ್ನು ಸ್ಥಾಪಿಸುವ ಮೂಲಕ ಹಿಂದೂ ಧರ್ಮದ ಮೌಲ್ಯವನ್ನು ಅರಿಯುವಂತೆ ಮಾಡುವಲ್ಲಿ ಅವರು ಯಶಸ್ಸಿಯಾದರು ಎಂದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಎಂ.ವಾಸುದೇವ್‍ರಾವ್, ಮಹಿಳಾ ವೇದಿಕೆ ಅಧ್ಯಕ್ಷೆ ಸೀತಾಲಕ್ಷ್ಮಿವಾದಿರಾಜ್, ಕಾರ್ಯದರ್ಶಿ ಎನ್.ಗೋಪಿನಾಥ, ಸಹ ಕಾರ್ಯದರ್ಶಿ ಎಂ.ಸತ್ಯನಾರಾಯಣ, ಖಜಾಂಚಿ ಪ್ರಕಾಶ್, ಮಾಜಿ ಕಾರ್ಯದರ್ಶಿ ಎಚ್.ಟಿ.ಶಂಕರನಾರಾಯಣ, ನಿರ್ದೇಶಕರಾದ ಶಾಂತಮ್ಮ, ಶೈಲಜಾ, ಲಕ್ಷ್ಮಿಶ್ರೀವತ್ಸ, ಸಿ.ಎಸ್.ಗೋಪಿನಾಥ, ರಾಮಣ್ಣ, ಪ್ರಹ್ಲಾದ್, ಮಧುಮತಿ, ಶಿವಕುಮಾರ್, ಬಿ.ಎನ್.ರಘುನಾಥರಾವ್ ಮುಂತಾದವರು ಭಾಗವಹಿಸಿದ್ದರು. ಪೂಜಾ ಕಾರ್ಯಗಳನ್ನು ಪತಂಜಲಿಶರ್ಮ, ಜೆ.ಎಸ್.ಶ್ರೀನಾಥ ನಡೆಸಿಕೊಟ್ಟರು. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಶಂಕರಚಾರ್ಯರ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
