ಚಿತ್ರದುರ್ಗ
ಕುಂಚಟಿಗ ಮಹಾ ಸಂಸ್ಥಾನದ ಶ್ರೀ ಶಾಂತವೀರ ಶ್ರೀಗಳು ಏನೇ ಮಾಡಿದರೂ ಸಹ ಆದು ಸಮಾಜ ಮತ್ತು ಮಠದ ಪರವಾಗಿ ಇರುತ್ತದೆ ಎಂದು ಶ್ರೀಗಳ ಪರವಾಗಿ ಹಿಂದುಳಿದ ದಲಿತ ಮಠಾಧೀಶರರ ಒಕ್ಕೂಟ ತಿಳಿಸಿದೆ.
ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ ಬೆನ್ನಿಗೆ ನಿಂತ ದಲಿತ ಹಿಂದುಳಿದ ವರ್ಗಗಳ ಮಠಾಧೀಶರು, ಒಕ್ಕೂಟದ ಗೌರವಾಧ್ಯಕ್ಷರು, ಹೊಸದುರ್ಗದ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ನಗರದ ಭೋವಿ ಗುರುಪೀಠದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಶಾಂತವೀರ ಸ್ವಾಮೀಜಿ ವಿರುದ್ದ ದಾಖಲಾಗಿರುವ ಪ್ರಕರಣದಲ್ಲಿ ಕುತಂತ್ರ ಅಡಗಿದೆ ದುರುದ್ದೇಶ ಪೂರಿತವಾದ ಪಿತೂರಿ ನಡೆಯುತ್ತಿದೆ ಎಂದು ಹೇಳಿದರು
ಕುಂಚಿಟಿಗ ಮಠ ಶಾಂತವೀರ ಶ್ರೀಗಳು ಬಂದ ಮೇಲೆ ಪ್ರಾರಂಭವಾಗಿದ್ದು, ಆರಂಭದಲ್ಲಿ ಆಂಬೆಗಾಲು ಗಾತ್ರದ ಜಾಗವು ಸಹಾ ಸಮಾಜಕ್ಕೆ ಇರಲಿಲ್ಲಿ ಆದರೆ ಶ್ರೀಗಳು ಬಂದ ಮೇಲೆ ಕೃಷಿಯನ್ನು ಮಾಡುವುದರ ಮೂಲಕ ಸಮಾಜಕ್ಕೆ ಆಸ್ತಿಯನ್ನು ಖರೀದಿ ಮಾಡಿದ್ದಾರೆ. ಆಸ್ತಿ ನೊಂದಾಣಿಯಲ್ಲಿ ತಂದೆಯ ಹೆಸರು ಅನಿವಾರ್ಯ ಇದರಿಂದ ಆ ರೀತಿ ಮಾಡಿದ್ದಾರೆ ಸ್ವಾಮಿಗಳು ಏನೆ ಮಾಡಿದರು ಸಹಾ ಮುಂದಾಲೋಚನೆ ಇಲ್ಲದೆ ಮಾಡಿಲ್ಲ ಎಂದು ಸ್ವಾಮಿಜಿಯ ಪರವಾಗಿ ಮಾತನಾಡಿದರು.
ಯಾವುದೇ ಮಠದ ಬಗ್ಗೆ ಅಪನಂಬಿಕೆ ಬಂದಾಗ ಭಕ್ತರು ಮತ್ತು ಮಠಾಧೀಶರು ಸೇರಿಕೊಂಡು ಸಮಸ್ಯೆಯನ್ನು ಪರಿಹಾರ ಮಾಡಬೇಕಿದೆ. ಹೊರಗಡೆ ಬರುವುದು ಸರಿಯಲ್ಲ, ಶಾಂತವೀರ ಸ್ವಾಮೀಜಿಗಳು ತುಂಬಾ ಕಷ್ಟಪಟ್ಟು ಮಠದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಮಠದ ಭಕ್ತರು ಸುಳ್ಳು ಆರೋಪಗಳಿಗೆ ಕಿವಿಗೊಡಬಾರದು ಈಗತಾನೆ ಸಂಘಟನೆಯಾಗುತ್ತಿರುವ, ಜಾಗೃತಿಯಾಗುತ್ತಿರುವ ಮಠದ ಬೆಳವಣಿಗೆಗೆ ಸಹಕರಿಸಿ, ನಾವೆಲ್ಲರೂ ಪೂಜ್ಯರ ಜೊತೆ ಇದ್ದೇವೆ ಎಂದು ಬೆಂಬಲಕ್ಕೆ ಮಠಾಧೀಶರು ನಿಂತಿದ್ಧಾರೆ.
ಹೊಸದುರ್ಗ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಸ್ವಾಮಿಜಿಯವರು ಆಸ್ತಿಯನ್ನು ಮಾಡಿರುವುದು ಸಮಾಜಕ್ಕಾಗಿಯೇ ಹೊರೆತು ಸ್ವಂತಕ್ಕಾಗಿ ಅಲ್ಲ, ಸಮುದಾಯದ ಬೆಳವಣಿಗೆಯನ್ನು ಬಯಸುವವರು ಬೇರೆ ಮಾಡಲು ಹೇಗೆ ಸಾಧ್ಯ, ಸಮುದಾಯವನ್ನು ಮುಂದೆ ತರುವುದು ಎಲ್ಲಾ ಮಠಾಧೀಶರ ಮುಖ್ಯ ಉದ್ದೇಶವಾಗಿದೆ, ಈಗ ನಡೆದಿರುವ ವಿಷಯದ ಬಗ್ಗೆ ಭಕ್ತಾಧಿಗಳು ವಿಚಲಿತರಾಗದೇ ಹಿಂದಿನಂತೆ ಸ್ವಾಮಿಗಳ ಪರವಾಗಿ ನಿಂತು ಅವರಿಗೆ ಬೆಂಗಾವಲಾಗಿ ಇರಬೇಕಿದೆ. ಆಸ್ತಿಯನ್ನು ಖೇರಿದಿ ಮಾಡುವಾಗ ಕಾನೂನು ಯಾವ ರೀತಿ ಹೇಳುತ್ತದೆ ಆದೇ ರೀತಿ ಮಾಡಬೇಕಾಗುತ್ತದೆ ಕಾನೂನು ಬಿಟ್ಟಿ ಮಾಡಲು ಬರುವುದಿಲ್ಲ ಎಂದು ತಿಳಿಸಿದರು.
ಬೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಇದು ದುರುದ್ದೇಶದಿಂದ ಮಾಡುತ್ತಿರುವ ಆಪಾದನೆಯಾಗಿದೆ, ಇದನ್ನು ಭಕ್ತಾಧಿಗಳು ನಂಬದೆ ಸ್ವಾಮಿಗಳ ಜೊತೆಯಲ್ಲಿ ಇರಬೇಕಿದೆ. ಕುಂಚಟಿ ಮಠ ಈಗ ಬೆಳೆಯುತ್ತಿರುವ ಮಠವಾಗಿದೆ ಅದನ್ನು ಭಕ್ತರಾದರು ಬೆಳಸಿ ಪೋಷಸಿಬೇಕಿದೆ ಈ ರೀತಿಯಾದ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಹೇಳಿದರು.ಕೃಷ್ಣ ಯಾದವ ಗುರುಪೀಠದ ಯಾದವಾನಂದ ಸ್ವಾಮೀಜಿ, ಸುದ್ದಿಗೋಷ್ಠಿಯಲ್ಲಿ ಭಾಗಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








