ತುಮಕೂರು
ಎಲ್ಲಾ ಧಾರ್ಮಿಕ ಗ್ರಂಥಗಳ ಪ್ರಾರಂಬ ಮತ್ತು ಮುಕ್ತಾಯ ಶಾಂತಿಯ ಮಂತ್ರ ದಿಂದ ವಾಗುತ್ತವೆ. ಪ್ರತಿಯೋಬ್ಬ ಪ್ರಜೆಯೂ ಶಾಂತಿಯನ್ನು ತಾನು ಶಾಂತವಾಗಿರುವರೆವಿಗೂ ಪಾಲಿಸ ಬೇಕಿದೆ. ಅಸಂಖ್ಯಾತ ನಕ್ಷತ್ರಗಳ ಮಧ್ಯದಲ್ಲೂ ಬಾನಿನಲ್ಲಿ ಶಾಂತಿಯಿದೆ. ಕ್ರೂರ ವನ್ಯ ಮೃಗಗಳ ಮಧ್ಯದಲ್ಲೂ ಶಾಂತಿಯಿದೆ. ಇನ್ನು ಅಶಾಂತಿ ಎಲ್ಲಿದೆಂದರೆ ಅದು ಮಾನವ ಜೀವನದಲ್ಲಿ ಮಾತ್ರ. ಈ ಅಶಾಂತಿಗೆ ಕಾರಣ ಮನುಷ್ಯ ತನ್ನ ನೈಜ ಅಸ್ತಿತ್ವವನ್ನು ಮರೆತಿರುವುದರಿಂದ ಎಂದು ಹಿರೆಮಠದ ಡಾ. ಶಿವಾನಂದ ಶೀವಾಚಾರ್ಯ ಸ್ವಾಮಿಜಿ ಹೇಳಿದರು.
ನಗರದ ವಿದ್ಯಾ ಮಾನಸ ಶಾಲೆಯಲ್ಲಿ ಭಾರತ ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ನಡೆದ ವಿಶ್ವ ಶಾಂತಿ ದಿನಾಚರಣೆಯಲ್ಲಿ ಮಾತನಾಡಿದರು.ತನ್ನ ಸೃಷ್ಟಿಕರ್ತನ ವಿಧೇಯತೆಯನ್ನು ಆತನು ಕಳುಹಿಸಿದ ಮಾರ್ಗದರ್ಶನವನ್ನು ಸಂಪೂರ್ಣವಾಗಿ ಕಡೆಗಣಿಸಿರುವುದ ಕಾರಣ ಭೂಮಿಯ ಮೇಲೆ ಕ್ಷೋಭೆ ವಿನಾಶ ಅನ್ಯಾಯ ಅಶಾಂತಿಯು ಹರಡಿತು, ಪ್ರತಿಯೂಂದು ಧರ್ಮದ ಸಂಪ್ರದಾಯವು ಸಹನೆ, ತಾಳ್ಮೆ ಮತ್ತು ಶಾಂತಿಯ ಸಂದೇಶ ನೀಡುತ್ತವೆ. ಗಾಂಧೀಜಿಯವರ ನೇತ್ರತ್ವದಲ್ಲಿ ಭಾರತ ದೇಶ ಶಾಂತಿ ಯಿಂದ ಸ್ವಾತಂತ್ರ್ಯಪಡೆಯಿತು ವಿನಃ ಸಮರದಿಂದಲ್ಲ, ಇಂದಿನ ಈ ಆಧುನಿಕ ಜಗತ್ತಿನಲ್ಲಿ ಮಕಳಲ್ಲಿ ಶಾಂತಿಯ ಪಾಠವನ್ನು ಭೋದಿಸಬೇಕಿದೆ ಎಂದರು.
ರಾಜ್ಯದ ರೆಡ್‍ಕ್ರಾಸ್ ಸಂಸ್ಥೆಯ ಚೇರ್ಮನ್‍ರವರಾದ ಎಸ್. ನಾಗಣ್ಣನವರು ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಶಾಂತಿಯ ಸಂದೇಶವನ್ನು ವಿವರಿಸಿದರು ಮತ್ತು ಈ ಸಂಸ್ಥೆಯ ಸಂಸ್ಥಾಪಕ ಜೀನ್ ಹೆನ್ರೀ ಡೂನೆಂಟ್ ರವರ ಮಾನವೀಯ ಸೇವೆಗೆ ಪ್ರಥಮ ನೋಬಲ್ ಪ್ರಶಸ್ತಿ ನೀಡಲಾಯ್ತು ಅದರಂತೆ ವಿಶ್ವ ಶಾಂತಿದಿನಾಚರಣೆಯಲ್ಲಿ ಶಾಂತಿ ಪಾಲನೆಗಾಗಿ ಪ್ರಾಮಣಿಕ ಪ್ರಯತ್ನ ಪಟ್ಟವವರ ಗುಣಗಾಣ ಮಡಲಾಗುವುದು ಎಂದು ನುಡಿದರು.
ಇತ್ತೀಚೆಗೆ ರಾಜ್ಯದಲ್ಲಿ ಉಂಟಾದ ಮಳೆಯ ಸಂತ್ರಸ್ತರ ನೆರವಿಗೆ ತುಮಕೂರು ರೆಡ್‍ಕ್ರಾಸ್ ಸಂಸ್ಥೆಯಿಂದ ಸುಮಾರು ನಾಲ್ಕು ಕೋಟಿ ಮೌಲ್ಯದ ಅಗತ್ಯ ವಸ್ತುಗಳನ್ನು ಜಿಲ್ಲೆಯ ಎಲ್ಲಾ ಪ್ರಜೆಗಳ ಸಹಕಾರದಿಂದ ಸಂಗ್ರಹಿಸಿ, ನೆರೆ ಸಂತ್ರಸ್ತರಿಗೆ ರವಾನಿಸಲಾಯಿತು ಎಂದರು.
ಮುಷ್ತಾಕ್ ಅಹಮದ್‍ರವರು ವಿಶ್ವ ಶಾಂತಿಯ ದಿನಾಚರಣೆ ಮತ್ತು ಈ ಸಂಸ್ಥೆಯ ಸಾಧನೆಗಳ ಬಗ್ಗೆ ವಿವರಿಸಿದರು. ವಿಶೇಷವಾಗಿ ಬಹು ವೈವಿಧ್ಯತೆಯಿಂದ ಕೂಡಿದ ಅದರಲ್ಲೂ ಏಕತೆಯನ್ನು ಸಾಧಿಸಿ ವಿಶ್ವಕೆ ಒಂದು ಮಾದರಿಯನಿಸಿದ ನಮ್ಮ ಭಾರತ ದೇಶದಲ್ಲೂ ಈ ಮಾನವ ಅಸಮಾನತೆ, ಸಾಮಾಜಿಕ ಅನ್ಯಾಯದ ಮಧ್ಯ ಬದುಕುವ ದುರ್ದಿನಗಳು ಬಂದು ಬಿಟ್ಟವು. ಶಾಂತಿಯ ಮಾರ್ಗ ದರರ್ಶನದಲ್ಲಿ ಸಾದಿಸಬಹುದೆಂದು ನುಡಿದರು. ರೆಡ್‍ಕ್ರಾಸ್ ಕಾರ್ಯಕ್ರಮದ ಅಧ್ಯಕ್ಷಣಿ ಸುಭಾಷಿಣಿ ರವರು ಸ್ವಾಗತಿಸಿದರು, ರಶ್ಮಿ ಬಿಂದಗೀ ರವರು ನಿರುಪಣೆ ಮಾಡಿದರು, ಸಮಾರಂಭದಲ್ಲಿ,ಪ್ರಾಶುಂಪಾಲ ರಾಜಾಶೇಖರಯ್ಯ ನಿವೃತ್ತ ಉಪನಿರ್ದೇಶಕ ಆಂಜಿನಪ್ಪ, ದರ್ಶೀನಿ, ಕಾರ್ಯದರ್ಶಿ ಲೋಕೇಶ್, ಬಾಬು ರಾಜೆಂದ್ರ ಪ್ರಸಾದ್ ಮತ್ತು ಇತರರು ಭಾಗವಹಿಸಿದ್ದರು.
” ಇತ್ತೀಚೆಗೆ ರಾಜ್ಯದಲ್ಲಿ ಉಂಟಾದ ಮಳೆಯ ಸಂತ್ರಸ್ತರ ನೆರವಿಗೆ ತುಮಕೂರು ರೆಡ್‍ಕ್ರಾಸ್ ಸಂಸ್ಥೆಯಿಂದ ಸುಮಾರು ನಾಲ್ಕು ಕೋಟಿ ಮೌಲ್ಯದ ಅಗತ್ಯ ವಸ್ತುಗಳನ್ನು ಜಿಲ್ಲೆಯ ಎಲ್ಲಾ ಪ್ರಜೆಗಳ ಸಹಕಾರದಿಂದ ಸಂಗ್ರಹಿಸಿ, ನೆರೆ ಸಂತ್ರಸ್ತರಿಗೆ ರವಾನಿಸಲಾಯಿತು.”
ಎಸ್. ನಾಗಣ್ಣ, ರಾಜ್ಯ ರೆಡ್‍ಕ್ರಾಸ್ ಸಂಸ್ಥೆಯ ಚೇರ್ಮನ್
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ