ತುರುವೇಕೆರೆ
ತಾಲ್ಲೂಕಿನ ಕರ್ನಾಟಕ ರಾಜ್ಯ ನೌಕರರ ಸಂಘದ ನಿರ್ದೇಶಕರ ಚುನಾವಣೆ ಮತದಾನ ಶಾಂತಿಯುತವಾಗಿ ಗುರುವಾರ ನಡೆಯಿತು.
14 ನಿರ್ದೇಶಕ ಸ್ಥಾನಗಳಿಗೆ ವಿವಿಧ ಇಲಾಖೆಗಳಾದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ 3, ಆರೋಗ್ಯ ಇಲಾಖೆಯಲ್ಲಿ 4 , ಪ್ರೌಢಶಾಲಾ ಸಂಘದಿಂದ 1 , ಪದವಿ ಪೂರ್ವ ಕಾಲೇಜುಗಳಿಂದ 1 ಸ್ಥಾನಕ್ಕೆ , ಪದವಿ ಕಾಲೇಜು 1, ನೀರಾವರಿ ಇಲಾಖೆಯಿಂದ 2, ತಾಲ್ಲೂಕು ಪಂಚಾಯಿತಿ 2 ಸ್ಥಾನಗಳಿಗೆ ಚುನಾವಣೆ ನಡೆಯಿತು. ಪಟ್ಟಣದ ಸರ್ಕಾರಿ ಬಾಲಕರ ಪಾಠಶಾಲೆಯಲ್ಲಿ ಬೆಳಗ್ಗೆ 11 ರಿಂದ 4 ಗಂಟೆಯವರೆಗೆ ಮತದಾನ ನಡೆಯಿತು. ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಅಭ್ಯರ್ಥಿಗಳು ಮತದಾರರನ್ನು ಮತ ಕೇಳುತ್ತಿದ್ದ ದೃಶ್ಯ ಕಂಡು ಬಂತು.
ಆಯ್ಕೆಯಾದ ನಿರ್ದೇಶಕರು: ಪ್ರೌಢಶಾಲಾ ಸಂಘದಿಂದ ಎಂ.ಬಿ.ಲೋಕೇಶ್, ಪದವಿ ಪೂರ್ವ ಕಾಲೇಜು ಬಿ.ಆರ್.ರಂಗಯ್ಯ. ಪದವಿ ಕಾಲೇಜು ಸಂಘದಿಂದ ಜಿ.ಗಂಗಾಧರಯ್ಯ, ನೀರಾವರಿ ಇಲಾಖೆ ಜಿ.ಎಂ.ಜಗದೀಶ್, ಮಂಜಣ್ಣ, ಆರೋಗ್ಯ ಇಲಾಖೆಯಿಂದ ಎಂ.ವಿ.ಗಿಡ್ಡೇಗೌಡ, ಕೆ.ಎನ್.ಜಗದೀಶ್, ಕೆ.ವೆಂಕಟೇಶ್, ಯತಿರಾಜು, ತಾಲ್ಲೂಕು ಪಂಚಾಯಿತಿಯಿಂದ ಎಂ.ಎಲ್.ಚಂದ್ರಶೇಖರ್, ಪುರುಷೋತ್ತಮ್ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮೂರು ಸ್ಥಾನಗಳಿಗೆ 6 ಅಭ್ಯರ್ಥಿಗಳು ಸ್ಪರ್ಧಿಸಿದ್ದು ಬಹು ರಾತ್ರಿವರೆಗೂ ಎಣಿಕೆ ಕಾರ್ಯ ಮುಂದುವರೆದಿದ್ದು ತೀವ್ರ ಕುತೂಹಲ ಕೆರಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
