ಶರಣಸಂಸ್ಕೃತಿ ಉತ್ಸವ

ಬೆಂಗಳೂರು:

    ಚಿತ್ರದುರ್ಗದ ಮುರುಘಾಮಠದ ವತಿಯಿಂದ ಪ್ರತಿವರ್ಷ ಆಚರಿಸಲ್ಪಡುವ ಶರಣಸಂಸ್ಕೃತಿ ಉತ್ಸವ ಇದೇ ತಿಂಗಳ 13ರಿಂದ 22ವರೆಗೆ ನಡೆಯಲಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

     ಪ್ರತಿವರ್ಷ ನೀಡಲಾಗುವ ಮರುಘಾಶ್ರೀ ಪ್ರಶಸ್ತಿಗೆ ಈ ಸಾಲಿನಲ್ಲಿ ಐವರನ್ನು ಆಯ್ಕೆ ಮಾಡಲಾಗಿದೆ. ಮಾಜಿ ಸಚಿವ ಭೀಮಣ್ಣ ಖಂಡ್ರೆ, ಹಿರಿಯ ನಟ ಶ್ರೀನಾಥ್, ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ, ಸಾಹಸಿ ನೊಮಿಟೋ ಕಾಮದಾರ್, ಡಾ. ಎಸ್.ಎಲ್. ಎನ್ ಸ್ವಾಮಿ ದಂಪತಿ ಹಾಗೂ ಮರಣೋತ್ತರವಾಗಿ ದಿವಂಗತ ಸಿದ್ದು ನ್ಯಾಮೇಗೌಡ ಅವರಿಗೆ ಮುರುಘಾಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.

    ಹರಿಯಾಣದ ಬಾಲಪ್ರತಿಭೆ ಕೌಟಿಲ್ಯ ಪಂಡಿತ್ ಗೆ ಭರಮಣ್ಣ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮುರುಘಾ ಶರಣರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link