ಹಿರಿಯೂರು :
ನಗರದಲ್ಲಿ ವಾಸಿಸುತ್ತಿರುವ ಬಡಜನರ ಬಡತನ ಹೋಗಲಾಡಿಸಲು ಸ್ವಯಂ ಉದ್ಯೋಗ, ಕೌಶಲ್ಯತರಬೇತಿ ಸೇರಿದಂತೆ ಬೀದಿಬದಿಯ ವ್ಯಾಪಾರಿಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಶಹರಿಸಮೃದ್ಧಿ ಉತ್ಸವ್ ಯೋಜನೆಯ ಪ್ರಯೋಜನವನ್ನು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಪಡೆದುಕೊಳ್ಳಬೇಕು ಎಂಬುದಾಗಿ ನಗರಸಭೆ ಅಧ್ಯಕ್ಷೆ ಮಂಜುಳಾ ಹೇಳಿದರು.
ನಗರಸಭೆ ನೇತೃತ್ವದಲ್ಲಿ ಕೇಂದ್ರ ಸರ್ಕಾರ ದೀನಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾದ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು
ಪೌರಯುಕ್ತ ಎಚ್. ಮಹಂತೇಶ್ ಮಾತನಾಡಿ, ಫೆ.15ರವರೆಗೆ “ಶಹರಿ ಸಮೃದಿ” ಉತ್ಸವ ನಡೆಯಲಿದ್ದು , ಅಷ್ಟರ ಒಳಗೆ ಇಲ್ಲಿಯವರೆಗೂ ಕೇಂದ್ರದ ಯೋಜನೆಗಳ ಪ್ರಯೋಜನ ಪಡೆಯದ ಫಲಾನುಭವಿಗಳ ಪಟ್ಟಿ ತಯಾರಿಸಿ ಅವರನ್ನು ಯೋಜನೆ ವ್ಯಾಪ್ತಿಗೆ ತರಲಾಗುವುದು. ಈ ಉದ್ದೇಶದಿಂದ ನಮ್ಮ ಯೋಜನೆ ಹೆಸರಲ್ಲಿ ಜಾಥಾ ನಡೆಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ನಗರಸಭಾ ಸದಸ್ಯ ಜಿ.ಪ್ರೇಮ್‍ಕುಮಾರ್ ಮಾತನಾಡಿ, ನಗರದ ಸುರಕ್ಷಾಜಾಲವನ್ನು ಬಲಪಡಿಸಲು ಜನಧನ್‍ಯೋಜನೆ, ಪ್ರಧಾನಮಂತ್ರಿ ಉಜ್ವಲಯೋಜನೆ, ಜೀವನ್‍ಜ್ಯೋತಿ ಯೋಜನೆ, ಸುರಕ್ಷಾಯೋಜನೆ, ಆವಾಸ್‍ಯೋಜನೆ, ರಾಷ್ಟ್ರೀಯ ಪೌಷ್ಟಿಕಮಿಷನ್,ಸ್ವಚ್ಛ ಭಾರತ ಮಿಷನ್ ಯೋಜನೆಗಳ ಲಾಭವನ್ನು ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕು ಎಂದು ಅವರು ತಿಳಿಸಿದರು.
ಈ ಜಾಥಾದಲ್ಲಿ ನಗರಸಭೆ ಉಪಾಧ್ಯಕ್ಷೆ ಇಮ್ರಾನಬಾನು, ನಗರಸಭೆ ಮಾಜಿಅಧ್ಯಕ್ಷ ಟಿ.ಚಂದ್ರಶೇಖರ್, ನಗರಸಭೆ ಸದಸ್ಯರುಗಳಾದ ಶಿವಣ್ಣಯಾದವ್, ಎಸ್‍ಪಿಟಿ ದಾದಪೀರ್, ಲೀಲಾವತಿ, ಪಾರ್ವತಮ್ಮ, ವಿಜಯಲಕ್ಷ್ಮೀ, ಸಿ.ಪಿ.ಕರುಣಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ