ವೈಚಾರಿಕ ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ ಮುರುಘಾ ಶರಣರ ನೇತೃತ್ವದಲ್ಲಿ ಸೌಹಾರ್ಧ ನಡಿಗೆ

ಚಿತ್ರದುರ್ಗ;

       ಐತಿಹಾಸಿಕ ನಗರ ಚಿತ್ರದುರ್ಗದಲ್ಲಿ ಮದ್ಯಕರ್ನಾಟಕದ ವೈಚಾರಿಕ ದಸರಾ ಎಂದೇ ಕರೆಸಿಕೊಳ್ಳುವ ಮುರುಘಾಮಠದ ಶರಣ ಸಂಸ್ಕ್ರತಿ ಉತ್ಸವ ಶನಿವಾರದಂದು ಆರಂಭವಾಯಿತು. ಹತ್ತು ದಿನಗಳ ಕಾಲ ನಡೆಯುವ ಈ ಉತ್ಸವಕ್ಕೆ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಸೌಹಾರ್ದ ನಡಿಗೆ ಶರಣ ಸಂಸ್ಕತಿ ಕಡೆಗೆ ಎನ್ನುವ ವಿನೂತನ ಕಾರ್ಯಕ್ರಮದೊಂದಿಗೆ ಚಾಲನೆ ನೀಡಲಾಯಿತು.

        ಈ ಜಾತಾವು ನಗರದ ಕನಕ ವೃತ್ರದಿಂದ, ಕೋಟೆಯ ಮುಂಬಾಗ, ಜೋಗಿಮಟ್ಟಿ ರಸ್ತೆ, ಪಟ್ಟದ ಪರಮೇಶ್ವರಿ ಶಾಲೆ, ಚಳ್ಳಕೆರೆ ಗೇಟ್, ಆರ್.ಟಿ.ಒ ಕಚೇರಿ ಹತ್ತಿರ, ರಾಷ್ಟ್ರೀಯ ಹೆದ್ದಾರಿ 13ರ ಗ್ರಾಮಾಂತರ ಪೋಲಿಸ್‍ಠಾಣೆ, ರೈಲ್ವೆಸ್ಟೇಷನ್, ಎಸ್.ಜೆ.ಎಮ್.ವಿದ್ಯಾರ್ಥಿ ನಿಲಯದ ಬಳಿ ಸಾಗಿತು. ವಿವಿಧ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು, ಸಿನಿಮಾ ಕಲಾವಿದರು ಈ ಸೌಹಾರ್ಧ ನಡಿಗೆಯಲ್ಲಿ ಪಾಲ್ಗೊಂಡು ಶ್ರೀಗಳ ಜೊತೆ ಹೆಜ್ಜೆ ಹಾಕಿದರು.

        ಪರಿವರ್ತನೆ ಜಗದ ನಿಯಮ, ಪರಿವರ್ತನೆಯಾಗದಿದ್ದಲ್ಲಿ ಕಾಲವೇ ಪರಿವರ್ತಿಸುತ್ತದೆ. ಮರುಕವಿಲ್ಲದ ಮಾನವನನಿಗಿಂತ ಮರದ ನೆರಳೆ ವಾಸಿ. ಸ್ವಪ್ರಯತ್ನದಿಂದ ಸಾಮಾನ್ಯನೂ ಸಮರ್ಥನಾಗಬಲ್ಲ. ಆಸಕ್ತಿಯಿಂದ ಜೀವನ ಅನಾವರಣ ನಿರಾಸಕ್ತಿಯಿಂದ ಜೀವನ್ಮರಣ. ಅಂತರಂಗದ ಶುದ್ದತೆ ಬಹಿರಂಗದಲ್ಲಿ ಸಾತ್ವಿಕತೆ ಸಾಧಿಸುವುದೇ ಬದುಕಿನ ಬದ್ದತೆ ಎನ್ನುವಂತಹ ಘೋಷವಾಕ್ಯಗಳನ್ನು ಕೂಗುತ್ತ ಜಾತವು ಸಾಗಿತು.

        ನಂತರ ಅನುಭವಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿ ಮಾತನಾಡಿದ ಡಾ.ಶಿವಮೂರ್ತಿಮುರುಘಾಶರಣರು, ಸರ್ವಜನಾಂಗದ ಶಾಂತಿಯ ತೋಟ ಎಂಬುವ ರೀತಿಯಲ್ಲಿ ಶ್ರೀಮಠವು ನಡೆಯುತ್ತ ಸಾಗಿದೆ. ಇಂದು ಚಿತ್ರರಂಗದ ಕಲಾವಿದರು ಆಗಮಿಸಿ ನಮ್ಮ ಸೌಹಾರ್ಧ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಶರಣ ಸಂಸ್ಕøತಿ ಉತ್ಸವಕ್ಕೆ ಮೆರಗು ತಂದಿದೆ ಎಂದು ನುಡಿದರು.

      ಚಿತ್ರನಟ ಹಾಗು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಮಾತನಾಡಿ ಇಂತಹ ಒಂದು ಅನುಭವ ವಿಶೇಷವಾದದ್ದು . ದಸರ ಉತ್ಸವವನ್ನು ಇಡೀ ನಾಡೆನೆಲ್ಲೆಡೆ ಆಚರಿಸುತ್ತಾರೆ. ಚಿತ್ರರಂಗದವರಿಗೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಾಲನೆ ನೀಡಲು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.. ಜಾತಿ ಮತ ಯಾವುದನ್ನು ನೋಡದೆ ನಾವೆಲ್ಲರು ಒಂದೇ ಎಂದು ಸಾರುವ ಮಠ ಶ್ರೀಮಠವು ಆಗಿದೆ. ಚಿತ್ರರಂಗದಲ್ಲಿ ನಾವೆಲ್ಲರೂ ಒಂದೊಂದು ಪಾತ್ರ ಮಾಡುತ್ತ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಪ್ರಯತ್ನ ಮಾಡುತ್ತೇವೆ. ಹಲವು ವಿಧವಾದ ಅನುಭವಗಳಾಗಿವೆ. ಇಂದು ಮುರುಘಾಶರಣರ ಪಾದದಲ್ಲಿರುವುದು ನನ್ನ ಅದೃಷ್ಟವಾಗಿದೆ. ಈ ಸಂಧರ್ಭವನ್ನು ನನ್ನ ಜೀವನದಲ್ಲಿ ಎಂದು ಮರೆಯುವುದಿಲ್ಲ ಎಂದು ತಿಳಿಸಿದರು.

      ಹಿರಿಯ ಚಿತ್ರನಟ ದೊಡ್ಡಣ್ಣ ಮಾತನಾಡಿ, ಜನಿಸಿದ ಸಕಲ ಜೀವರಾಶಿಗಳಿಗೆ ಆಹಾರವೇ ಮುಖ್ಯ, ಜಗತ್ತಿನಲ್ಲಿ ಅನ್ನ ದೊಡ್ಡದು. ಜಗತ್ತಿನಲ್ಲಿ ತಾಯಿ ಸತ್ತರೆ ಬದುಕುವರು, ಆದರ ಅನ್ನವಿಲ್ಲದೇ ಯಾವ ಜೀವರಾಶಿಯು ಬದುಕುವುದಿಲ್ಲ. ಶರಣರು ಅನ್ನದಾಸೋಹವನ್ನು ಶ್ರೀಮಠದಲ್ಲಿ ಉಚಿತವಾಗಿ ನೀಡುವಂತಹ ಕಾರ್ಯವನ್ನು ಮಾಡುತ್ತಿರುತ್ತಾರೆ, ಅದು ನಮ್ಮೆಲ್ಲರ ಪುಣ್ಯ ಹಾಗು ಭಾಗ್ಯವೆನ್ನಬೇಕು ಎಂದು ನುಡಿದರು.

       ಸಾಹಿತಿ ಬಿ.ಎಲ್.ವೇಣು ಮಾತನಾಡಿ, ನಾನು ನಿಮ್ಮೂರಿನ ಮಗ, ನನ್ನ ಬೆಳವಣಿಗೆಯಲ್ಲಿ ಈ ಮಠದ ಪಾತ್ರ ಮಹತ್ವದ್ದಾಗಿದೆ. ಆದಿಕವಿ ಪಂಪ ಹೇಳಿರುವಂತೆ ಮಾನವ ಜಾತಿ ತಾನೊಂದೆ ವಲಂ ಎನ್ನುವಂತೆ ಶರಣರು ಸಹ ಇದನ್ನೆ ಹೇಳುತ್ತ ಪಾಲಿಸುತ್ತಿದ್ದಾರೆ. ಅವರ ಆಶೀರ್ವಾದವು ಸದಾ ನಮ್ಮಗಳ ಮೇಲಿರಲೆಂದು ನುಡಿದರು.

        ಕಾರ್ಯಕ್ರಮದಲ್ಲಿ ಶರಣ ಸಂಸ್ಕøತಿ ಉತ್ಸವ 2018ರ ಗೌರಾಧ್ಯಕ್ಷರಾದ ಮಧುರೆ ಹೊಸದುರ್ಗದ ಶ್ರೀ ಭಗೀರಥ ಪೀಠದ ಜ.ಶ್ರೀ.ಪುರುಷೋತ್ತಮನಂದಪುರಿ ಮಹಾಸ್ವಾಮಿಗಳು, ಕಾರ್ಯಧ್ಯಕ್ಷರಾದ ಪಟೇಲ್ ಶಿವಕುಮಾರ್, ವಿಧಾನ ಪರಿಷತ್ ಸದಸ್ಯರಾದ ಜಯಮ್ಮ ಬಾಲರಾಜ್, ಚಿತ್ರದುರ್ಗದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಟ ಶ್ರೀನಿವಾಸ್ ಮೂರ್ತಿ, ಎಸ್.ಜೆ.ಎಮ್.ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಾಹಕ ನಿರ್ದೇಶಕರುಗಳಾದ ಡಾ.ಈ.ಚಿತ್ರಶೇಖರ್, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ, ಕಾರ್ಯನಿರ್ವಾಹಣಾಧಿಕಾರಿ ದೊರೆಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಮುರಾ ಕಲಾವಿದರು ವಚನಗೀತೆ ಪ್ರಾರ್ಥಿಸಿ, ಪ್ರದೀಪ್‍ಕುಮಾರ್.ಜಿ.ಟಿ. ಸ್ವಾಗತಿಸಿ, ಪ್ರೊ.ಸಾಲಿಮಠ್ ನಿರೂಪಿಸಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link