ಚಳ್ಳಕೆರೆ
ಆರೋಗ್ಯ ಇಲಾಖೆ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯವನ್ನು ಉತ್ತಮ ಮಟ್ಟದಲ್ಲಿ ಕಾಪಾಡುವ ಜವಾಬ್ದಾರಿಯನ್ನು ಹೊಂದಿದೆ. ವೈದ್ಯರೂ ಸೇರಿದಂತೆ ಎಲ್ಲಾ ಸಿಬ್ಬಂದಿ ವರ್ಗ ಉತ್ತಮವಾಗಿ ಕಾರ್ಯನಿರ್ವಹಿಸಿದಲ್ಲಿ ಜನರ ಆರೋಗ್ಯ ಸುಧಾರಣೆಯಾಗುತ್ತದೆ. ಆರೋಗ್ಯ ಇಲಾಖೆ ತನ್ನದೇಯಾದ ವಿಶೇಷ ಜವಾಬ್ದಾರಿಯನ್ನು ಹೊಂದಿದ್ದು, ಈ ಜವಾಬ್ದಾರಿಯನ್ನು ನಿಬಾಯಿಸಲು ಇಲಾಖೆಗೆ ಸಹಕಾರ ನೀಡಿದ ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜಿ.ತಿಪ್ಪೇಸ್ವಾಮಿ ತಿಳಿಸಿದರು.
ಅವರು, ಶನಿವಾರ ತಮ್ಮ ಕಚೇರಿಯಲ್ಲಿ ಕಳೆದ ಸುಮಾರು 30 ವರ್ಷಗಳಿಂದ ಆಸ್ಪತ್ರೆಯ ಸಿನೀಯರ್ ಫಾರ್ಮ್‍ಸ್ಟಿಟ್ಕಾ ರ್ಯನಿರ್ವಹಿಸುತ್ತಿದ್ದ ತಿಪ್ಫೇಸ್ವಾಮಿ ಸ್ವಯಂ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಿವೃತ್ತಿ ಹೊಂದಿದ ತಿಪ್ಫೇಸ್ವಾಮಿ ಮಾತನಾಡಿ, ಆರೋಗ್ಯ ಇಲಾಖೆಯಲ್ಲಿ ಸೇವೆ ಮಾಡಲು ಎಲ್ಲಾ ರೀತಿಯ ಸಹಕಾರವನ್ನು ವೈದ್ಯರೂ ಸೇರಿದಂತೆ ಎಲ್ಲರೂ ನೀಡಿದ್ಧಾರೆ. ರೋಗಗಳಿಂದ ನರಳುವ ವ್ಯಕ್ತಿ ಆಸ್ಪತ್ರೆಗೆ ಬಂದಾಗ ಅವನಿಗೆ ಚಿಕಿತ್ಸೆ ನೀಡಿ ಗುಣಮುಖನನ್ನಾಗಿ ಮಾಡಿದಾಗ ಗುಣಮುಖ ಹೊಂದಿದ ವ್ಯಕ್ತಿ ಸದಾಕಾಲ ಇಲಾಖೆ ಮತ್ತು ಸೇವೆ ಮಾಡಿದ ಎಲ್ಲರನ್ನೂ ನೆನೆಯುತ್ತಾನೆ. ಈ ಇಲಾಖೆಯಲ್ಲಿ ಯಾವುದೇ ಲೋಪವಿಲ್ಲದೆ ಸೇವೆ ಸಲ್ಲಿಸಿದ ತೃಪ್ತಿ ನನಗೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಅಮಿತ್‍ಗುಪ್ತ, ಡಾ.ಆರ್.ಮಂಜಪ್ಪ, ಡಾ.ಜಯಲಕ್ಷ್ಮಿ, ಡಾ.ಶಮಾಪರ್ಮಿನ್, ಡಾ.ಆದಿಮನಿ, ಡಾ.ವೆಂಕಟೇಶ್, ಡಾ.ಲಾವಣ್ಯ, ಡಾ.ಸುಹೀನಾ, ಸಹಾಯಕ ಆಡಳಿತಾಧಿಕಾರಿ ಕದರಪ್ಪ, ಲ್ಯಾಬ್ ತಿಪ್ಪೇಸ್ವಾಮಿ, ಪ್ರಕಾಶ್ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ