ಕ್ಷಣದ ಮಹತ್ವ ಸಾರಲು ಬೀದಿ ನಾಟಕ

ದಾವಣಗೆರೆ :

     ಶಿಕ್ಷಣದ ಮಹತ್ವ ಸಾರುವ ಮೂಲಕ ಅನಕ್ಷರತೆಯನ್ನು ಹೋಗಲಾಡಿಸಬೇಕೆಂಬ ಸದುದ್ದೇಶದಿಂದ ದವನ್ ಕಾಲೇಜಿನ ಅಂತಿಮ ಬಿ.ಕಾಂ. ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಗಿದೆ ಎಂದು ವಿದ್ಯಾರ್ಥಿನಿ ಎನ್.ರಿಧಿ ತಿಳಿಸಿದರು.

       ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನ ಕಾರ್ಯದರ್ಶಿ ವೀರೇಶ್ ಪಟೇಲ್, ನಿರ್ದೇಶಕ ಹರ್ಷರಾಜ್ ಗುಜ್ಜರ್, ಸಂಯೋಜಕ ಡಾ.ಅಂಜು, ಪ್ರಾಂಶುಪಾಲೆ ಡಾ.ಶಿಲ್ಪಾ ಮುರುಗೇಶ್, ಡೀನ್ ನಂದೀಶ್ವರ, ಬಿ.ಬಿ.ಎಂ. ಮುಖ್ಯಸ್ಥ ಶಂಕರ್.ಬಿ.ಸಿ, ಬಿಸಿಎ ಮುಖ್ಯಸ್ಥೆ ಅನಿತಾ, ಬಿ.ಕಾಂ.ಮುಖ್ಯಸ್ಥೆ ಶಿಲ್ಪ ಆರ್.ವೈ ಹಾಗೂ ತರಗತಿ ಮುಖ್ಯಸ್ಥ ಚಂದನ್ ಜಿ.ಬಿ. ಅವರ ಮಾರ್ಗದರ್ಶನದಲ್ಲಿ ನಾನು ಸೇರಿದಂತೆ ನಮ್ಮ ಕಾಲೇಜಿನ ಅಂತಿಮ ಬಿ.ಕಾಂ. ವಿದ್ಯಾರ್ಥಿಗಳು ಸೇರಿ ಶಿಕ್ಷಣದ ಮಹತ್ವ ಸಾರುವ ‘ನುಕ್ಕಡ್’ ನಾಟಕವನ್ನು ಪ್ರದರ್ಶಿಸುವ ಮೂಲಕ ಅನಕ್ಷರತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ್ದೇವೆ ಎಂದು ಹೇಳಿದರು.

      ಆರ್ಥಿಕ, ಸಾಮಾಜಿಕ ಕಾರಣಗಳಿಂದ ಹಲವರು ಶಿಕ್ಷಣದಿಂದ ವಂಚಿತರಾಗಿರುವವರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಸಾರಿ ಹೇಳಿದರೆ, ನಾಡಿನ ಅನಕ್ಷರತೆಯನ್ನು ದೂರ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ನಗರದ ಡಿಆರ್‍ಎಂ ಕಾಲೇಜು ಆವರಣ ಹಾಗೂ ಎಂಸಿಸಿ ಎ ಬ್ಲಾಕ್ ನಲ್ಲಿರುವ ಪ್ರೇಮಾಲಯದಲ್ಲಿ ಬೀದಿ ನಾಟಕ ಪ್ರದರ್ಶಿಸುವ ಮೂಲಕ ಸಾಕ್ಷರತಾ ಸಮಾಜ ನಿರ್ಮಾಣಕ್ಕಾಗಿ ಒಂದು ಸಣ್ಣ ಪ್ರಯತ್ನ ಮಾಡಿದ್ದೇವೆ ಎಂದರು.

     ಅನಕ್ಷರಸ್ಥರಿಗೆ ಹಣಕಾಸಿನ ನೆರವು ನೀಡುವ ಬದಲಿಗೆ ನಮ್ಮ ಬಳಿಯಿರುವ ಹಳೇಯ ಪುಸ್ತಕಗಳನ್ನು ಹಾಗೂ ವಿದ್ಯಾಭ್ಯಾಸಕ್ಕೆ ಅಗತ್ಯವಿರುವ ವಸ್ತುಗಳನ್ನು ನೀಡಿದರೆ ಉಪಯೋಗವಾಗಲಿದೆ. ಅಲ್ಲದೇ, ಸರ್ಕಾರದ ಸೌಲಭ್ಯಗಳನ್ನು ಸಹ ಅಕ್ಷರ ವಂಚಿತರಿಗೆ ಮುಟ್ಟಿಸುವ ಮೂಲಕ ಶಿಕ್ಷಣ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಸಹ ಆಗಿದೆ ಎಂದು ಹೇಳಿದರು.

      ದೇಶದಲ್ಲಿ ಶೇ.72 ರಷ್ಟು ಸಾಕ್ಷರತೆಯ ಪ್ರಮಾಣವಿದ್ದರೂ ಸಹ ಶೇ.28ರಷ್ಟು ಮಕ್ಕಳಿಗೆ ಓದಲು, ಬರೆಯಲು ಬರುವುದಿಲ್ಲ. ಹೀಗಾಗಿ ಆ ಮಕ್ಕಳಲ್ಲಿರುವ ನ್ಯೂನತೆಯನ್ನು ಸರಿಪಡಿಸಿ, ಆ ಮಗುವೂ ಎಲ್ಲರಂತೆ ಓದವಂತೆ ಮಾಡಬೇಕಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಉದಯ ಭಾಸ್ಕರ್, ಸಿದ್ದಾರ್ಥ್, ಬಿ.ನಿಧಿ, ಹೆಚ್.ಎಸ್ ಪೂಜಾ, ಸುಷ್ಮಾ, ಕೆ.ಪೂಜಾ, ಸ್ವಾತಿ, ದೀಪ್ತಿ, ಅನುಷಾ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link