ಬೆಂಗಳೂರು :![](https://prajapragathi.com/wp-content/uploads/2019/05/shilpa-ramya-.gif)
![](https://prajapragathi.com/wp-content/uploads/2019/05/shilpa-ramya-.gif)
ಚುನಾವಣೆ ಶುರುವಾದಾಗಿನಿಂದ ಇಲ್ಲಿಯವರೆಗೂ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಟ್ವೀಟ್ ಗಳನ್ನು ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ನಟಿ ಕಮ್ ರಾಜಕಾರಣಿ ರಮ್ಯಾ ಅವರಿಗೆ ಶಿಲ್ಪಾ ಗಣೇಶ್ ಅವರು ಕುಟುಕಿದ್ದಾರೆ.
ಫಲಿತಾಂಶ ಬಂದ ನಂತರದಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ನಟಿ ರಮ್ಯಾಗೆ ಶಿಲ್ಪಾ ಗಣೇಶ್ ಅವರು ಟ್ವೀಟ್ ಮಾಡಿ ರಮ್ಯಾ ಎಲ್ಲಿದಿಯಮ್ಮಾ? ಎಲ್ಲಿ ನಿಮ್ಮ ಅಧ್ಯಕ್ಷ ರಾಹುಲ್? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್ ಗಳು? ಎಲ್ಲೋಯ್ತು ನಿಮ್ಮ ಆಧಾರವಿಲ್ಲದ ಆರೋಪಗಳು? ಅದಕ್ಕೆ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡೋ ಮೊದಲು ತಮ್ಮ ಬಗ್ಗೆ ತಮಗೆ ತಿಳಿದಿರಬೇಕು ಎಂದು ಟ್ವೀಟ್ ಮಾಡುವ ಮೂಲಕ ತರಾಟೆಗೆ ತೆಗೆದು ಕೊಂಡಿದ್ದಾರೆ.
ರಮ್ಯಾ ಎಲ್ಲಿದಿಯಮ್ಮಾ? ಎಲ್ಲಿ ನಿಮ್ಮ ಅದ್ಯಕ್ಷ ರಾಹುಲ್? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್ಗಳು? ಎಲ್ಲೋಯ್ತು ನಿಮ್ಮ ಆಧಾರವಿಲ್ಲದ ಆರೋಪಗಳು?
ಅದಕ್ಕೆ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡೋ ಮೊದಲು ತಮ್ಮ ಬಗ್ಗೆ ತಮಗೆ ತಿಳಿದಿರಬೇಕು…..?♀️ pic.twitter.com/428S861eLK
— Shilpa Ganesh (@ShilpaaGanesh) May 23, 2019
ಮೋದಿ ವಿರುದ್ಧ ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕುತ್ತಿದ್ದ ರಮ್ಯಾಗೆ ಶಿಲ್ಪಾ ಗಣೇಶ್ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಇದೇ ಮೊದಲೆನಲ್ಲ . ಫೋಟೋಶಾಪ್ ಬಳಸಿ ತಿರುಚಿದ ಫೋಟೋ ಬಳಸಿ ಜನರ ದಾರಿ ತಪ್ಪಿಸುವ ಕೆಲಸ ಮಾಡುವುದು ನಿಮಗೆ ಶೋಭೆ ನೀಡುವುದಿಲ್ಲ ಎಂದು ಟ್ವೀಟಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/b2756e91a0bab3e03476177839d2a616.gif)