ದಾವಣಗೆರೆ:
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ಕ್ಷತ್ರೀಯ ಮರಾಠ ವಿದ್ಯಾವರ್ಧಕ ಸಂಘದ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಲಾಯಿತು.
ನಗರದ ದುರ್ಗಾಂಭಿಕಾ ದೇವಸ್ಥಾನದ ಬಳಿಯಲ್ಲಿರುವ ಶಿವಾಜಿ ವೃತ್ತದಿಂದ ಆರಂಭವಾದ ಬೈಕ್ ರ್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಇಂದು ನಗರದಲ್ಲಿ ನಡೆಯಲಿರುವ ಶ್ರೀಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಬಗ್ಗೆ ಜಾಗೃತಿ ಮೂಡಿಸಿತು.
ತಲೆಗೆ ಕೇಸರಿ ಪೇಟಾ ಸುತ್ತಿದ್ದ ಯುವಕರು ಗುಂಪು ಶಿವಾಜಿ ಪರ ಘೋಷಣೆ ಮೊಳಗಿಸುತ್ತಿದುದು ಬೈಕ್ ರ್ಯಾಲಿಯ ವಿಶೇಷವಾಗಿತ್ತು. ಅಲ್ಲದೆ, ಬೈಕ್ ರ್ಯಾಲಿಯಲ್ಲಿದ್ದ ತೆರೆದ ಜೀಪಿಗೆ ಮೊನ್ನೆ ಉಗ್ರರದಾಳಿಗೆ ಹುತಾತ್ಮರಾದ ವೀರ ಯೋಧರ ಭಾವಚಿತ್ರವನ್ನು ಅಳವಡಿಸಿದ್ದ ಫ್ಲೆಕ್ಸ್ ಅಳವಡಿಸಿ, ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.ಬೈಕ್ ರ್ಯಾಲಿಯಲ್ಲಿ ಮರಾಠ ವಿದ್ಯಾವರ್ಧಕ ಸಂಘದ ಮಾಲತೇಶರಾವ್ ಜಾಧವ್, ವೈ.ಮಲ್ಲೇಶ್, ಯಶವಂತರಾವ್ ಜಾಧವ್, ಚೌಹಾಣ್, ಎ.ಸಿ.ರಾಘವೇಂದ್ರ, ಜಯಣ್ಣ ಜಾಧವ್, ಕುಮಾರ್, ಭಾಗ್ಯ ಪಿಸಾಳೆ, ಕುಮಾರ ಸೇರಿದಂತೆ ಹಲವರು ಭಾಗವಹಿಸಿದ್ದರು.