ಶಿವಾಜಿ ಮಹಾರಾಜರು ಕುರುಬರ ವಂಶದವರು !

ಹುಳಿಯಾರು:

         ಛತ್ರಪತಿ ಶಿವಾಜಿ ಮಹಾರಾಜರು ಕುರುಬರ ವಂಶದವರು ಎಂದು ಸಂಶೋದಕ ಹಾಗೂ ಉಪನ್ಯಾಸಕ ಶಿಕಾರಿಪುರದ ಎನ್.ಸುರೇಶ್ ಅವರು ಹೇಳಿದ್ದಾರೆ.

          ಹುಳಿಯಾರಿನಲ್ಲಿ ಏರ್ಪಡಿಸಿದ್ದ ಕನಕ ಜಂಯತ್ಯೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಶಿವಾಜಿ ಅವರು ಮಹಾರಾಷ್ಟ್ರದ ಕೌಳಿ ದನಗರ್ ಎನ್ನುವ ಕುರುಬ ಸಮಾಜದ ವೀರ ಯೋದ. ಮರಾಠಿಗರಲ್ಲಿ ಬರುವ ಜಾದವ್, ಸೊರಟೆ ಪಂಗಡಗಳು ಹಾಲುಮತ ಕಲಕ್ಕೆ ಸೇರಿದವರು ಎಂದರು ಅವರು ವಿವರಿಸಿದ್ದಾರೆ.

         ಹೆಸರಾಂತ ಸಂಶೋಧಕ ಸಿ.ವೀರಣ್ಣ ಅವರ ಕನ್ನಡ ಸಾಹಿತ್ಯ ಚರಿತ್ರೆಯ ಪುಸ್ತಕ ದಾಖಲೆಗಳ ಪ್ರಕಾರ ಶಾತವಾಹನರು ಕುರುಬರಾಗಿದ್ದು ಅವರ ನಾಣ್ಯದಲ್ಲಿ ಟಗರಿನ ಚಿಹ್ನೆಯಿತ್ತು. ಅಲ್ಲದೆ ಹೊಯ್ಸಳರು ಸಹ ಕುರುಬರು, ವಿಜಯನಗರ ಸಾಮ್ರಾಜ್ಯ ಕಟ್ಟಿದ ಅಕ್ಕಬುಕ್ಕರು ಸಹ ಕುರುಬರು ಹೀಗೆ ದೇಶ ಮತ್ತು ರಾಜ್ಯವನ್ನು ಆಳಿದ ಕುರುಬರು ಇಂದು ಅಧಿಕಾರವನ್ನು ಮತ್ತೊಬ್ಬರಿಗೆ ಕೊಟ್ಟು ಅವರಿಂದೆ ಬಹುಪರಾಕ್ ಕೂಗಿಕೊಂಡು ಓಡಾಡುತ್ತಿರುವುದು ದುಖಃದ ಸಂಗತಿ ಎಂದರು.

        ಲಿಂಗಾಯಿತರ ಧರ್ಮ ಉಳಿದು ಬೆಳೆಯಲು ಕುರುಬರ ಕೊಡುಗೆ ಮಹತ್ವದಾಗಿದೆ. ಕುರುಬರಾದ ಹೊಯ್ಸಳರು, ವಿಜಯನಗರದ ರಾಜರು ಆಶ್ರಯ ಕೊಟ್ಟಿದ್ದಾರೆ. ಬಸವನ್ಣ ಅವರ ವಚನ ಸಾಹಿತ್ಯ ಪುರೋಹಿತ ಶಾಹಿಗಳ ದಬ್ಬಾಳಿಕೆಗೆ ಕಳೆದು ಹೋಗುವ ಸಂದರ್ಭದಲ್ಲಿ ರೇವಣಸಿದ್ದೇಶ್ವರರ ಮಗ ರುದ್ರಮುನಿ ಒಡೆಯರ್ ಅವರು ವಚನದ ಕಟ್ಟುಗಳನ್ನು ರಕ್ಷಿಸಿದ್ದಾರೆ. ಇದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದು ಹೇಳಿದರು.

         ಯುದ್ದದಿಂದ ಶಾಂತಿ, ನೆಮ್ಮದಿ, ಸಹಬಾಳ್ವೆ ಅಸಾಧ್ಯ ಎಂಬುದನ್ನು ಮನಗಂಡು ಯುದ್ದಕ್ಕೆ ತಿಲಾಂಜಲಿ ಇಟ್ಟು ಲೋಕಕಲ್ಯಾಣಕ್ಕೆ ದುಡಿದವರಲ್ಲಿ ಅಶೋಕನನ್ನು ಬಿಟ್ಟರೆ ಕನಕದಾಸರೊಬ್ಬರೆ ಎಂದ ಅವರು. ಕನಕದಾಸರ ಮೇಲೆ ಇಸ್ಲಾಂ ಧರ್ಮ ಹಾಗೂ ಸೂಫಸಂತರ ಪ್ರಭಾವ ಬೀರಿದ್ದು ಅವರ ಕೀರ್ತನೆಗಳನ್ನು ಓದಿದರೆ ಕಬಿರರ ಪದ್ಯಗಳನ್ನು ಓದುವ ಅನುಭವ ಬರುವುದು ಇದಕ್ಕೆ ನಿದರ್ಶನವಾಗಿದೆ ಎಂದರು.

          ಕನಕರು ಕರ್ನಾಟಕ ಸೇರಿದಂತೆ ಆಂದ್ರ, ತಮಿಳುನಾಡು, ರಾಜಸ್ಥಾನ ಹೀಗೆ ಅನೇಕ ರಾಜ್ಯಗಳಿಗೆ ತಂಬೂರಿ, ತಾಳ ಹಿಡಿದು ಲೋಕದ ಡೊಂಕನ್ನು ತಮ್ಮ ಕೀರ್ತನೆಗಳ ಮೂಲಕ ತಿದ್ದು ಪ್ರಯತ್ನ ಪಟ್ಟಿದ್ದಾರೆ. ಇದಕ್ಕೆ ತಮಿಳುನಾಡಿನ ತಂಜಾಊರಿನಲ್ಲಿರುವ ಕನಕಕೊಳ, ರಾಜಸ್ಥಾನದಲ್ಲಿರುವ ಕನಕೋದ್ಯಾನವನ ನಿದರ್ಶನವಾಗಿದೆ. ಕನಕರು ಊರೂರು ಸುತ್ತುತ್ತ ತಳ ಸಮುದಾಯವನ್ನು ಸಂಘಟಿಸಿ ಅವರಿಗೆ ಸಾಮಾಜಿಕ ನ್ಯಾಯ ಕೊಡಲು ಹೋರಾಡುತ್ತಿದ್ದರು. ಇದಕ್ಕೆ ಉಡುಪಿಯ ಕೃಷ್ಣ ದರ್ಶನ ನಿದರ್ಶನವಾಗಿದೆ ಎಂದು ಹೇಳಿದರು.

            ಹೊಸದುರ್ಗದ ಕಾಗಿನೆಲೆ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ, ಬೆಸ್ಕಾಂ ಎಇಇ ಎನ್.ಬಿ.ಗವೀರಂಗಯ್ಯ, ನಿವೃತ್ತ ಉಪನ್ಯಾಸಕ ರಾಮಯ್ಯ, ತಿಮ್ಮಾಪುರ ಗ್ರಾಪಂ ಅಧ್ಯಕ್ಷ ಎನ್.ಬಿ.ದೇವರಾಜು, ಸಿನಿಮಾ ನಿರ್ಮಾಪರ ನಂದಿಹಳ್ಳಿ ಶಿವಣ್ಣ, ಕನಕದಾಸ ವಿದ್ಯಾ ಸಂಸ್ಥೆಯ ಶಿವಪ್ರಕಾಶ್, ಕನಕ ಯುವ ಸೇನೆಯ ಕೆ.ಪಿ.ಮಂಜುನಾಥ್, ಕನಕಬ್ಯಾಂಕ್‍ನ ಕೃಷ್ಣಮೂರ್ತಿ ಸೇರಿದಂತೆ ಹೋಬಳಿಯ ಗುರುರೇವಣಸಿದ್ದೇಶ್ವರ ಮಠಗಳ, ಬೀರಲಿಂಗೇಶ್ವರ ದೇವಸ್ಥಾನಗಳ ಗುರುಗಳು, ಗೌಡರುಗಳು, ಹರಿವಾಣದವರು, ಬಳಗ ಬಂಢಾರಿಗಳು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link