ಮುಂಬಯಿ
ಹಿಂಧೂ ರಾಷ್ಟ್ರದ ವೀರ ಕನಸುಗಾರ,ಹಿಂದು ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಸ್ಮಾರಕವನ್ನು ಸ್ಥಳಾಂತರ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿಳಿಸಿದ್ದಾರೆ.
ಅಕ್ಟೋಬರ್ 24ರಂದು ಪ್ರತಿಮೆ ನಿರ್ಮಾಣ ಸ್ಥಳದತ್ತ ತೆರಳುತ್ತಿದ್ದ ವೇಳೆ, ಅರಬ್ಬೀ ಸಮುದ್ರದಲ್ಲಿ ದೋಣಿ ಮುಗುಚಿ ಒಬ್ಬರು ಮೃತಪಟ್ಟ ಬಳಿಕ ಪ್ರತಿಮೆ ಸ್ಥಳಾಂತರ ಕೂಗೆದ್ದಿದ್ದವು.
“ಸ್ಮಾರಕವನ್ನು ಸ್ಥಳಾಂತರ ಮಾಡಲು ಯಾವುದೇ ಸೂಕ್ತ ಕಾರಣಗಳಿಲ್ಲ ಮತ್ತು ಅದೇ ಜಾಗದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ. ನಾವಾಗಲೇ ಸ್ಮಾರಕದ ಕೆಲಸ ಆರಂಭಿಸಿದ್ದೇವೆ. ಸ್ಮಾರಕದ ಸ್ಥಳಕ್ಕೆ ಶಾರ್ಟ್‌ಕಟ್ ಹಾದಿ ಹಿಡಿದ ಕಾರಣ ಈ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ಫಡಣವೀಸ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
