ಲಿಂಗೈಕ್ಯ ಡಾ. ಶಿವಕುಮಾರಸ್ವಾಮಿಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮ

ತುರುವೇಕೆರೆ:

          ಬಸವಣ್ಣರ ಅಭಿನವ ಮೂರ್ತಿಯನ್ನು ಸಿದ್ದಗಂಗಾ ಶ್ರೀಗಳಾಗಿದ್ದ ಲಿಂಗೈಕ್ಯ ಡಾ. ಶಿವಕುಮಾರಸ್ವಾಮಿಗಳಲ್ಲಿ ಕಂಡಿದ್ದೇವೆ ಎಂದು ನಿವೃತ್ತ ಜಿಲ್ಲಾಧಿಕಾರಿ ಡಾ|| ಸಿ.ಸೋಮಶೇಖರ್ ತಿಳಿಸಿದರು.

          ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗ ಮಂದಿರ ಆವರಣದಲ್ಲಿ ಭಾನುವಾರ ಶ್ರೀ ಶಿವಕುಮಾರ ಜನ್ಮ ಜಯಂತಿ ಮಹೋತ್ಸವ ಸಮಿತಿ, ಶ್ರೀಗಳ ಭಕ್ತವೃಂದ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಿದ್ದಗಂಗಾಶ್ರೀ ಲಿಂಗೈಕ್ಯ ಡಾ. ಶಿವಕುಮಾರಸ್ವಾಮಿಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಮಾತನಾಡಿದರು.

           ಶಿವಕುಮಾರ ಸ್ವಾಮಿಗಳು ಮಹಾನ್ ಮಾನವತಾವಾದಿ. ಶ್ರೀಗಳ 111 ವರ್ಷ ಸೇವೆ ಅನನ್ಯ ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ, ಜ್ಞಾನ ದಾಸೋಹವನ್ನು ನೀಡಿದ್ದಾರೆ. ಮಠದಲ್ಲಿದ್ದ 9 ಸಾವಿರ ಮಕ್ಕಳನ್ನು ಖುದ್ದು ಪರಿಶೀಲಿಸುವ ಜೊತೆ ಇಂಗ್ಲೀಷ್ ಪಾಠ ಸಹ ಮಾಡುತ್ತಿದ್ದರು. ತುಮಕೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಂದರ್ಬದಲ್ಲಿ ಶ್ರೀಗಳ ಜನ್ಮ ಶತಮಾನೋತ್ಸವ ಮಾಡುವಂತಹ ಅವಕಾಶ ಸಿಕ್ಕದ್ದು ನನ್ನ ಬಾಗ್ಯವೇ ಸರಿ ಎಂದು ಅಭಿಪ್ರಾಯ ಪಟ್ಟರು.

          ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ದೀಪ ಬೆಳಕು, ಹೂ ಸುವಾಸನೆ, ಕೊಡುವ ಹಾಗೆ ಶಿವಕುಮಾರ ಸ್ವಾಮಿಗಳು ಪಕ್ಷಾತೀತ, ಜಾತಿರಹಿತ ಸೇವೆ ಸಲ್ಲಿಸಿ ಅತ್ಯಂತ ಶ್ರೇಷ್ಟರಾಗಿದ್ದಾರೆ. ನಾವು ಬಸವಣ್ಣನನ್ನು ನೋಡಿಲ್ಲ, ಶಿವಕುಮಾರ ಸ್ವಾಮಿಗಳಲ್ಲಿ ಕಂಡಿದ್ದೇವೆ. ಸ್ವಾಮಿಗಳ ನೆರಳಿನಲ್ಲಿ ಬದುಕು ಬೇಕಿದೆ. ಶರಣರಿಗೆ ಮರಣ ಇಲ್ಲ ಮತ್ತೊಮ್ಮೆ ಮಹಾತ್ಮರಾಗಿ ಹುಟ್ಟಿ ಬರಲಿ ಎಂದು ತಿಳಿಸಿದರು.

         ಕೆರಗೋಡಿರಂಗಾಪುರ ಮಠದ ಗುರುಪರದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ ಸಿದ್ದಗಂಗಾಶ್ರೀಗಳು ಗುಡಿ ಗೋಪುರಗಳನ್ನು ಕಟ್ಟಲಿಲ್ಲ. ಬದಲಿಗೆ ಸಾವಿರಾರು ವಿದ್ಯಾಸಂಸ್ಥೆಗಳು, ಸಂಸೃತ ಶಾಲೆಗಳನ್ನು ತೆರಯುವ ಮೂಲಕ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದ್ದಾರೆ.ಮಠದ ಮಕ್ಕಳಿಗೆ ವಸತಿ ಅನ್ನ, ಅಕ್ಷರದ ಜೊತೆಗೆ ಕಾಯಕವನ್ನು ಕಲಿಸಿದ್ದಾರೆ ಎಂದರು.

         ಅಧ್ಯಕ್ಷತೆ ವಹಿಸಿದ್ದ ಶಾಸಕ ಮಸಾಲ ಜಯರಾಮ್ ಮಾತನಾಡಿ ಶಿವಕುಮಾರ ಸ್ವಾಮಿಗಳು ವಿಶ್ವ ರತ್ನ ಅವರ ಪುಣ್ಯ ಸ್ಮರಣೆಯನ್ನು ಇಡೀ ರಾಜ್ಯವಲ್ಲದೆ ದೇಶವಿದೇಶಗಲಲ್ಲಿಯೂ ಆಚರಿಸಿದ್ದಾರೆ. ಈಗಾಗಲೇ ಶಿವಕುಮಾರ ಸ್ವಾಮಿಗಳ ನೆನೆಪಿಗಾಗಿ ಪಟ್ಟಣದ ಪ್ರಮುಖ ವೃತ್ತ ಅಥವಾ ಪಟ್ಟಣದ ಮುಖ್ಯ ರಸ್ತೆಗೆ ಸ್ವಾಮೀಜಿ ಹೆಸರಿಟ್ಟು ಒಂದು ಪುತ್ತಳಿ ಅನಾವರಣ ಮಾಡಲು ಚಿಂತಿಸಲಾಗಿದೆ ಎಂದರು.
ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಮಹಾಸ್ವಾಮಿಜಿ, ಬಳ್ಳೆಕಟ್ಟೆ ಸಂಸ್ಥಾನ ಮಠದ ಇಮ್ಮಡಿ ಕರಿಬಸವ ದೇಶಿಕೇಂದ್ರ ಮಹಾಸ್ವಾಮಿಜಿ, ವಿರಕ್ತ ಮಠದ ಕರಿವೃಷಭದೇಶಿಕೇಂದ್ರ ಮಹಾಸ್ವಾಮೀಜಿ, ಬದರಿಕಾಶ್ರಮ ಓಂಕಾರಾನಂದ ಮಹಾಸ್ವಾಮಿಜಿ ಶ್ರೀಗಳು ನಡೆದು ಬಂದ ದಾರಿ ಸವಿಸ್ತಾರವಾಗಿ ತಿಳಿಸಿದರು.

           ಗೋಡೆಕೆರೆ ಮಹಾಸಂಸ್ಥಾನ ಮಠದ ಸ್ಥಿರ ಪಟ್ಟಾಧ್ಯಕ್ಷರಾದ ಸಿದ್ದರಾಮದೇಶಿಕೇಂದ್ರ ಮಹಾಸ್ವಾಮಿ, ಚರಪಟ್ಟಾಧ್ಯಕ್ಷ ಮೃತ್ಯಂಜಯದೇಶಿಕೇಂದ್ರ ಮಹಾಸ್ವಾಮಿಜಿ, ಮಾತಾಮಂಗಳಾನಂದಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕರುಗಳಾದ ಎಂ.ಟಿ.ಕೃಷ್ಣಪ್ಪ, ಹೆಚ್.ಬಿ.ನಂಜೇಗೌಡ, ತುಮುಲ್ ಜಿಲ್ಲಾಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ಮಾತನಾಡಿದರು. ವೀರಶೈವ ಸಮಾಜದ ತಾ. ಅಧ್ಯಕ್ಷ ಎಸ್.ಎಮ್. ಕುಮಾರಸ್ವಾಮಿ ಸ್ವಾಗತಿಸಿ ಶಿಕ್ಷಕ ಸಾ.ಶಿ.ದೇವರಾಜು ನಿರೂಪಿಸಿ, ರಾಜಶೇಖರ್‍ವಂದಿಸಿದರು.

         ಕಾರ್ಯಕ್ರಮಕ್ಕೂ ಮುನ್ನ ಅಕ್ಕನಬಳಗದಿಂದ ವಚನಗಾಯನ ಏರ್ಪಡಿಸಲಾಗಿತ್ತು. ವಿವಿದ ಮಠಾಧೀಶರು ಶ್ರೀಗಳ ಪಾದುಕೆಗೆ ಪುಷ್ಪಾರ್ಚನೆ ಮಾಡಿ ಭಕ್ತಿ ನಮನ ಅಮರ್ಪಿಸಿದರು. ವೇದಿಕೆ ಕಾರ್ಯಕ್ರಮದ ತರುವಾಯ ವೇದಿಕೆಯಲ್ಲಿ ಪೂಜಿಸಿದ್ದ ಶ್ರೀಗಳ ಪಾದುಕೆಗೆ ಭಕ್ತರು ಸರದಿಯಲ್ಲಿ ನಿಂತು ಪ್ರಣಾಮ ಸಲ್ಲಿಸಿದರು.

           ಇದೇ ಸಂದರ್ಬದಲ್ಲಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕ ಕಂಚಿರಾಯಪ್ಪ ಬರೆದಿರುವ ಬೆಳಕು ಎಂಬ ಹೆಸರಿನ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಅರಳೀಕೆರೆ ಸರ್ಕಾರಿ ಶಾಲಾ ಮಕ್ಕಳು ಶ್ರೀಗಳ ಅನುಕರಣೆ ನೃತ್ಯರೂಪಕವನ್ನು ನೆಡೆಸಿಕೊಟ್ಟರು. ಆಗಮಿಸಿದ ಪಾಲ್ಗೋಂಡಿದ್ದ ಭಕ್ತರಿಗೆ ಉಪ್ಪಿಟ್ಟು ಕೇಸರಿಭಾತ್, ಪಾಯಸ, ಬೂಂದಿ, ಪಲ್ಯ, ಚಿತ್ರಾನ್ನ, ಅನ್ನಸಾಂಬರ್, ಮಜ್ಜಿಗೆ, ಕುಡಿಯುವ ನೀರು ಸೇರಿದಂತೆ ದಾಸೋಹ ಬೆಳಗಿನಿಂದಲೂ ವ್ಯವಸ್ಥಿತವಾಗಿ ಮಾಡಲಾಗಿದ್ದು ಸಾವಿರಾರು ಭಕ್ತರು ಸರದಿಯಂತೆ ಪ್ರಸಾದ ಸ್ವೀಕರಿಸಿದರು. ತಾಲ್ಲೂಕಿನ ಜನಪ್ರತಿನಿಧಿಗಳು, ವಿವಿದ ಗಣ್ಯರು, ನಾಗರೀಕರು ಸೇರಿದಂತೆ ಅಪಾರ ಭಕ್ತವೃಂದ ಪಾಲ್ಗೋಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link