ತುರುವೇಕೆರೆ:
ನಡೆದಾಡುವ ದೇವರು ಲಕ್ಷಾಂತರ ಮಕ್ಕಳಿಗೆ ವಿದ್ಯೆ,ಅನ್ನ,ಆಶ್ರಯ ನೀಡಿ ತ್ರಿವಿಧ ದಾಸೋಹಿಗಳಾದ ಸಿದ್ದಗಂಗ ಮಠದ ಶ್ರೀ ಶ್ರೀ ಶ್ರೀ ಡಾ|| ಶಿವಕುಮಾರ ಮಹಾಸ್ವಾಮೀಜಿಗಳ ಪುಣ್ಯಾರಾಧನೆಯನ್ನು ಭಾನುವಾರ ಬೆಳಿಗ್ಗೆ 10:30 ಕ್ಕೆ ಪಟ್ಟಣದ ಬಯಲುರಂಗ ಮಂದಿರದ ಆವರಣದಲ್ಲಿ ಆಯೋಜಿಸಿದ್ದು ನಿಮಿತ್ತ ಕಾರ್ಯಕ್ರಮದ ಸಕಲ ಸಿದ್ದತೆಗಳು ನಡೆಯುತ್ತಿವೆ ಎಂದು ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಂ. ಕುಮಾರಸ್ವಾಮಿ ತಿಳಿಸಿದರು.
ತಾಲ್ಲೂಕಿನ ಶ್ರೀಗಳ ಅಭಿಮಾನಿಗಳು, ಭಕ್ತವೃಂದ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮವನ್ನು ಶಾಸಕ ಮಸಾಲ ಜಯರಾಂ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು ತಾಲ್ಲೂಕಿನಾದ್ಯಂತ ಸಹಸ್ರಾರು ಶರಣ ಬಂಧುಗಳು ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶ್ರೀಗಳು ನಾಡಿಗೆ, ದೇಶಕ್ಕೆ ಅಪಾರವಾದ ಸೇವೆ ಸಲ್ಲಿಸಿ ಜನಮನದಲ್ಲಿ ಬೇರೂರಿದ್ದಾರೆ. ನಾವು ಶಿರಡಿ ಸಾಯಿಬಾಬಾ, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು, ಯಡಿಯೂರು ಸಿದ್ದಲಿಂಗೇಶ್ವರನ್ನು ಕಣ್ಣಿಂದ ನೋಡಿಲ್ಲವಾದರೂ ಅವರುಗಳು ಮಾಡಿಹೋದ ಪವಾಡ ಸೇವೆ ಸ್ಮರಿಸಿ ಇಂದು ಅವರುಗಳು ದೇವ ಮಾನವರಾಗಿ ಭಕ್ತರಿಗೆ ಆಶೀರ್ವಾದ ಮಾಡುತ್ತಿದ್ದಾರೆ. ಅಂತವರ ಸಾಲಿಗೆ ಸೇರಿದ ಶಿವಕುಮಾರ ಸ್ವಾಮಿಗಳ ಪುಣ್ಯ ಸ್ಮರಣೆ ಮಾಡುವುದು ನಮ್ಮ ಭಾಗ್ಯವಾಗಿದ್ದು ಆ ನಿಟ್ಟಿನಲ್ಲಿ ಪಟ್ಟಣದ ಬಯಲು ರಂಗಮಂದಿದ ಆವರಣದಲ್ಲಿ ಬೃಹತ್ ವೇದಿಕೆ ಈಗಾಗಲೇ ನಿರ್ಮಾಣವಾಗಿದೆ.
ಬೆಳಿಗ್ಗೆ 10:30 ಕ್ಕೆ ವೇದಿಕೆ ಕಾರ್ಯಕ್ರಮದಲ್ಲಿ ಹರಗುರು ಚರಮೂರ್ತಿಗಳು ಸಾನಿಧ್ಯ ವಹಿಸಲಿದ್ದು ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿಗಳ ಪಾದುಕೆ ಮತ್ತು ಸ್ವಾಮಿಯವರ 6 ಅಡಿ ಎತ್ತರದ ಪುತ್ಥಳಿಗೆ ಪೂಜೆ ಸಲ್ಲಿಸಿ ಶ್ರೀಗಳ ಪಾದುಕೆಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಸೇರಿದಂತೆ ಸಾವಿರಾರು ಭಕ್ತರು ಶ್ರೀಗಳ ಪಾದುಕೆಗೆ ಭಕ್ತಿನಮನ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಶ್ರೀಗಳ ಬಗ್ಗೆ ನುಡಿ ನಮನಗಳನ್ನು ನಿವೃತ್ತ ಐ ಎ ಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ನಡೆಸಿಕೊಡಲಿದ್ದಾರೆ. ತಾಲ್ಲೂಕಿನಾದ್ಯಂತ ಸುಮಾರು 10 ಸಾವಿರಕ್ಕೂ ಹೆಚ್ಚು ಭಕ್ತಾಧಿಗಳು ಈ ಪುಣ್ಯರಾಧನೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು ಈಗಾಗಲೇ ಸುಮಾರು 15 ಕ್ವಿಂಟಾಲ್ ಬೂಂದಿ ತಯಾರಿ ಮಾಡಿದ್ದು ಬಂದಂತ ಭಕ್ತರಿಗೆ ಪಾಯಸ ಬೂಂದಿ, ಅನ್ನ ಸಾಂಬಾರು, ಮಜ್ಜಿಗೆ, ಶುದ್ದಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಬೆಳಗಿನಿಂದಲೇ ನಿರಂತರ ದಾಸೋಹದ ವ್ಯವಸ್ಥೆಯಿದೆ.
ಶ್ರೀಗಳ ಸ್ಮರಣಾರ್ಥ ಪಟ್ಟಣದಲ್ಲಿ ಶ್ರೀಗಳವರ ಪುತ್ಥಳಿ ನಿರ್ಮಾಣ ಅಥವಾ ಯಾವುದಾದರೂಂದು ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡುವ ನಿಟ್ಟಿನಲ್ಲಿ ಶಾಸಕರ ಗಮನಕ್ಕೆ ತರಲಾಗಿದ್ದು ಆ ನಿಟ್ಟಿನಲ್ಲಿ ಪಕ್ಷಭೇದ ಮರೆತು ತಾಲ್ಲೂಕಿನ ಎಲ್ಲಾ ಮುಖಂಡರುಗಳು, ನಾಗರೀಕರು ಸೇರಿದಂತೆ ತಾಲ್ಲೋಕಿನಾದ್ಯಂತ ಶಿವಶರಣ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೋಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಶ್ರೀಶ್ರೀಶ್ರೀ ಶಿವಕುಮಾರಮಹಾಸ್ವಾಮೀಜಿಗಳ ಜನ್ಮಜಯಂತಿ ಆಚರಣಾ ಸಮಿತಿ ವಿನಂತಿಸಿದೆ.
ಈ ಸಂದರ್ಭದಲ್ಲಿ ಪ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಯಜಮಾನ್ ಮಹೇಶ್, ದುಂಡ ರೇಣುಕಪ್ಪ, ಅರಳೀಕೆರೆ ಲೋಕೇಶ್, ನವೀನ್ ಬಾಬು, ವೀರೇಂದ್ರ ಪಾಟೀಲ್, ನಟೇಶ್, ಶಿವಾನಂದ್, ಶಂಕರಪ್ಪ, ಜಯಣ್ಣ, ರೇಣುಕೇಶ್, ವಿಕ್ಕಿ, ಶಿವರಾಜು, ಕುಮಾರಯ್ಯ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
